January 2026

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಡಾ| ಜಯಮಾಲಾ ಆಯ್ಕೆ

ಸಮಗ್ರ ನ್ಯೂಸ್: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಫಿಲಂ ಚೇಂಬರ್) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ. 170 ಮತಗಳ ಅಂತರದಿಂದ ನಟಿ ಜಯಮಾಲಾ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಎದುರಾಳಿ ಭಾ.ಮಾ ಹರೀಶ್ 334 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಅವರು ಎರಡನೇ ಬಾರಿ ಫಿಲಂ ಚೇಂಬರ್​​ನ ಅಧ್ಯಕ್ಷರಾಗಲಿದ್ದಾರೆ. 2008ರಲ್ಲಿ […]

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಡಾ| ಜಯಮಾಲಾ ಆಯ್ಕೆ Read More »

ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಸಹಿಸಲಾಗದು – ಹೈಕೋರ್ಟ್| ಬೆಳ್ತಂಗಡಿಯ ‘ಭಜರಂಗಿ ಗೋಕಳ್ಳರು’ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಕಿಡಿ

ಸಮಗ್ರ ನ್ಯೂಸ್:  ‘ಭಜರಂಗಿ ಗೋ ಕಳ್ಳರು’ ಹೆಸರಿನಲ್ಲಿ ವಾಟ್ಸ್‌ ಆ್ಯಪ್ ಗ್ರೂಪ್‌ ರಚಿಸಿ ಅದರಲ್ಲಿ, ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿಯ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌, ‘ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗುವುದಿಲ್ಲ’ ಎಂದು ಕಿಡಿ ಕಾರಿದೆ. ‘ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಾಯ ಗ್ರಾಮದ ಸಿರಾಜುದ್ದೀನ್‌ ಬಿನ್‌ ಮೊಹಮದ್‌ ಇಸ್ಮಾಯಿಲ್‌ (30)

ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಸಹಿಸಲಾಗದು – ಹೈಕೋರ್ಟ್| ಬೆಳ್ತಂಗಡಿಯ ‘ಭಜರಂಗಿ ಗೋಕಳ್ಳರು’ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಕಿಡಿ Read More »

ಕುಸಿತ ಕಂಡ ಚಿನ್ನದ ದರ| ಇಂದಿನ ಮಾರುಕಟ್ಟೆ ಹೀಗಿದೆ…

ಸಮಗ್ರ ನ್ಯೂಸ್: ಭಾರತದಲ್ಲಿ ಇಂದು ಹಲವು ದಿನಗಳ ಬಳಿಕ ಚಿನ್ನದ ಬೆಲೆ (Gold Rate India) ಭಾರೀ ಇಳಿಕೆ ಕಂಡಿದೆ. 24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಬರೋಬ್ಬರಿ ₹862 ರೂ. ಇಳಿಕೆಯಾಗಿದೆ. ಅಂದರೆ 1 ಗ್ರಾಂ ಬೆಲೆ ₹16,058 ರೂ. ಆಗಿದ್ದು, ನಿನ್ನೆ ₹16,920 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,28,464 ರೂ. ಆಗಿದ್ದು, ನಿನ್ನೆ ₹1,35,360 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 6,896 ರೂ. ಕುಸಿತ

ಕುಸಿತ ಕಂಡ ಚಿನ್ನದ ದರ| ಇಂದಿನ ಮಾರುಕಟ್ಟೆ ಹೀಗಿದೆ… Read More »

ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ಬ್ರೇಕ್| ಸಾರಿಗೆ ಸಚಿವರಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಸರ್ಕಾರಿ ಬಸ್​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತಿಯೊಂದು ಸರ್ಕಾರಿ ಬಸ್​​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್​ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಆದಾಯ

ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ಬ್ರೇಕ್| ಸಾರಿಗೆ ಸಚಿವರಿಂದ ಮಹತ್ವದ ಆದೇಶ Read More »

ಪುತ್ತೂರು: ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ನಡೆಯಲಿದೆ ಬೃಹತ್ ಹೋರಾಟ| ಫೆ.1ರಂದು ಸಮಾಲೋಚನಾ ಸಭೆ

ಸಮಗ್ರ ನ್ಯೂಸ್: ಜೂಜಿನ ನೆಪವೊಡ್ಡಿ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಈ ಬಾರಿ ಯಾವುದೇ ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸದಂತೆ ತಡೆದಿದ್ದು, ಇದೀಗ ಸಾಂಪ್ರದಾಯಿಕ ಕೋಳಿ ಅಂಕ ಉಳಿಸುವ ನಿಟ್ಟಿನಲ್ಲಿ ಹೋರಾಟಗಾರರು ಮುಂದಾಗಿದ್ದು, ಫೆಬ್ರವರಿ 1 ರಂದು ಪುತ್ತೂರಿನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ದಕ್ಷಿಣಕನ್ನಡ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಕೋಳಿ ಅಂಕಕ್ಕೆ ತಡೆ ಒಡ್ಡುತ್ತಿರುವ ಸರಕಾರ ಮತ್ತು ಪೊಲೀಸ ಇಲಾಖೆ ವಿರುದ್ದ ಇದೀಗ ಹೋರಾಟಕ್ಕೆ ಮುಂದಾಗಿದೆ. ಈ ಹಿನ್ನಲೆ ಫೆಬ್ರವರಿ 1ರಂದು ಪುತ್ತೂರಿನಲ್ಲಿ ‘ಕೋಳಿ ಅಂಕ’ಕ್ಕಾಗಿ

ಪುತ್ತೂರು: ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ನಡೆಯಲಿದೆ ಬೃಹತ್ ಹೋರಾಟ| ಫೆ.1ರಂದು ಸಮಾಲೋಚನಾ ಸಭೆ Read More »

ಪದೇ ಪದೇ ಐಟಿ ದಾಳಿ| ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ| ಸಿ.ಜೆ ರಾಯ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ರಾವ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದರು. ಇಂದು ಸಂಜೆ ಬೆಂಗಳೂರಿನ ಆನೇಪಾಳ್ಯದಲ್ಲಿರೋ ತಮ್ಮ ಕಚೇರಿಯಲ್ಲಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಪದೇ ಪದೇ ಐಟಿ ದಾಳಿ| ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ| ಸಿ.ಜೆ ರಾಯ್ ಆತ್ಮಹತ್ಯೆ Read More »

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್ ಪೆಕ್ಟರ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಭ್ರಷ್ಟ ಅಧಿಕಾರಿಗಳ ಭೇಟೆ ಮುಂದುವರಿಸಿರುವ ಕರ್ನಾಟಕ ಲೋಕಾಯುಕ್ತ ಪೊಲೀಸರು, ಇಂದು ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಠಾಣೆಗೆ ಬಂದ ದೂರುದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚೀಟಿ ವ್ಯವಹಾರಕ್ಕೆ (Chit Fund Business) ಸಂಬಂಧಿಸಿದ ಪ್ರಕರಣವೊಂದು ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಇತ್ಯರ್ಥಪಡಿಸಲು ಅಥವಾ

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್ ಪೆಕ್ಟರ್ Read More »

ಮಡಿಕೇರಿ: ರಾಜಕಾರಣಿಗಳ ಪುತ್ರಿಯರು ಸೇರಿ ಹಲವರ ಜೊತೆ ಸರಸ| ಯುವಕನ ಕಾಮದಾಟದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕೊಡಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೊಡಗಿನ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ

ಮಡಿಕೇರಿ: ರಾಜಕಾರಣಿಗಳ ಪುತ್ರಿಯರು ಸೇರಿ ಹಲವರ ಜೊತೆ ಸರಸ| ಯುವಕನ ಕಾಮದಾಟದ ವಿಡಿಯೋ ವೈರಲ್ Read More »

ಯುಜಿಸಿ ಹೊಸ ನಿಯಮಾವಳಿಗಳಿಗೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ನಿಯಮಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ನಿಯಮಾವಳಿಯನ್ನು ಜನವರಿ 23, 2026ರಂದು ಹೊರಡಿಸಲಾಗಿತ್ತು. ಇದನ್ನು ಹಲವು ಅರ್ಜಿದಾರರು ಪ್ರಶ್ನಿಸಿದ್ದರು. ನಿಯಮಾವಳಿ ಅನಿಯಂತ್ರಿತ, ಹೊರಗಿಡುವ, ತಾರತಮ್ಯವಾಗಿದೆ. ಜೊತೆಗೆ ಭಾರತದ ಸಂವಿಧಾನ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯ್ದೆ, 1956ರ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌, ಅಂತಿಮ ತೀರ್ಪು ಹೊರಬರುವವರೆಗೆ ಈ ನಿಯಮಾವಳಿಯ ಜಾರಿಗೆ ತಡೆ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.

ಯುಜಿಸಿ ಹೊಸ ನಿಯಮಾವಳಿಗಳಿಗೆ ಸುಪ್ರೀಂ ತಡೆ Read More »

ಕ್ರಿಕೆಟ್; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 50 ರನ್ ಸೋಲು

ಸಮಗ್ರ ನ್ಯೂಸ್: ಭಾರತ-ನ್ಯೂಜಿಲೆಂಡ್ ತಂಡಗಳ ನಡುವಿನ 4ನೇ ಟಿ-20 ಪಂದ್ಯ ವಿಶಾಖಪಟ್ಟಣದಲ್ಲಿ ಬುಧವಾರ ನಡೆಯಿತು. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 3-0 ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿದ್ದ ಟೀಮ್ ಇಂಡಿಯಾ 4ನೇ ಪಂದ್ಯದಲ್ಲಿ 50 ರನ್‌ಗಳ ಸೋಲು ಅನುಭವಿಸಿದೆ. ನಾಯಕ ಸೂರ್ಯ ಕುಮಾರ್ ಯಾದವ್ ನೇತೃತ್ವದ ತಂಡದ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದು, ರನ್ ಹೊಳೆ ಹರಿಸುತ್ತಿದ್ದರು. ಆದರೆ 4ನೇ ಪಂದ್ಯದಲ್ಲಿ ತಂಡ ಆಲ್‌ ಔಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದರು. ಆದ್ದರಿಂದ 4ನೇ ಪಂದ್ಯದಲ್ಲಿ ಟಾಸ್

ಕ್ರಿಕೆಟ್; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 50 ರನ್ ಸೋಲು Read More »