Ad Widget .

ಕಡಲೆಕಾಯಿ ‌ಮಾರುತ್ತಾ ‘ಕಾಚಾ ಬಾದಾಮ್’ ಹಾಡು ಸೃಷ್ಟಿಸಿದ ಈತ ಈಗ ಮೀಡಿಯಾ ಟ್ರೆಂಡ್|

Ad Widget . Ad Widget .

ಈ ಸೋಶಿಯಲ್ ಮೀಡಿಯಾಕ್ಕಿಂತ‌ ಪವರ್ ಫುಲ್ ಮೀಡಿಯಾ ಬೇರೆ ಇಲ್ಲ. ಕ್ಷಣಾರ್ಧದಲ್ಲಿ ಒಬ್ಬ ಏನೂ ಅಲ್ಲದ ವ್ಯಕ್ತಿಯನ್ನು ಜಗತ್ತೇ ತಿರುಗಿ‌ ನೋಡುವಂತೆ ಮಾಡುತ್ತದೆ ಅದೇ ರೀತಿ ಫೇಮಸ್ ವ್ಯಕ್ತಿಯನ್ನು ಮಣ್ಣು ಮುಕ್ಕಿಸಿ ಬಿಡುತ್ತದೆ. ಹೌದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ಗಳಿಗೆಯಲ್ಲಿ ಬೇರೆ ಬೇರೆ ವಿಷಯಗಳು, ಮಾಹಿತಿಗಳು ಬರುತ್ತಲೇ ಇರುತ್ತದೆ.‌ ಅದೇ ರೀತಿ ಅದೆಷ್ಟೋ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತವೆ. ಯಾವುದೇ ಪೂರ್ವಗ್ರಹ ಕಾರಣ ಇಲ್ಲದೆ ಮನೋರಂಜನೆಗಾಗಿ ಮಕ್ಕಳ ಅಥವಾ ದೊಡ್ಡವರ ಚೇಷ್ಠೆಯ ಅದೇ‌ ರೀತಿ ಡ್ಯಾನ್ಸ್ ಮಾಡುವ, ಹಾಡು ಹೇಳುವ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಕೇವಲ‌ ಫನ್ ಗೋಸ್ಕರ ಶೇರ್ ಮಾಡಲಾಗುತ್ತದೆ.‌

Ad Widget . Ad Widget .

ಆದರೆ‌ ಕೊನೆಗೆ ಅದೇ ವಿಡಿಯೋ ಆ ವ್ಯಕ್ತಿಯನ್ನು ಒಬ್ಬ ಫೇಮಸ್ ವ್ಯಕ್ತಿಯನ್ನಾಗಿ ಮಾಡುತ್ತದೆ. ಇದೇ ರೀತಿ ಈ ಹಿಂದೆ ಬಚ್ ಪನ್ ಕಾ ಪ್ಯಾರ್ ಕಭಿ ಬೂಲ್‌‌ ನಹಿ ಜಾನರೇ ಎಂದು ಛತ್ತೀಸ್ಗಢ ದ ಸಹದೇವ್ ಕುಮಾರ್ ಅನ್ನುವವನ ಫನ್ ವಿಡಿಯೋ ಕೊನೆಗೆ ತುಂಬಾನೇ ಫೇಮಸ್ ಆಗಿ ಬಿಟ್ಟಿತ್ತು. ಆತನ‌‌ ಹಾಡು ರೀಲ್ಸ್ ಮಾಡುವವರ ಫೆವರಿಟ್ ಆಗಿಬಿಟ್ಟಿತ್ತು.‌ ಬಾಲಿವುಡ್‌ನತ್ತ ಹೋಗಿ ಸಂಗೀತ ದಿಗ್ಗಜರ ಜೊತೆ ಹಾಡುವ ಭಾಗ್ಯ ಕೂಡ ಆತನಿಗೆ ಒದಗಿ ಬಂದು‌ ಇದೀಗ ದೊಡ್ಡ ಸ್ಟಾರ್ ಆಗಿದ್ದಾನೆ. ಇದೇ ರೀತಿ ಇದೀಗ ಒಬ್ಬ ಕಡಲೆ ಕಾಯಿ ವ್ಯಾಪಾರಿ ಸ್ಟಾರ್ ಸಿಂಗರ್ ಆಗಿದ್ದಾರೆ.

ಹೌದು, ಇದೀಗ ಎಲ್ಲರ ಅಚ್ಚುಮೆಚ್ಚಿನ ಹಾಡು ಕಾಚ ಬಾದಮ್ ಅನ್ನುವ ಬೆಂಗಾಲಿ ಭಾಷೆಯ ಹಾಡು. ರೀಲ್ಸ್ ಗಳಲ್ಲಿ ಹೆಣ್ಮಕ್ಕಳು ಈ ಹಾಡಿಗೆ ಸಕತ್ ಸ್ಟೆಪ್ ಹಾಕಿ ಕುಣಿಯುತ್ತಿದ್ದಾರೆ. ಆದರೆ‌ ಹೆಚ್ಚಿನವರಿಗೆ ಇದರ ಸಿಂಗರ್ ಯಾರು, ಇದರ ಹಿನ್ನೆಲೆ‌ ಗೊತ್ತಿಲ್ಲ. ಪಶ್ಚಿಮ ಬಂಗಾಳದ ಸಣ್ಣ ಹಳ್ಳಿಯಲ್ಲಿ ಕಡು‌ಬಡ ಕುಟುಂಬದ ಬೂಬನ್ ಬಡಿಯಾಂಕರ್ ಅನ್ನುವಾತ ತನ್ನ‌ ಕೆ ಕಾಯಿ ವ್ಯಾಪಾರ ಚೆನ್ನಾಗಿ ಆಗಲಿ ಅನ್ನುವ ಕಾರಣಕ್ಕೆ ಈ‌‌ ಕಾಚ ಬಾದಮ್ ಹಾಡು ಹಾಡುತ್ತಿರುತ್ತಾನೆ. ಇದನ್ನು ಯಾರೋ ಒಬ್ಬ‌ರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿರುತ್ತಾರೆ.‌

ಅಷ್ಟೇ‌ ಬೂಬನ್‌ ಹಾಡು ಫೇಮಸ್ ಆಗಿ ಬಿಡುತ್ತದೆ. ರೀಲ್ಸ್ ನಲ್ಲಿ ಇದೇ ಹಾಡು ಎಲ್ಲರ‌ ಅಚ್ಚುಮೆಚ್ಚಿನದ್ದಾಗಿ‌ ಬಿಡುತ್ತದೆ.‌ ಇದರ ಪರಿಣಾಮವಾಗಿ ಬೂಬನ್‌ ಅವರನ್ನು‌ ಹುಡುಕುತ್ತಾ ಆಲ್ಬಂ‌ ಸಾಂಗ್, ರಿಮಿಕ್ಸ್ ಸಾಂಗ್ ಮಾಡಿಯೇ ಬಿಡುತ್ತಾರೆ. ಇದೀಗ ಯೂ ಟ್ಯೂಬ್ ನಲ್ಲಿ ಬೂಬನ್‌ ಅವರು ವಿಶೇಷ ಗೆಟಪಿನಲ್ಲಿ ರ್ಯಾಪರ್ ಆಗಿ‌ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಹಾಡಿನ ಮೂಲಕ ಸಾಕಷ್ಟು ಹಣ ಈತ ಗಳಿಸಿದ್ದಾರೆ. ಮೊದಲಿಗೆ ಸೈಕಲ್ ನಲ್ಲಿ ಬಾದಾಮ್ ಮಾಡುತ್ತಿದ್ದ ಈತ ಇದೀಗ ಬೈಕ್ ನಲ್ಲಿ ಮಾರಾಟ ಮಾಡುತ್ತಿದ್ದಾನೆ. ಯೂಟ್ಯೂಬ್ ಹಾಡಿಗೆ ದೊಡ್ಡ ಮೊತ್ತ ಇವರಿಗೆ ನೀಡಲಾಗಿದೆ.

Leave a Comment

Your email address will not be published. Required fields are marked *