ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ನೀಡುವ ಕೇಂದ್ರ ಗೃಹ ಸಚಿವಾಲಯದ ಪದಕಕ್ಕೆ ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸದ್ಯ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಸಿಬಿಐ, ಎನ್ ಸಿಬಿ ಸೇರಿ 151 ಅಧಿಕಾರಿಗಳನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಪಟ್ಟಿ ಬಿಡುಗಡೆಯಾಗಿದೆ.
ಈ ಸಾಲಿನಲ್ಲಿ ಕರ್ನಾಟಕದಿಂದ ಆರು ಅಧಿಕಾರಿಗಳು ಆಯ್ಕೆಯಾಗಿದ್ದು. ಪ್ರಸ್ತುತ ಲೋಕಾಯುಕ್ತ ಕಚೇರಿಯಲ್ಲಿ ಎಸ್ಪಿಯಾಗಿರುವ ಲಕ್ಷ್ಮೀ ಗಣೇಶ್, ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಹೆಸ್ಕಾಂ ಎಸ್ಪಿ ಶಂಕರ್ ಕೆ ಮರಿಹಾಳ್, ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರೇಗೌಡ ಪಾಟೀಲ್ ಮತ್ತು ಲೋಕಾಯುಕ್ತ ಡಿವೈಎಸ್ಪಿ ಎಂ. ಆರ್. ಗೌತಮ್ ಹಾಗೂ ದಾವಣಗೆರೆ ಬಸವನಗರ ಠಾಣೆಯ ಸಿಪಿಐ ಹೆಚ್ ಗುರುಬಸವರಾಜು ಪದಕಕ್ಕೆ ಆಯ್ಕೆಯಾಗಿದ್ದಾರೆ.