August 2025

ಜಗತ್ತಿನ ಸುರಕ್ಷಿತ ನಗರಗಳ ಪೈಕಿ ಮಂಗಳೂರಿಗೆ 49ನೇ ಸ್ಥಾನ| ದೇಶದಲ್ಲಿ ಮೊದಲ ಸ್ಥಾನ ಪಡೆದ ಕಡಲನಗರಿ

ಸಮಗ್ರ ನ್ಯೂಸ್: ಜಗತ್ತಿನಲ್ಲೇ ಸುರಕ್ಷಿತ ನಗರಗಳ ಪೈಕಿ ದೇಶದಲ್ಲಿ ಮಂಗಳೂರು ನಗರ ಮೊದಲನೇ ಸ್ಥಾನ ಮತ್ತು ವಿಶ್ವದಲ್ಲಿ 49 ನೇ ಸ್ಥಾನ ಪಡೆದಿದೆ. ಸ್ವತಂತ್ರ ಬಳಕೆದಾರರ ಜಾಗತಿಕ ಡಾಟಾಬೇಸ್‌ ಆಗಿರುವ “ನಂಬಿಯೋ’ ತನ್ನ 2025ರ ವರ್ಷದ ಮಧ್ಯ ಭಾಗದ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಮಂಗಳೂರು ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ. ಸುರಕ್ಷಿತ ನಗರಗಳ ವಿಭಾಗದಲ್ಲಿ ವಿಶ್ವದ ಒಟ್ಟು 393 ನಗರದ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಭಾರತದ 23 ನಗರ ಈ ಪಟ್ಟಿಯಲ್ಲಿದೆ. ಇದರಲ್ಲಿ ಮಂಗಳೂರು ನಗರ ಶೇ.74.2 ಅಂಕದೊಂದಿಗೆ 49ನೇ […]

ಜಗತ್ತಿನ ಸುರಕ್ಷಿತ ನಗರಗಳ ಪೈಕಿ ಮಂಗಳೂರಿಗೆ 49ನೇ ಸ್ಥಾನ| ದೇಶದಲ್ಲಿ ಮೊದಲ ಸ್ಥಾನ ಪಡೆದ ಕಡಲನಗರಿ Read More »

ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದ ಬೇಸತ್ತು 33 ವರ್ಷದ ಮನೋವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಸನತ್ನಗರ ಜೆಕ್ ಕಾಲೋನಿಯಲ್ಲಿ ನಡೆದಿದೆ.‌ ಮೃತಳನ್ನು ಎ.ರಜಿತಾ ಎಂದು ಗುರುತಿಸಲಾಗಿದೆ. ಆಕೆ ತನ್ನ ಪತಿ ರೋಹಿತ್ ಮತ್ತು ಆತನ ಕುಟುಂಬದಿಂದ ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಆಕೆಯ ತಂದೆ, ಸಬ್ ಇನ್ಸ್ಪೆಕ್ಟರ್ ನರಸಿಂಹ ಗೌಡ್ ನೀಡಿದ ದೂರಿನ ಆಧಾರದ ಮೇಲೆ ಸಂಜೀವ ರೆಡ್ಡಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ,

ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ ಆತ್ಮಹತ್ಯೆ Read More »

ಪುತ್ತೂರು‌‌ ಮೂಲದ‌ ಪಶುವೈದ್ಯೆ ಮಂಗಳೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಪುತ್ತೂರು ಮೂಲದ ಯುವ ಪಶುವೈದ್ಯೆಯೊಬ್ಬರು ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಡೆದಿದೆ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ, ಚಾರ್ಟಡ್್ರ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಪಶು ವೈದ್ಯೆಯಾಗಿದ್ದ ಡಾ.ಕೀರ್ತನಾ ಜೋಶಿ (27) ಸೋಮವಾರ ರಾತ್ರಿ ಮಂಗಳೂರಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪಶು ವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿದ್ದ ಡಾ. ಕೀರ್ತನಾ ಜೋಶಿ

ಪುತ್ತೂರು‌‌ ಮೂಲದ‌ ಪಶುವೈದ್ಯೆ ಮಂಗಳೂರಿನಲ್ಲಿ ಆತ್ಮಹತ್ಯೆ Read More »

ಧರ್ಮಸ್ಥಳ: ಯೂಟ್ಯೂಬ್ ವಾಹಿನಿಗಳ ಪ್ರತಿನಿಧಿಗಳ ಮೇಲೆ‌ ಅನಾಮಿಕರಿಂದ‌ ಗೂಂಡಾಗಿರಿ| ನಾಲ್ವರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಪಾಂಗಾಳದ ದಿ. ಸೌಜನ್ಯ ಮನೆಯ ಸಮೀಪ ಬಿಗ್‌ಬಾಸ್‌ನ ರಜತ್ ಎಂಬುವವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಆಗಂತುಕರು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ. ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್‌ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಮೇಲೆ ದಾಳಿ

ಧರ್ಮಸ್ಥಳ: ಯೂಟ್ಯೂಬ್ ವಾಹಿನಿಗಳ ಪ್ರತಿನಿಧಿಗಳ ಮೇಲೆ‌ ಅನಾಮಿಕರಿಂದ‌ ಗೂಂಡಾಗಿರಿ| ನಾಲ್ವರು ಆಸ್ಪತ್ರೆಗೆ ದಾಖಲು Read More »

ಧರ್ಮಸ್ಥಳ ಪ್ರಕರಣ| ಮೀಸಲು ಅರಣ್ಯದಲ್ಲಿ ಹೆಣ ಹೂತವರ ವಿರುದ್ಧವೂ ಕ್ರಮ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ಧರ್ಮಸ್ಥಳ ಸುತ್ತಮುತ್ತ ಮೀಸಲು ಅರಣ್ಯದೊಳಗೆ ಸಮಾಧಿ ಅಗೆಯುತ್ತಿರುವ ಎಸ್.ಐ.ಟಿ.ಗೆ ಕೆಲವೆಡೆ ಮಾನವರ ಅಸ್ಥಿ ಸಿಕ್ಕಿದ್ದು, ತನಿಖೆ ಮುಗಿದ ಬಳಿಕ ಅಕ್ರಮವಾಗಿ ಶವ ಹೂತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೀದರ್ ನಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ, ಬೇಜವಾಬ್ದಾರಿತನ, ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿ,

ಧರ್ಮಸ್ಥಳ ಪ್ರಕರಣ| ಮೀಸಲು ಅರಣ್ಯದಲ್ಲಿ ಹೆಣ ಹೂತವರ ವಿರುದ್ಧವೂ ಕ್ರಮ – ಸಚಿವ ಖಂಡ್ರೆ Read More »

ಧರ್ಮಸ್ಥಳ: ಶವ ಹೂತ ಪ್ರಕರಣಕ್ಕೆ ಮಹಾತಿರುವು| ದೂರುದಾರನ‌ ಪರ ಸಾಕ್ಷಿ ಹೇಳಲು ತಯಾರಾದ ಆರು ಮಂದಿ ಸ್ಥಳೀಯರು!?

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ದೂರುದಾರನ ಪರ ಹೇಳಿಕೆ ನೀಡಲು 6 ಸ್ಥಳೀಯರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖೆ ನಡೆಸುತ್ತಿದ್ದು, ಅನಾಮಿಕ ವ್ಯಕ್ತಿಗೆ ಸಾಥ್ ನೀಡಲು ದೂರುದಾರನ ಪರ ಹೇಳಿಕೆ ನೀಡಲು 6 ಸ್ಥಳೀಯರು ಮುಂದಾಗಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದ ವರದಿ ಮಾಡಿದೆ. ಆದರೆ ಎಸ್ಐಟಿ ಮೂಲಗಳು ಇದನ್ನು ಸ್ಪಷ್ಟಪಡಿಸಿಲ್ಲ. ಪ್ರಕರಣದ ಮತ್ತೋರ್ವ

ಧರ್ಮಸ್ಥಳ: ಶವ ಹೂತ ಪ್ರಕರಣಕ್ಕೆ ಮಹಾತಿರುವು| ದೂರುದಾರನ‌ ಪರ ಸಾಕ್ಷಿ ಹೇಳಲು ತಯಾರಾದ ಆರು ಮಂದಿ ಸ್ಥಳೀಯರು!? Read More »

ಮಠಾದೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲು| ಜಾಲತಾಣಗಳಲ್ಲಿ ವೈರಲ್‌ ಆಯ್ತು ನಿಜಲಿಂಗನ‌ ನಿಜಸ್ವರೂಪ

ಸಮಗ್ರ ನ್ಯೂಸ್: ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ಮುಸ್ಲಿಂ ವ್ಯಕ್ತಿಯಾಗಿದ್ದು, ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ. ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿದ್ದನು. ಈ ವಿಷಯವನ್ನು ಯಾರಿಗೂ ತಿಳಿಸದೇ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದನು.

ಮಠಾದೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲು| ಜಾಲತಾಣಗಳಲ್ಲಿ ವೈರಲ್‌ ಆಯ್ತು ನಿಜಲಿಂಗನ‌ ನಿಜಸ್ವರೂಪ Read More »

ಮಂಗಳೂರಿಗೆ ಬಂದಿಳಿದ T-55 ಯುದ್ಧ ಟ್ಯಾಂಕ್

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ಸಂಸದ ಕ್ಯಾ|ಬ್ರಿಜೇಶ್ ಚೌಟ ರಕ್ಷಣಾ ಸಚಿವಾಲಯಕ್ಕೆ ಮನವಿ ಮೇರೆಗೆ ಯುದ್ದ ಟ್ಯಾಂಕ್ ಮಂಗಳೂರು ತಲುಪಿದೆ. ಕದ್ರಿ ಯುದ್ಧಸ್ಮಾರಕ ಅಥವಾ ಸರ್ಕಿಟ್ ಹೌಸ್ ಮುಂಭಾಗ ಅಥವಾ ಇತರ ಯೋಗ್ಯ ಸ್ಥಳದಲ್ಲಿ ಟ್ಯಾಂಕ್ ಅನ್ನು ಇರಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸುವ ಕೆಲಸವನ್ನು ಮಹಾನಗರಪಾಲಿಕೆ

ಮಂಗಳೂರಿಗೆ ಬಂದಿಳಿದ T-55 ಯುದ್ಧ ಟ್ಯಾಂಕ್ Read More »

ಬೆಳ್ತಂಗಡಿ: ಮತ್ತೆರಡು ಪ್ರಕರಣ‌‌ ಎಸ್ಐಟಿ‌ ತನಿಖೆಗೆ ಆದೇಶ| ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲವೆಂದ ಹೋಮ್ ಮಿನಿಸ್ಟರ್

ಸಮಗ್ರ ನ್ಯೂಸ್: ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 31 ರಂದು 6 ನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣ ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ಮತ್ತು ಆಗಸ್ಟ್ 4 ರಂದು ಅಪ್ರಾಪ್ತ ಬಾಲಕಿಯನ್ನು ಕಾನೂನು ಬಾಹಿರವಾಗಿ ಹೂತು ಹಾಕಿರುವ ಬಗ್ಗೆ ಜಯಂತ್.ಟಿ ನೀಡಿದ ದೂರಿನ ಪಿಟಿಷನ್ ಪ್ರಕರಣವನ್ನು ಮುಂದಿನ ತನಿಖೆಗಾಗಿ ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ರವರು

ಬೆಳ್ತಂಗಡಿ: ಮತ್ತೆರಡು ಪ್ರಕರಣ‌‌ ಎಸ್ಐಟಿ‌ ತನಿಖೆಗೆ ಆದೇಶ| ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲವೆಂದ ಹೋಮ್ ಮಿನಿಸ್ಟರ್ Read More »

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ‌ತಡೆಯಾಜ್ಞೆ| ನಾಳೆಯಿಂದ‌ ಬಸ್ ಸಂಚಾರ ಯಥಾಸ್ಥಿತಿ

ಸಮಗ್ರ ನ್ಯೂಸ್: ಸಾರಿಗೆ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದಂತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಯಿತು. ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಸಾರಿಗೆ ನೌಕರರ ಮುಷ್ಕರಕ್ಕೆ ನೀಡಿದ್ದಂತ ತಡೆಯಾಜ್ಞೆಯನ್ನು 2 ದಿನ ವಿಸ್ತರಿಸಿ ಆದೇಶಿಸಿದೆ. ಇಂದು ಸಾರಿಗೆ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ್ದಂತ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿತು. ಈ ವೇಳೆ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂಬುದಾಗಿ ಎಜಿ ಕೋರ್ಟ್ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಪೀಠವು ರಾಜಿ ಸಂಧಾನದ

ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ‌ತಡೆಯಾಜ್ಞೆ| ನಾಳೆಯಿಂದ‌ ಬಸ್ ಸಂಚಾರ ಯಥಾಸ್ಥಿತಿ Read More »