November 2025

ಪರಪ್ಪನ ಅಗ್ರಹಾರ ವಿಡಿಯೋ ಪ್ರಕರಣ| ನಟ ಧನ್ವೀರ್ ನ ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಆಪ್ತ ಧನ್ವೀರ್ ವಿಡಿಯೋ ರಿಲೀಸ್ ಮಾಡಿದ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಆರೋಪಿ ದರ್ಶನ ಆಪ್ತ ಧನ್ವೀರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ನಟ ಧನ್ವೀರ್ ನನ್ನು ಸಿಸಿಬಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಮೊಬೈಲ್ ನಲ್ಲಿ ಮಾತನಾಡುತ್ತಿರುವುದು ಮದ್ಯ ಸೇವಿಸಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ […]

ಪರಪ್ಪನ ಅಗ್ರಹಾರ ವಿಡಿಯೋ ಪ್ರಕರಣ| ನಟ ಧನ್ವೀರ್ ನ ವಶಕ್ಕೆ ಪಡೆದ ಪೊಲೀಸರು Read More »

ದೆಹಲಿಯ ಕೆಂಪುಕೋಟೆ ಬಳಿ ಕಾರುಬಾಂಬ್ ಸ್ಪೋಟ| ಕನಿಷ್ಠ 8 ಮಂದಿ ಸಾವು

ಸಮಗ್ರ ನ್ಯೂಸ್: ದೇಶಾದ್ಯಂತ ಇಂದು 2,900 ಕೆಜಿ ಸ್ಫೋಟಗಳ ಪತ್ತೆ ಬೆನ್ನಲ್ಲೇ ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಹಲವು ದೇಹಗಳು ಛಿದ್ರ ಛಿದ್ರವಾಗಿದೆ. ಪ್ರಸ್ತುತ 8 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಸ್ಫೋಟದ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಜೆ 6.55ರ ಸುಮಾರಿಗೆ ಸ್ಫೋಟಕ ಸಂಭವಿಸಿದ್ದು ಏಳೆಂಟು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಕೆಂಪುಕೋಟೆಯ ಚಾಂದನಿ ಚೌಕ್‌ನ ಲಾಲ್ ಕಿಲಾ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟಕಕ್ಕೆ ಕಾರಣ

ದೆಹಲಿಯ ಕೆಂಪುಕೋಟೆ ಬಳಿ ಕಾರುಬಾಂಬ್ ಸ್ಪೋಟ| ಕನಿಷ್ಠ 8 ಮಂದಿ ಸಾವು Read More »

ದೇಶದಲ್ಲಿ ತಪ್ಪಿದ ಭಾರೀ ವಿಧ್ವಂಸಕ ಕೃತ್ಯ| 300 ಕೆಜಿ RDX , AK 47 ವಶಕ್ಕೆ

ಸಮಗ್ರ ನ್ಯೂಸ್: ಬಂಧಿತ ಕಾಶ್ಮೀರಿ ವೈದ್ಯನೊಬ್ಬ ನೀಡಿದ ಮಾಹಿತಿಯ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನಲ್ಲಿ 300 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ವೈದ್ಯರಿಗೆ ಸೇರಿದ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಪ್ರಸ್ತುತ ಜಮ್ಮು

ದೇಶದಲ್ಲಿ ತಪ್ಪಿದ ಭಾರೀ ವಿಧ್ವಂಸಕ ಕೃತ್ಯ| 300 ಕೆಜಿ RDX , AK 47 ವಶಕ್ಕೆ Read More »

ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರದಿಂದ ಬ್ರೇಕ್

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬಿಗ್ ಶಾಕ್ ನೀಡಿದ್ದು, ಎತ್ತಿನಹೊಳೆ ಏತ ನೀರಾವರಿ ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 2,000 ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗಾಗಿ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ತಡೆಹಿಡಿದು ಆದೇಶ ಹೊರಡಿಸಿದೆ. ಯೋಜನೆಯ ಸದಸ್ಯರು ಗಂಭೀರ ಪರಿಸರ ಕಾಳಜಿಗಳನ್ನು ಮತ್ತು ಅರಣ್ಯ

ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರದಿಂದ ಬ್ರೇಕ್ Read More »

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (DKWJA) 2025-28ರ ಸಾಲಿಗಾಗಿ ನಡೆದ ಚುನಾವಣೆಯಲ್ಲಿ, ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್ ಆಗಿರುವ ಪುಷ್ಪರಾಜ್ ಬಿ.ಎನ್. ಅವರು ನೂತನ ಅಧ್ಯಕ್ಷರಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ಪುಷ್ಪರಾಜ್ ಅವರು ಒಟ್ಟು 187 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ, ವಿಜಯವಾಣಿ ವರದಿಗಾರ ಶ್ರವಣ್ ಕುಮಾರ್ ನಾಳ (144 ಮತಗಳು) ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಸುಮಾರು

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ Read More »

‘ಮಹಾನಟಿ – ಸೀಸನ್ 2’ ವಿನ್ನರ್ ಆದ ಮಂಗಳೂರಿನ ವಂಶಿ ರತ್ನಕುಮಾರ್

ಸಮಗ್ರ ನ್ಯೂಸ್: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಮಹಾನಟಿ ಸೀಸನ್ 2’ನ ವಿನ್ನರ್ ಆಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ. ಕಳೆದ ಕೆಲ ತಿಂಗಳಿಂದ ತಮ್ಮ ನಟನಾ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದ ಅವರು, ಈಗ ಕಪ್ ಗೆದ್ದಿದ್ದಾರೆ. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆದರು. ವಿನ್ ಆದ ಬಳಿಕ ಮಾತನಾಡಿದ ವಂಶಿ ಅವರು, ‘ತುಂಬಾ ಖುಷಿ ಆಗ್ತಿದೆ. ಬಿ ಸರೋಜಾ ದೇವಿ ಅವರನ್ನು ನೋಡಿಲ್ಲ ನಾನು. ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ.

‘ಮಹಾನಟಿ – ಸೀಸನ್ 2’ ವಿನ್ನರ್ ಆದ ಮಂಗಳೂರಿನ ವಂಶಿ ರತ್ನಕುಮಾರ್ Read More »

ಕರ್ನಾಟಕ, ತಮಿಳುನಾಡಿಗೆ ಖಾಸಗಿ ಬಸ್ ಸಂಚಾರ ಸ್ಥಗಿತಕ್ಕೆ ಕೇರಳ‌ ಬಸ್ ಮಾಲೀಕರ ನಿರ್ಧಾರ

ಸಮಗ್ರ ನ್ಯೂಸ್: ಕೇರಳದಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಎಲ್ಲಾ ಅಂತರರಾಜ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಐಷಾರಾಮಿ ಬಸ್ ಮಾಲೀಕರ ಸಂಘ ಭಾನುವಾರ ಪ್ರಕಟಿಸಿದೆ. ಕೇರಳದಿಂದ ತಮಿಳುನಾಡು ಮತ್ತು ಕರ್ನಾಟಕಕ್ಕೆ ಅಂತರರಾಜ್ಯ ಪ್ರವಾಸಿ ಬಸ್ ಸೇವೆಗಳನ್ನು ಸೋಮವಾರ ಸಂಜೆ 6 ಗಂಟೆಯಿಂದ ಸ್ಥಗಿತಗೊಳಿಸಲಾಗುವುದು ಎಂದು ಐಷಾರಾಮಿ ಬಸ್ ಮಾಲೀಕರ ಸಂಘ, ಕೇರಳ ರಾಜ್ಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ನೆರೆಯ ರಾಜ್ಯಗಳು ಭಾರಿ ದಂಡ ವಿಧಿಸಲು, ಕಾನೂನುಬಾಹಿರ ರಾಜ್ಯ ಮಟ್ಟದ ತೆರಿಗೆಗಳನ್ನು ವಿಧಿಸಲು ಮತ್ತು ಕೇರಳ ನಿರ್ವಾಹಕರಿಗೆ ಸೇರಿದ ಅಖಿಲ ಭಾರತ

ಕರ್ನಾಟಕ, ತಮಿಳುನಾಡಿಗೆ ಖಾಸಗಿ ಬಸ್ ಸಂಚಾರ ಸ್ಥಗಿತಕ್ಕೆ ಕೇರಳ‌ ಬಸ್ ಮಾಲೀಕರ ನಿರ್ಧಾರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನವೆಂಬರ್‌ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ ಬನ್ನಿ… ಮೇಷ ರಾಶಿ:ಮೇಷ ರಾಶಿಯವರಿಗೆ ಈ ವಾರ ಬಹಳ ಅನುಕೂಲಕರ ದಿನಗಳ ತರಲಿದೆ. ನಿಮ್ಮ ಹಲವು ಕೆಲಸಗಳನ್ನು ಈ ವಾರ ಪೂರ್ಣ ಮಾಡುವಿರಿ. ಹಾಗೆ ಹೊಸ ಕೆಲಸಗಳನ್ನು ಆರಂಭಿಸುವಿರಿ. ಈ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸಲಿಂಗ ಕಾಮಕ್ಕೆ ಅಡ್ಡಿಯಾದ ಮಗುವನ್ನೇ ಕೊಂದ ತಾಯಿ

ಸಮಗ್ರ ನ್ಯೂಸ್: ಇಬ್ಬರು ಯುವತಿಯರು ತಮ್ಮ ಸಲಿಂಗ ಕಾಮದಾಟಕ್ಕೆ ಮಗು ಅಡ್ಡಿಯಾದೀತೆಂದು ಅದನ್ನು ಕೊಂದು ಹಾಕಿರುವ ಘಟನೆ ತಮಿಳುನಾಡು ಗಡಿ ತಾಲ್ಲೂಕಾದ ಕೆಳಮಂಗಳದಲ್ಲಿ ನಡೆದಿದೆ. ಈ ಕೃತ್ಯವು ಇವರ ನಡುವೆ ನಡೆದ ಮೊಬೈಲ್‌ ಚಾಟ್‌ ಮೂಲಕ ಹೊರಬಿದ್ದಿದೆ. ಚಿನ್ನಟ್ಟಿ ನಿವಾಸಿಗಳಾದ ಭಾರತಿ (26) ಮತ್ತು ಸುಮಿತ್ರಾ (22) ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಭಾರತಿಗೆ ಸುರೇಶ್‌ ಎಂಬಾತನೊಡೆನ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿತ್ತು. ಸುರೇಶ್‌ ಮನೆಯಲ್ಲಿ ಇಲ್ಲದಾಗ ಇಬ್ಬರ ಕಾಮದಾಟ ನಡೆಯುತ್ತಿತ್ತು.

ಸಲಿಂಗ ಕಾಮಕ್ಕೆ ಅಡ್ಡಿಯಾದ ಮಗುವನ್ನೇ ಕೊಂದ ತಾಯಿ Read More »

ರೈತರ ಹೋರಾಟಕ್ಕೆ ‌ಮಣಿದ‌ ಸರ್ಕಾರ| ಟನ್ ಗೆ ₹3300 ನಿಗದಿ| ಹೋರಾಟಗಾರರಿಂದ ಸಂಭ್ರಮಾಚರಣೆ

ಸಮಗ್ರ ನ್ಯೂಸ್: ರೈತರ ಪ್ರತಿಭಟನೆಯ ಕಿಚ್ಚು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ 3,300 ರೂ ದರ ನಿಗದಿ ಮಾಡಿದ್ದಾರೆ. ಬೆಂಬಲ ಬೆಲೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಈ ಬೇಡಿಕೆಯನ್ನು ತಿರಸ್ಕರಿಸಿದ್ದು, 3,500 ರೂಪಾಯಿ ನೀಡಿದರೆ ಭಾರಿ ನಷ್ಟವಾಗುತ್ತದೆ ಎಂದು ವಾದಿಸಿದ್ದರು.

ರೈತರ ಹೋರಾಟಕ್ಕೆ ‌ಮಣಿದ‌ ಸರ್ಕಾರ| ಟನ್ ಗೆ ₹3300 ನಿಗದಿ| ಹೋರಾಟಗಾರರಿಂದ ಸಂಭ್ರಮಾಚರಣೆ Read More »