ಧರ್ಮಸ್ಥಳ: ಅನಿಯಂತ್ರಿತ ಅಗೆಯುವಿಕೆಯಿಂದ ಸಾಕ್ಷ್ಯ ನಾಶ| ಎಸ್ಐಟಿ ಗೆ ಹಿರಿಯ ವಿಜ್ಞಾನಿಯೊಬ್ಬರ ಸಲಹೆ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ಕಾರ್ಯಾಚರಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮಣ್ಣಿನ ವಿಜ್ಞಾನಿಗಳು, ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು ಎಂದು ಎಸ್‌ಐಟಿಗೆ ಎಚ್ಚರಿಕೆ ನೀಡಿದ್ದಾರೆ.

Ad Widget ... ..

ಧರ್ಮಸ್ಥಳದಲ್ಲಿ ಭೌಗೋಳಿಕ ರಚನೆಯಿಂದಾಗಿ ಧರ್ಮಸ್ಥಳದಲ್ಲಿನ ಮಣ್ಣು ಮತ್ತು ನೆಲದಲ್ಲಿ ಹುದುಗಿದ ಮೂಳೆಗಳು ವರ್ಷಗಳು ಕಳೆದಂತೆ ಕರಗಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Ad Widget

ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಮಣ್ಣಿನ ವಿಜ್ಞಾನಿಯೊಬ್ಬರು ಧರ್ಮಸ್ಥಳದಲ್ಲಿ ಹುಡುಕಬೇಕಿರುವುದು ಮೂಳೆಗಳನ್ನಲ್ಲ. ಕಳೆಬರವೂ ಅಲ್ಲ. ಬದಲಾಗಿ ಮೂಳೆಯ ಅವಶೇಷಗಳಿರುವ ರಾಸಾಯನಿಕ ಮಣ್ಣನ್ನು ಎಸ್‌ಐಟಿಯು ತೆಗೆದು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಜೆಸಿಬಿ ಬಳಸಿ ನಡೆಸುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಕುರಿತ ವೈಜ್ಞಾನಿಕ ವ್ಯಾಖ್ಯಾನವನ್ನು ಅವರು ಮುಂದಿಟ್ಟಿದ್ದಾರೆ. ಎಸ್‌ಐಟಿಯು ತನ್ನ ಕಾರ್ಯಾಚರಣೆಯಲ್ಲಿ ತಜ್ಞರು ಸೂಚಿಸಿದ ವ್ಯಾಖ್ಯಾನದಲ್ಲಿ ಮುಂದುವರೆದರೆ ತನಿಖೆಯು ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಭಾರೀ ಮಳೆಯಾಗುವ ಕರಾವಳಿ ಪ್ರದೇಶದಲ್ಲಿರುವ ಧರ್ಮಸ್ಥಳದಲ್ಲಿನ ಲ್ಯಾಟರೈಟ್ ಮಣ್ಣಿನ ವೈಶಿಷ್ಟ್ಯಗಳು ಸಾಕ್ಷ್ಯಗಳ ಸಂರಕ್ಷಣೆಗೆ ಗಂಭೀರ ಸವಾಲುಗಳನ್ನು ತಂದಿದ್ದು, ಯಾಂತ್ರಿಕ ಅಥವಾ ಅನಿಯಂತ್ರಿತ ಅಗೆಯುವಿಕೆಯಿಂದ ಜೀವಂತ ಪುರಾವೆಗಳು ಶಾಶ್ವತವಾಗಿ ನಾಶವಾಗುವ ಅಪಾಯವಿದೆ ಎಂದು ಮಣ್ಣಿನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *