ಸಮಗ್ರ ನ್ಯೂಸ್: ಕಪ್ಪು ಹಣವನ್ನು ಭಾರತಕ್ಕೆ ತರುತ್ತೇವೆ ಎಂದು ಪ್ರಮುಖ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಮೋದಿ ಬಳಿಕ ಕಪ್ಪು ಹಣವನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಮೋದಿ ಆಡಳಿತದ ಅವಧಿಯಲ್ಲೇ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ ಗಣನೀಯವಾಗಿ ಹೆಚ್ಚಾಗಿರುವ ಸ್ಪೋಟಕ ಸತ್ಯ ಬಹಿರಂಗವಾಗಿದೆ.
ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಈ ಕುರಿತು ಮಾಹಿತಿಯನ್ನು ನೀಡಿದ್ದು, 2021ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ.ಗೆ ಏರಿಕೆ ಕಂಡಿದೆ. ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ.
2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂಪಾಯಿಗಳಷ್ಟಿತ್ತು. ಒಂದು ವರ್ಷದ ಅವಧಿಯಲ್ಲಿ ಅದು ಶೇಕಡಾ 50ರಷ್ಟು ಹೆಚ್ಚಿದೆ.
ಇದು ಸತತ ಎರಡನೇ ವರ್ಷ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು ಹೆಚ್ಚಾಗಿರುವಂತದ್ದು, ಭಾರತೀಯ ಗ್ರಾಹಕರ ಉಳಿತಾಯ ಅಥವಾ ಠೇವಣಿ ಖಾತೆಗಳಲ್ಲಿನ ಮೊತ್ತ 2021ರಲ್ಲಿ ಏಳು ವರ್ಷದಲ್ಲೇ ಗರಿಷ್ಠಕ್ಕೆ ಮೊತ್ತ ದಾಖಲಾಗಿದೆ ಎಂದು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿ ನೀಡಿದೆ.
ಕಪ್ಪು ಹಣವನ್ನು ವಾಪಾಸು ತರುವವರು ಅದನ್ನು ಹುಡುಕ್ತಾನೆ ಇದ್ದಾರೆ.