ಆ.19ರಿಂದ ಭಾರೀ ಚಳಿ ಕಾಡಲಿದೆಯಾ? ನಿಮ್ಮ ಮೊಬೈಲ್ ಗೆ ಬಂದ ವಾಟ್ಸ್ಯಾಪ್ ಸಂದೇಶದ ಅಸಲಿಯತ್ತೇನು?

ಸಮಗ್ರ ನ್ಯೂಸ್: ಆ. 18ರಂದು ಒಂದು ಮೆಸೇಜ್ ನಿಮ್ಮ ಮೊಬೈಲಿನ ವಾಟ್ಸ್ ಆಯಪ್ ಗೆ ಬಂದಿರಬಹುದು. ಅದರಲ್ಲಿ, ವಾತಾವರಣದಲ್ಲಿ ಶೀತದ ಪ್ರಮಾಣ ಹೆಚ್ಚಾಗಲಿದೆ. ಆ. 22ರ ತನಕ ಸಿಕ್ಕಾಪಟ್ಟೆ ಚಳಿ ಇರುತ್ತೆ. ಹಾಗಾಗಿ, ನೀವೆಲ್ಲರೂ ಆರೋಗ್ಯಕರ ಆಹಾರ ಸೇವಿಸಿ ಹಾಗೂ ಬೆಚ್ಚಗಿನ ವಾತಾವರಣದಲ್ಲಿ ಇರಿ ಎಂದು ತಿಳಿಸಲಾಗಿದೆ.

Ad Widget ... ..

ನಾಳೆಯಿಂದ ಆಗಸ್ಟ್ 22 ರವರೆಗೆ, ವಾತಾವರಣದಲ್ಲಿ ಕಳೆದ ವರ್ಷಕ್ಕಿಂತ ಹವಾಮಾನವು ತೀರಾ ಕಡಿಮೆಯಾಗಿರುತ್ತದೆ. ಇದನ್ನು ಆಲ್ಫೆಲಿಯನ್ ಸನ್ನಿವೇಶ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5ರಿಂದ 7ರ ನಡುವೆ ಪ್ರಾರಂಭವಾಗುತ್ತದೆ. ಎಲ್ಲೆಡೆ ತಂಪಾದ ವಾತಾವರಣ ಆಗಸ್ಟ್ 22, 2025 ರಂದು ಕೊನೆಗೊಳ್ಳುತ್ತದೆ….. ಹೀಗೆ ಸಾಗುತ್ತದೆ ಈ ಮೆಸೇಜ್.

Ad Widget

ನಂತರ ಮುಂದುವರಿದು, “ಈ ಅವಧಿಯಲ್ಲಿ, ನಾವು ಶೀತದ ಗಾಳಿಯನ್ನು ಉಸಿರಾಡಬಹುದು., ಇದು ದೇಹದ ನೋವು, ಗಂಟಲು ಕಿರಿಕಿರಿ, ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇತರ ಆರೋಗ್ಯಕರ ಆಹಾರ ಉತ್ಪನ್ನಗಳೊಂದಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಸೂಕ್ತವಾಗಿದೆ….” ಎಂದು ತಿಳಿಹೇಳಲಾಗುತ್ತದೆ.

ಹಲವಾರು ರೀತಿ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ತಿಳಿಯುತ್ತದೆ. ಈಗ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅಗಾಧವಾಗಿ ಮಳೆ ಸುರಿಯುತ್ತಿದೆ. ವಾತಾವರಣ ಸಹಜವಾಗಿ ತಂಪಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಇಂಥದ್ದೊಂದು ಫೇಕ್ ಮೆಸೇಜ್ ಹಾಕಿ ಹಣ ಮಾಡಲು ಮುಂದಾಗಿದ್ದಾರೆ. ಇದು ಎಷ್ಟು ಬಾರಿ ಫಾರ್ವಾರ್ಡ್ ಆಗುತ್ತದೆಯೋ ಅಷ್ಟು ಹಣ ಅವರಿಗೆ ಬರುತ್ತದಂತೆ!

ಈ ವಾಟ್ಸ್ ಆಯಪ್ ಸಂದೇಶದಲ್ಲಿ, ಅಫೇಲಿಯನ್ಸನ್ನಿವೇಶದಿಂದಾಗಿ ವಾತಾವರಣದಲ್ಲಿ ತುಂಬಾ ಚಳಿ ಆವರಿಸುತ್ತದೆ ಎಂದು ಹೇಳಿದ್ದಾರೆ. ಅಫೇಲಿಯನ್ಪಾಯಿಂಟ್ ಎಂಬುದು ಭೂಮಿಯ ವಾಲುವಿಕೆಯ ಒಂದು ಸ್ಥಿತಿ. ಇದೇ ಸುದ್ದಿಯ ಚಿತ್ರದಲ್ಲಿ ತೋರಿಸಿರುವ ಹಾಗೆ, ಭೂಮಿಯು 23.5 ಡಿಗ್ರಿಯಲ್ಲಿ ಬಾಗಿಕೊಂಡಿದೆ. ಅದೇ ಸ್ಥಿತಿಯಲ್ಲಿ ಅದು ಸೂರ್ಯನನ್ನು ಸುತ್ತುತ್ತಿರುತ್ತದೆ. ಅಲ್ಲದೆ, ಈ ಪರಿಭ್ರಮಣೆಯು ಓವಲ್ ಆಕಾರದಲ್ಲಿ (ಅಂಡಾಕಾರದಲ್ಲಿ) ಇರುತ್ತದೆ.

ಆ ಸಂದರ್ಭದಲ್ಲಿ, ಭೂಮಿಯು ಎರಡು ಬಾರಿ ಸೂರ್ಯನಿಂದ ತುಂಬಾ ದೂರಕ್ಕೆ ಸರಿಯುತ್ತದೆ. ಅಲ್ಲದೆ, ಭೂಮಿಯು 25.3 ಡಿಗ್ರಿ ಬಾಗಿಕೊಂಡು ಸುತ್ತುತ್ತಿರುವುದಿರಂದ, ಸೂರ್ಯನಿಂದ ದೂರ ಸರಿದ ಒಂದು ಸಂದರ್ಭದಲ್ಲಿ ಅದರಲ್ಲಿನ ಭೂಭಾಗಗಳು ಸೂರ್ಯನಿಂದ ದೂರಕ್ಕೆ ಸೂರ್ಯನ ಕಡೆಗೆ ನೋಡುತ್ತಿರುತ್ತದೆ. ಅದನ್ನೇ ಅಪೇಲಿಯನ್ ಫಿನಾಮಿನಾ ಎಂದು ಕರೆಯಲಾಗುತ್ತದೆ.

ಹಾಗೇ ಸುತ್ತಿಕೊಂಡು ಬರುವ ಭೂಮಿಯು ಮತ್ತೊಂದು ದಿಕ್ಕಿನಲ್ಲಿ ಸೂರ್ಯನಿಂದ ದೂರ ಸರಿದಿರುತ್ತದೆ. ಆದರೆ, ಅದರ 23.5 ಡಿಗ್ರಿ ಬಾಗುವಿಕೆಯಿಂದಾಗಿ ಭೂಮಿಯ ಭೂಭಾಗಗಳು ಸೂರ್ಯನಿಗೆ ಕಾಣಿಸದೇ ಬೇರೆ ಕಡೆಗೆ ಗೋಚರಿಸುತ್ತಿರುತ್ತದೆ. ಇದನ್ನು ಪೆರಿಹೇಲಿಯನ್ ಫಿನಾಮಿನಾ ಎಂದು ಕರೆಯಲಾಗುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದರೆ, ಇಷ್ಟು ತಿಳಿದುಕೊಳ್ಳಿ. ವಾಟ್ಸ್ ಆಯಪ್ ನಲ್ಲಿನ ಸಂದೇಶದಲ್ಲಿ ಆ. 22ರವೆಗೆ ಭೂಮಿಯು ಸೂರ್ಯನಿಂದ ತುಂಬಾ ದೂರ ಸಾಗಿರುತ್ತದೆ. ಹಾಗಾಗಿ, ಭೂಮಿಯಲ್ಲಿ ಚಳಿ ಆಗುತ್ತದೆ ಅಂತ. ಆದರೆ, ವಿಜ್ಞಾನವು ಇದು ಸುಳ್ಳು ಎಂದು ಹೇಳುತ್ತದೆ. ಭೂಮಿಯಲ್ಲಿ ಯಾವುದೇ ತಾಪಮಾನ ಏರುಪೇರು ಆಗುವುದಿಲ್ಲ. ಇನ್ನು, ಇಂಥ ಪರಿಸ್ಥಿತಿ ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಪ್ರತಿ ವರ್ಷ ಜು. 4ರ ಆಸುಪಾಸಿನಲ್ಲಿ ಇಂಥ ಅಫೇಲಿಯನ್ ಸೃಷ್ಟಿಯಾಗುತ್ತದೆ. ಅಂದರೆ, ಸೂರ್ಯನಿಂದ ಭೂಮಿಯ ಭೂಭಾಗಗಳು ತುಂಬಾ ಇರುವಂಥ ಸಂದರ್ಭ ಸೃಷ್ಟಿಯಾಗುತ್ತದೆ. ಆದರೆ, ಅದರಿಂದ ತುಂಬಾ ಚಳಿಯುತ್ತದೆ ಅನ್ನೋದು ಸುಳ್ಳು ಎನ್ನುತ್ತವ ಮೂಲಗಳು.

ಒಟ್ಟಾರೆಯಾಗಿ ಹೇಳುವುದೇನೆಂದರೆ, ಇದೊಂದು ಫೇಕ್ ಮೆಸೇಜ್. ಅಫೇಲಿಯನ್ಸಂದರ್ಭ ಪ್ರತಿ ವರ್ಷ ಜು. 4ರ ಆಜುಬಾಜು ಉಂಟಾಗುತ್ತದೆ. ಅಲ್ಲದೆ, ಅಂಥ ಸನ್ನಿವೇಶದಿಂದ ಯಾವುದೇ ಸಮಸ್ಯೆಯಾಗದು ಎಂದು ಹೇಳಲಾಗಿದೆ. ವಾತಾವರಣದಲ್ಲಿ ಭಾರೀ ಮಳೆಯಿರುವುದರಿಂದ ಸಹಜವಾಗಿ ಶೀತ ಇದ್ದೇ ಇರುತ್ತದೆ. ಅದರಿಂದ ಸಹಜ ಎಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು.

Leave a Comment

Your email address will not be published. Required fields are marked *