ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನುಸರಿಸಿದ್ದರಿಂದ ಹೊರೆಯಾದ ವೆಚ್ಚ ಸರಿದೂಗಿಸಲು ಹಾಗೂ ಪರೀಕ್ಷಾ ಪ್ರಕ್ರಿಯೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಸ್ ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು 100 ರು. ಹೆಚ್ಚಿಸಿ ಶಿಕ್ಷಣ ಇಲಾಖೆ ದೇಶ ಹೊರಡಿಸಿದೆ.
ಅದರಿಂದಾಗಿ ಶುಲ್ಕ 485 ರು.ನಿಂದ 585 ರು.ಗೆ ಏರಿಕೆಯಾಗಿದೆ. ಪುನರಾವರ್ತಿತ ಶಾಲಾ, ಖಾಸಗಿ ಅಭ್ಯರ್ಥಿಗಳು ಒಂದು ವಿಷಯಕ್ಕೆ ಕಟ್ಟಬೇಕಿದ್ದ ಶುಲ್ಕವನ್ನು 320 ರಿಂದ 370 ಕ್ಕೆ ಹೆಚ್ಚಳ ಮಾಡಲಾಗಿದೆ. 2 ವಿಷಯಕ್ಕೆ 386 ರು. ಪಾವತಿಸಬೇಕಿದ್ದ ವಿದ್ಯಾರ್ಥಿಗಳು 461 ರು. ಹಾಗೂ 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 520 ರು. ಬದಲಿಗೆ 620 ರು. ಶುಲ್ಕ ಪಾವತಿಸಬೇಕಿದೆ.