February 2026

ಶಶಿತರೂರ್ ಪುತ್ರನಿಗೂ ಕಾಡಿದ ‘ಲೇ ಆಫ್’ ಬಿಸಿ| ಇಶಾನ್ ತರೂರ್ ಸೇರಿ 500 ಮಂದಿಯನ್ನು ಕಿತ್ತೊಗೆದ ವಾಷಿಂಗ್ಟನ್‌ ಪೋಸ್ಟ್‌

ಸಮಗ್ರ ನ್ಯೂಸ್: ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಒಡೆತನದ ವಾಷಿಂಗ್ಟನ್‌ ಪೋಸ್ಟ್‌, ಇತ್ತೀಚಿಗೆ ಸಂಸ್ಥೆಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದೆ. ಸ್ಥಳೀಯ ವರದಿಗಾರರು, ಕ್ರೀಡಾ ವಿಭಾಗ, ವಿದೇಶಿ ಬ್ಯುರೋಗಳು ಮತ್ತು ವ್ಯಾಪಾರ ವಿಭಾಗದ ಅನೇಕ ಪತ್ರಕರ್ತರನ್ನು ವಾಷಿಂಗ್ಟನ್ ಪೋಸ್ಟ್‌ ಕೆಲಸದಿಂದ ವಜಾಗೊಳಿಸಿದೆ. ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್‌ ಅವರ ಪುತ್ರ ಇಶಾನ್‌ ತರೂರ್‌ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ. ವಾಷಿಂಗ್ಟನ್‌ ಪೋಸ್ಟ್‌ನ […]

ಶಶಿತರೂರ್ ಪುತ್ರನಿಗೂ ಕಾಡಿದ ‘ಲೇ ಆಫ್’ ಬಿಸಿ| ಇಶಾನ್ ತರೂರ್ ಸೇರಿ 500 ಮಂದಿಯನ್ನು ಕಿತ್ತೊಗೆದ ವಾಷಿಂಗ್ಟನ್‌ ಪೋಸ್ಟ್‌ Read More »

ಅಬುದಾಭಿ ಲೈವ್ ಡ್ರಾದಲ್ಲಿ ₹49ಕೋಟಿ ಗೆದ್ದ ಉಡುಪಿಯ ಶಂತನು

ಸಮಗ್ರ ನ್ಯೂಸ್: ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ. ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಮಸ್ಕತ್‌ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದಾರೆ. ಜ.20 ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಆದರೆ ಶಂತನು ತನ್ನ

ಅಬುದಾಭಿ ಲೈವ್ ಡ್ರಾದಲ್ಲಿ ₹49ಕೋಟಿ ಗೆದ್ದ ಉಡುಪಿಯ ಶಂತನು Read More »

ಖೇಮ್ ಚಂದ್ ಮಣಿಪುರದ ನೂತನ ಸಿಎಂ

ಸಮಗ್ರ ನ್ಯೂಸ್: ಬಿಜೆಪಿ ನಾಯಕ ವೈ.ಖೇಮಚಂದ್ ಸಿಂಗ್ (62) ಅವರು ಮಣಿಪುರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ, ಸಿಂಗ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಕುಕಿ ಸಮುದಾಯದ ಮಹಿಳಾ ನಾಯಕಿ, ಬಿಜೆಪಿ ಶಾಸಕಿ ನೆಮ್ಚಾ ಕಿಪ್ಗೆನ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕರಾದ ಎಲ್‌. ದಿಖೂ ಅವರೂ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ಗೋವಿಂದಾಸ್‌ ಕೋಂಥೌಜಾಮ್ ಹಾಗೂ ಎನ್‌ಪಿಪಿಯ ಲೋಕೆನ್ ಸಿಂಗ್‌ ಅವರೂ ಸಚಿವರಾಗಿ ಪದಗ್ರಹಣಗೊಂಡಿದ್ದಾರೆ.

ಖೇಮ್ ಚಂದ್ ಮಣಿಪುರದ ನೂತನ ಸಿಎಂ Read More »

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಗಂಭೀರ ರಾಜಕೀಯ ಚರ್ಚೆ ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪ ಹಾಗೂ ಅಸಭ್ಯ ಭಾಷೆಯ ಬಳಕೆಯಿಂದ ಸಂಪೂರ್ಣ ನಿಯಂತ್ರಣ ತಪ್ಪಿದಂತಾಯಿತು. ನೂರು ಪ್ರತಿಶತ ಹಣ ಲೂಟಿ ನಡೆದಿದೆ ಎಂದು ಆರೋಪಿಸಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು. “ನೂರಕ್ಕೆ ನೂರರಷ್ಟು ಹಣ ಹೊಡೆದಿರೋದು ಸತ್ಯ. ಆ ಮಂತ್ರಿ ಮೊದಲು ರಾಜೀನಾಮೆ ನೀಡಿ

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ Read More »

ಜಾತಕ ತೋರಿಸಲು ಬಂದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ| ದಲಿತ ಸಂತ್ರಸ್ತೆಯಿಂದ ಪೊಲೀಸ್ ದೂರು

ಸಮಗ್ರ ನ್ಯೂಸ್: ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಯುವತಿಯ ಮೇಲೆ ದೇವಸ್ಥಾನದ ಅರ್ಚಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಲಜ್ಜೆಗೆಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜಾತಕ ದೋಷದ ಹೆಸರಲ್ಲಿ ಯುವತಿಯನ್ನು ನಂಬಿಸಿ ವಂಚಿಸಿದ ಅರ್ಚಕ ಕೃಷ್ಣರಾವ್ ಎಂಬಾತನನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ. ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕನಾಗಿದ್ದ ಕೃಷ್ಣರಾವ್ ಬಳಿ 23 ವರ್ಷದ ಯುವತಿ ತನ್ನ ಮದುವೆ ವಿಚಾರವಾಗಿ ಜಾತಕ ತೋರಿಸಲು ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ

ಜಾತಕ ತೋರಿಸಲು ಬಂದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ| ದಲಿತ ಸಂತ್ರಸ್ತೆಯಿಂದ ಪೊಲೀಸ್ ದೂರು Read More »

ಟೀ ಕಪ್ ಹಿಡಿದುಕೊಂಡು ನಗುವ ಈ ವೈರಲ್ ಹುಡುಗ ಯಾರು? ಇಲ್ಲಿದೆ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿದ ಈತನ ಫುಲ್ ಡೀಟೈಲ್ಸ್ ಇಲ್ಲಿದೆ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ನೀವು ಇನ್ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ರೀಲ್ಸ್ ನೋಡುವಾಗ ಕೈಯಲ್ಲಿ ಟೀ ಕಪ್ ಹಿಡಿದು ನಗುವ ಒಬ್ಬ ಹುಡುಗನ ವಿಡಿಯೋ ಖಂಡಿತ ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಈ ಹುಡುಗ ಯಾರು? ಆತ ಎಲ್ಲಿಯವನು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಈ ವೈರಲ್ ಹುಡುಗನ ಹೆಸರು ಅರುಣ್. ಈತ ದಕ್ಷಿಣ ಭಾರತದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಲಪಲ್ಲಿ ಜಿಲ್ಲೆಯ ನಾಲಪು ಚಟುಪಲ್ಲಿ ಎಂಬ ಹಳ್ಳಿಯವನು. ವಿಡಿಯೋ ವೈರಲ್ ಆಗಿದ್ದು ಹೇಗೆ?: ಅರುಣ್ ಲಾರಿಯಲ್ಲಿ ಸಹಾಯಕನಾಗಿ

ಟೀ ಕಪ್ ಹಿಡಿದುಕೊಂಡು ನಗುವ ಈ ವೈರಲ್ ಹುಡುಗ ಯಾರು? ಇಲ್ಲಿದೆ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿದ ಈತನ ಫುಲ್ ಡೀಟೈಲ್ಸ್ ಇಲ್ಲಿದೆ… Read More »

ಹಿಂದುತ್ವದ ಬಗ್ಗೆ ಮಾತನಾಡುವವರು ಸಾಂಪ್ರದಾಯಿಕ ಕೋಳಿ ಅಂಕದ ಕುರಿತು ಯಾಕೆ ಮಾತಾಡ್ತಿಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಕೋಳಿ ಅಂಕದ ವಿಚಾರದಲ್ಲಿ ಈಗ ಎಲ್ಲಿದ್ದಾರೆ. ಎಲ್ಲರೂ ಬರಬೇಕಿತ್ತಲ್ಲಾ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು. ತುಳುನಾಡ ಆಚರಣೆ, ಸಂಪ್ರದಾಯ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯು ಕೊಟೆಚಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ದೇವಸ್ಥಾನ, ದೈವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆದು ಬಂದಿದೆ. ಆದರೆ ಹಿಂದುತ್ವದ ಬಗ್ಗೆ ಮಾತನಾಡುವವರು ಯಾರು ಬಂದಿಲ್ಲ. ಜೂಜು ರಹಿತ

ಹಿಂದುತ್ವದ ಬಗ್ಗೆ ಮಾತನಾಡುವವರು ಸಾಂಪ್ರದಾಯಿಕ ಕೋಳಿ ಅಂಕದ ಕುರಿತು ಯಾಕೆ ಮಾತಾಡ್ತಿಲ್ಲ – ಅಶೋಕ್ ರೈ Read More »

ದಕ್ಷಿಣ ಕನ್ನಡದಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಕ ಕೋಳಿ ಅಂಕಕ್ಕಾಗಿ ಹೋರಾಟ ಪ್ರಾರಂಭವಾಗಿದ್ದು, ಕೋಳಿ ಅಂಕ ಬೇಕು ಎಂದು ಇದೀಗ ನ್ಯಾಯಾಲಯದ ಮೆಟ್ಟಿಲೇರಲು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.ಇದರೊಂದಿಗೆ ಕಂಬಳ ರೀತಿಯಲ್ಲೇ ಮತ್ತೊಂದು ಹೋರಾಟಕ್ಕೆ ಕರಾವಳಿ ಮುಂದಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕ ನಡೆಸಲು ಪೋಲೀಸರ ನಿರ್ಬಧಿಸಿದ ಹಿನ್ನೆಲೆ.ಇದೀಗ ಕೋಳಿ ಅಂಕಕ್ಕಾಗಿ ಹೋರಾಟ ಪ್ರಾರಂಭವಾಗಿದೆ. ಈ ಹಿನ್ನಲೆ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿಯ ಸಭೆ ಫೆಬ್ರವರಿ 1 ರಂದು ಪುತ್ತೂರಿನಲ್ಲಿ ಸಭೆ ಸೇರಿದ್ದು, ಈ ವೇಳೆ

ದಕ್ಷಿಣ ಕನ್ನಡದಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ಕೋರ್ಟ್ ಮೆಟ್ಟಿಲೇರಲು ನಿರ್ಧಾರ Read More »

ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಸಿದ ಅಮೇರಿಕಾ| ಟ್ರಂಪ್ ಗೆ ಧನ್ಯವಾದ ತಿಳಿಸಿದ ಮೋದಿ

ಸಮಗ್ರ ನ್ಯೂಸ್: ಭಾರತದ ಮೇಲಿನ ಸುಂಕವನ್ನು ಶೇ. 25 ರಿಂದ ಶೇ. 18 ಕ್ಕೆ ಇಳಿಸಲು ವಾಷಿಂಗ್ಟನ್ ನಿರ್ಧರಿಸಿದೆ ಎಂದು ಘೋಷಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಟ್ರಂಪ್ ಅವರ ನಾಯಕತ್ವ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತ-ಯುಎಸ್ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಅವರೊಂದಿಗೆ

ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಸಿದ ಅಮೇರಿಕಾ| ಟ್ರಂಪ್ ಗೆ ಧನ್ಯವಾದ ತಿಳಿಸಿದ ಮೋದಿ Read More »

ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ| ತಪ್ಪಿದ ಭಾರ ದುರಂತ

ಸಮಗ್ರ ನ್ಯೂಸ್: ಕಳೆದ ವರ್ಷದ ಅಹಮದಾಬಾದ್‌ನಲ್ಲಿ ನಡೆದಿದ್ದ ವಿಮಾನ ಅಪಘಾತದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಸೋಮವಾರ ಲಂಡನ್‌ನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ ಎಂದು ವರದಿಯಾಗಿದೆ. ಏರ್‌ ಇಂಡಿಯಾ ಬೋಯಿಂಗ್‌ 787-8 ವಿಮಾನದ ತಪಾಸಣೆ ವೇಳೆ ದೋಷ ಕಂಡುಬಂದಿದೆ. ಕೂಡಲೇ ಹಾರಾಟವನ್ನು ರದ್ದುಪಡಿಸಲಾಯಿತು ಮೂಲಗಳು ತಿಳಿಸಿವೆ. ನಮ್ಮ ಪೈಲಟ್‌ ಒಬ್ಬರು ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಂಭವನೀಯ ದೋಷವನ್ನು ವರದಿ ಮಾಡಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ

ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ| ತಪ್ಪಿದ ಭಾರ ದುರಂತ Read More »