Ad Widget .

“ಓ ಮೈ ಗಾಡ್” ನಿಮ್ಮನ್ನು ಒಳಬಿಟ್ಟಿಲ್ವೇ? ಡೆನ್ಮಾರ್ಕ್ ನಲ್ಲಿ ಪತ್ರಕರ್ತರನ್ನು ಕಂಡು ತಬ್ಬಿಬ್ಬಾದ ಮೋದಿ

ಸಮಗ್ರ ನ್ಯೂಸ್: ಐವತ್ತಾರಿಂಚಿನ ಎದೆ ಎಂಬ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಗೆ ಪತ್ರಿಕಾಗೋಷ್ಟಿ ಕರೆಯುವಷ್ಟು ಎದೆಗಾರಿಕೆ ಇಲ್ಲ ಎನ್ನುವುದು ಆದಿಯಿಂದಲೂ ಪ್ರಧಾನಿ ಮೋದಿ ವಿಮರ್ಶಕರ ಆರೋಪ. ಅದಕ್ಕೆ ತಕ್ಕಂತೆ, ಇದುವರೆಗೂ ಒಂದು ಸಮರ್ಥ ಪತ್ರಕರ್ತರನ್ನೋ ಅಥವಾ ಪತ್ರಿಕಾಗೋಷ್ಟಿಯನ್ನೋ ಪ್ರಧಾನಿ ಮೋದಿ ಎದುರಿಸಿಲ್ಲ.

Ad Widget . Ad Widget . Ad Widget . Ad Widget .

ಬಹುಷ, ಹಿರಿಯ ಪತ್ರಕರ್ತ ಕರನ್‌ ಥಾಪರ್‌ ಜೊತೆಗಿನ ಸಂದರ್ಶನದಲ್ಲಿ ಅರ್ಧಕ್ಕೆ ಎದ್ದು ಹೋದ ಮೋದಿಯನ್ನು ಆ ಸಂದರ್ಶನದಲ್ಲೇ ಥಾಪರ್‌ ನೀರು ಕುಡಿಯುವಂತೆ ಮಾಡಿದ್ದರು. ಇದೀಗ, ಡೆನ್ಮಾರ್ಕ್‌ನಲ್ಲಿ ಒಂದಿಷ್ಟು ಪತ್ರಕರ್ತರು ಮೋದಿಯನ್ನು ಸುತ್ತುವರೆದು ಅಚಾನಕ್‌ ಪ್ರಶ್ನೆಗಳನ್ನು ಸುರಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಮೋದಿ “oh my god” ಎಂದು ಉದ್ಘರಿಸಿ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ.

Ad Widget . Ad Widget .

ಪ್ರಧಾನಿ ಮೋದಿ ಮಂಗಳವಾರ ಡೆನ್ಮಾರ್ಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಅನಿರೀಕ್ಷಿತವಾಗಿ ಎದುರುಗೊಂಡಿದ್ದಾರೆ. ಅವರು ಡೆನ್ಮಾರ್ಕ್‌ನಲ್ಲಿ ಶೃಂಗಸಭೆಗೆ ತೆರಳುತ್ತಿದ್ದಾಗ ವರದಿಗಾರರ ಗುಂಪು ಮೋದಿಯನ್ನು ಸುತ್ತುವರೆದಿದ್ದು, ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಪತ್ರಕರ್ತರನ್ನು ನೇರವಾಗಿ ಎದುರಿಸಿರದ ಮೋದಿ ತಬ್ಬಿಬ್ಬುಗೊಂಡಿದ್ದು, ಪತ್ರಕರ್ತರ ಪ್ರಶ್ನೆಗಳಿಂದ ತಪ್ಪಿಸಲು ಬರುವ ಪಾಡು ಈಗ ಸಾಮಾಜಿಕ ಮಾಧ್ಯಮದಲ್ಲಿ #OhMyGod ಹ್ಯಾಷ್‌ಟ್ಯಾಗ್‌ ನೊಂದಿಗೆ ಟ್ರೆಂಡ್‌ ಆಗಿದೆ.

ವೈರಲ್ ಕ್ಲಿಪ್ ಅನ್ನು ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ, “ಟೆಲಿಪ್ರಾಂಪ್ಟರ್ ಇಲ್ಲದ ಜೀವನ” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.

ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿ, “ಶ್ರೀ ಮೋದಿ ಜಿ ಸಂಪೂರ್ಣವಾಗಿ ದಡ್ಡ ಮತ್ತು ಭಯಭೀತರಾಗಿದ್ದಾರೆ. ಯೋಜಿತವಲ್ಲದ ಮಾಧ್ಯಮ ಸಂವಾದವನ್ನು ಎದುರಿಸಿದ ನಂತರ #OhMyGod ಪ್ರತಿಕ್ರಿಯಿಸುತ್ತಾರೆ. ಈಗ ಅವರು ಲೈವ್ ಪಿಸಿಯನ್ನು ಎದುರಿಸಬೇಕೇ ಎಂದು ಊಹಿಸಿ ” ಎಂದು ಬರೆದಿದ್ದಾರೆ.

Leave a Comment

Your email address will not be published. Required fields are marked *