February 2026

ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತ| ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಹಗುರ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ. ಮಲೆನಾಡಲ್ಲಿಯೂ 2-3 ದಿನಗಳಲ್ಲಿ ಮಳೆಯಾಗಿವ ಮುನ್ಸೂಚನೆ ಇದ್ದು, ಕಾಫಿ ಬೆಳೆಗಾರರಿಗೆ ಇದು ಸಿಹಿಸುದ್ದಿಯಾಗಿದೆ.ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಉಡುಪಿ ಮತ್ತು ಉತ್ತರ […]

ಶ್ರೀಲಂಕಾ ಕರಾವಳಿಯಲ್ಲಿ ವಾಯುಭಾರ ಕುಸಿತ| ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಹಗುರ ಮಳೆ ಸಾಧ್ಯತೆ Read More »

ಸಾರಿಗೆ ಸಿಬ್ಬಂದಿಗಳ 26 ತಿಂಗಳ ಹಿಂಬಾಕಿ ನೀಡಲು ನಿರ್ಧಾರ

ಸಮಗ್ರ ನ್ಯೂಸ್: ಸಾರಿಗೆ ನಿಗಮಗಳ ಸಿಬ್ಬಂದಿಗೆ 26 ತಿಂಗಳ ವೇತನ ಹಿಂಬಾಕಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. 2024ರ ಜನವರಿ 1ರಿಂದ ಆಗಬೇಕಿದ್ದ ಪರಿಷ್ಕೃತ ವೇತನ ವಿಚಾರಕ್ಕೆ ಸಂಬಂಧಿಸಿದಂತೆ 2025ರ ಮಾರ್ಚ್ 1 ರಿಂದ ವೇತನ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಜಾರಿ ಮಾಡಲಾಗಿದೆ. ಸಾರಿಗೆ ನಿಗಮಗಳ ಸಿಬ್ಬಂದಿ ಒತ್ತಾಯಕ್ಕೆ ಸ್ಪಂದಿಸಿದ ಸರ್ಕಾರ ಸಾರಿಗೆ ನಿಗಮಗಳ ಸಿಬ್ಬಂದಿಗೆ 26 ತಿಂಗಳ ವೇತನ

ಸಾರಿಗೆ ಸಿಬ್ಬಂದಿಗಳ 26 ತಿಂಗಳ ಹಿಂಬಾಕಿ ನೀಡಲು ನಿರ್ಧಾರ Read More »

ಭಾರೀ ಕುಸಿತ ಕಾಣಲಿದೆಯಾ ಬಂಗಾರದ ದರ? ಇಲ್ಲಿದೆ ಆಭರಣ ಪ್ರಿಯರಿಗಾಗಿ ಗುಡ್ ನ್ಯೂಸ್!!

ಸಮಗ್ರ ನ್ಯೂಸ್: ಅನಿಶ್ಚಿತ ಪರಿಸ್ಥಿತಿಯ ನಡುವೆಯೇ, ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಂಗಾರದ ದರವು ಎಂಟು ಗ್ರಾಂಗೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ. ಇಂದು ಫೆಬ್ರವರಿ 17ರಂದು 22ಕ್ಯಾರಟ್ ಎಂಟು ಗ್ರಾಂ ದರ 1,13,080 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ 8 ಗ್ರಾಂ ಬೆಲೆ 1,23,360 ರೂಪಾಯಿ ಇದೆ. ಇದು ದಾಖಲೆಯ ಹಂತದಲ್ಲಿ ಇಳಿಕೆ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಖರೀದಾರರಿಗೆ ಖುಷಿ ತಂದರೆ, ಹೂಡಿಕೆದಾರರನ್ನು

ಭಾರೀ ಕುಸಿತ ಕಾಣಲಿದೆಯಾ ಬಂಗಾರದ ದರ? ಇಲ್ಲಿದೆ ಆಭರಣ ಪ್ರಿಯರಿಗಾಗಿ ಗುಡ್ ನ್ಯೂಸ್!! Read More »

ಕಡಬ: ಗುಂಡೇಟಿನಿಂದ ಬಾಲಕನ ಸಾವು ಪ್ರಕರಣ| ತಂದೆಯ ಕೈಗೂ ಗುಂಡು ತಗುಲಿತ್ತು| ವೈದ್ಯಕೀಯ ವರದಿಯಲ್ಲಿ ಅಚ್ಚರಿಯ ತಿರುವು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದಲ್ಲಿ ಜನವರಿ 24 ರಂದು ನಡೆದ 17 ವರ್ಷದ ಬಾಲಕ ಮೋಕ್ಷ್ ಎಂಬಾತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ವೈದ್ಯಕೀಯ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಮೋಕ್ಷ್ ತನ್ನ ತಂದೆಗೆ ಚಾಕುವಿನಿಂದ ಇರಿದು ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ವರದಿಯು ಈ ಘಟನೆಗೆ ಹೊಸ ಆಯಾಮ ನೀಡಿದ್ದು, ತಂದೆ ವಸಂತ ಅಮೀನ್ ಅವರಿಗೆ ಹೊಟ್ಟೆಯ ಭಾಗಕ್ಕೆ

ಕಡಬ: ಗುಂಡೇಟಿನಿಂದ ಬಾಲಕನ ಸಾವು ಪ್ರಕರಣ| ತಂದೆಯ ಕೈಗೂ ಗುಂಡು ತಗುಲಿತ್ತು| ವೈದ್ಯಕೀಯ ವರದಿಯಲ್ಲಿ ಅಚ್ಚರಿಯ ತಿರುವು Read More »

ಅಂತಿಮ ವರದಿ ಬಂದ ಮೇಲೆಯೇ ಧರ್ಮಸ್ಥಳ ಪ್ರಕರಣ ನಿರ್ಧಾರ – ಪರಂ

ಸಮಗ್ರ ನ್ಯೂಸ್: ‘ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸದ್ಯ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ತನಿಖೆಯ ಅಂತಿಮ ವರದಿ ಕೈಸೇರದೇ ಈ ಕುರಿತು ಯಾವುದೇ ನಿರ್ಣಯಕ್ಕೂ ಬರಲಾಗದು’ ಎಂದು ಗೃಹಸಚಿವ ಜಿ.ಪರಮೇಶ್ವರ ಮಂಗಳವಾರ ಮಂಗಳೂರಿನಲ್ಲಿ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆದಷ್ಟು ಬೇಗ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಸೂಚಿಸಿದ್ದೇನೆ. ವರದಿ ಸಲ್ಲಿಕೆಯಾದಂತೆ ಸಂಪುಟ ಸಭೆಯಲ್ಲಿ ಮಂಡಿಸಲಿದ್ದೇನೆ’ ಎಂದರು. ‘ಕೋಮು ಹಿಂಸಾಚಾರದ ಘಟನೆಗಳ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಂಪನಿಗಳು

ಅಂತಿಮ ವರದಿ ಬಂದ ಮೇಲೆಯೇ ಧರ್ಮಸ್ಥಳ ಪ್ರಕರಣ ನಿರ್ಧಾರ – ಪರಂ Read More »

ಹಿಂದೂವಿನಂತೆ ವೇಷ ಧರಿಸಿ ಯುವತಿಯೊಂದಿಗೆ ಮಹಾಕಾಲನ ದರ್ಶನಕ್ಕೆ ಬಂದ ಮುಸ್ಲಿಂ ಯುವಕನಿಗೆ ಥಳಿತ

ಸಮಗ್ರ ನ್ಯೂಸ್: ಹಿಂದೂ ಭಕ್ತರಂತೆ ಹಣೆಗೆ ವಿಭೂತಿ ಕತ್ತಿಗೆ ರುದ್ರಾಕ್ಷಿ ಧರಿಸಿ ಹಿಂದೂ ಯುವತಿಯೊಂದಿಗೆ ಹಿಂದೂ ತೀರ್ಥಕ್ಷೇತ್ರ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆಯಲು ಬಂದ ಮುಸ್ಲಿಂ ಯುವಕನನ್ನು ಭಜರಂಗದಳದ ಯುವಕರು ಥಳಿಸಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕ ಇಬ್ಬರು ಪಂಜಾಬ್‌ನ ಮೊಹಾಲಿಯವರಾಗಿದ್ದು, ಉಜ್ಜಯಿನಿಯ ಹೊಟೇಲೊಂದರಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿದ್ದರು. ಈ ವಿಚಾರ ಭಜರಂಗದಳದವರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಭಜರಂಗದಳದವರು ಆ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರಂಭದಲ್ಲಿ ಆ

ಹಿಂದೂವಿನಂತೆ ವೇಷ ಧರಿಸಿ ಯುವತಿಯೊಂದಿಗೆ ಮಹಾಕಾಲನ ದರ್ಶನಕ್ಕೆ ಬಂದ ಮುಸ್ಲಿಂ ಯುವಕನಿಗೆ ಥಳಿತ Read More »

ಶಬರಿಮಲೆಗೆ ತೆರಳಿದ್ದ ಬೆಳ್ತಂಗಡಿಯ ಯುವಕ ಹೃದಯಾಘಾತದಿಂದ ಸಾವು

ಸಮಗ್ರ ವಾರ್ತೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಬೆಳ್ತಂಗಡಿಯ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಶಬರಿಮಲೆಯಲ್ಲಿ ನಡೆದಿದೆ. ಮೃತನನ್ನು ತೆಕ್ಕಾರು ಯುವಕ ಸುಧೀರ್ ತೆಕ್ಕಾರು ( 28) ಎಂದು ಗುರುತಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖ ಆಗಿದ್ದ ಸುಧೀರ್ ಅವರು ಫ್ರೆಂಡ್ಸ್ ತೆಕ್ಕಾರು ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಸಮಾಜಸೇವೆ ಮಾಡುತ್ತಿದ್ದರು.

ಶಬರಿಮಲೆಗೆ ತೆರಳಿದ್ದ ಬೆಳ್ತಂಗಡಿಯ ಯುವಕ ಹೃದಯಾಘಾತದಿಂದ ಸಾವು Read More »

ಇಂದು (ಫೆ.17) ಕಂಕಣ ಸೂರ್ಯಗ್ರಹಣ

ಸಮಗ್ರ ನ್ಯೂಸ್: ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ‘ಕಂಕಣ ಸೂರ್ಯಗ್ರಹಣ’ವಾಗಿರಲಿದೆ ಎಂಬುದು ವಿಶೇಷವಾಗಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುವ ಸಂದರ್ಭದಲ್ಲಿ ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸುತ್ತಾ ಉಂಗುರದಂತೆ ಕಾಣಿಸುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಮತ್ತು ಮುಖ್ಯವಾಗಿ ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗೂ ಅಟ್ಲಾಂಟಿಕ್ ಸಾಗರದ ಕೆಲ ಪ್ರದೇಶಗಳಲ್ಲಿ ಮಾತ್ರ ಭಾಗಶಃ ಅಥವಾ ಸಂಪೂರ್ಣವಾಗಿ ಕಾಣಲಿದೆ. ಭಾರತದಲ್ಲಿನ ಸಾರ್ವಜನಿಕರಿಗೆ ಗ್ರಹಣಕ್ಕೆ ಸಂಬಂಧಿಸಿದ ಯಾವುದೇ ಸೂತಕ ಅಥವಾ ದೈನಂದಿನ

ಇಂದು (ಫೆ.17) ಕಂಕಣ ಸೂರ್ಯಗ್ರಹಣ Read More »

ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

ಸಮಗ್ರ ನ್ಯೂಸ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ವಿಧಿವಶರಾಗಿದ್ದಾರೆ. ಬೆಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಟಿ ರಶ್ಮಿ ಲೀಲಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಶ್ಮಿ ಲೀಲಾ ಸುಮಾರು ಹಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ನಿಧನದ ವಿಚಾರವನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ರಶ್ಮಿ ಲೀಲಾ ಅವರು 2019ರಿಂದ ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಹಂತಹಂತವಾಗಿ ಮುಂದುವರಿದು

ಕಿರುತೆರೆ ನಟಿ ರಶ್ಮಿ ಲೀಲಾ ನಿಧನ Read More »

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ಅನುದಾನದ ವಿಚಾರದಲ್ಲಿ ಕಾಂಗ್ರೆಸ್ಸಿಗರು ಸುಳ್ಳಿನ ಮೇಲೆ ಹೇಳುತ್ತಾ ತಿರುಗಾಡುತ್ತಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಒಂದೊಂದು ಸುಳ್ಳಿನಿಂದ ಅವರ ಬಟ್ಟೆ ಬಿಚ್ಚುತ್ತೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಾಯಿ ಬಿಟ್ಟರೆ ಬರೇ ಸುಳ್ಳುನ್ನೇ ಹೇಳೋ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಾಕತ್ ಅಂತ ಇದ್ರೆ ನಮ್ಮ ವೇದಿಕೆಗೆ ಬಂದು ಯಾವೆಲ್ಲ ಅನುದಾನ

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ Read More »