ಕಡಬ: ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದ್ದು ರೋಸಿ ಹೋದ ಸ್ಥಳೀಯರು ರಸ್ತೆಯ ಮಧ್ಯೆ ಗುಂಡಿ ತೆಗೆದು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಡಬ ತಾಲೂಕಿನ ಏನೇಕಲ್ಲು ಸಮೀಪದ ದೇವರಹಳ್ಳಿ ಕಲ್ಲಾಜೆ ಎಂಬಲ್ಲಿ ಜು.27 ರಂದು ನಡೆದಿದೆ.
ಕಳೆದ 1 ತಿಂಗಳಿನಿಂದ ಈ ಸಮಸ್ಯೆ ಮತ್ತೆ ಹೆಚ್ಚಾಗಿದ್ದು ಸಂಬಂಧಪಟ್ಟವರಲ್ಲಿ ಹೇಳಿಯೂ ಪರಿಹಾರವಾಗದೇ ಇದ್ದುದಕ್ಕೆ ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸುಮಾರು 12 ಮಂದಿ ಬಾಳೆಗಿಟ್ಟು ನೆಟ್ಟು ಅಧಿಕಾರಿಗಳ ನಡೆಯನ್ನು ಟೀಕಿಸಿದ್ದಾರೆ.
ಇನ್ನು ಇಲ್ಲಿನ ಮರಕತ ದೇವಸ್ಥಾನ ಹತ್ತಿರ ಡ್ಯಾಮ್ ವೊಂದು ಇದ್ದು ಮಳೆಗೆ ಮರಗಳು ಕೊಚ್ಚಿಕೊಂಡು ಬಂದು ಡ್ಯಾಮ್ ನಲ್ಲಿ ಸಿಲುಕಿ ನೀರು ಬ್ಲಾಕ್ ಆಗುತ್ತದೆ.
ಆ ನೀರು ಹತ್ತಿರ ಇರೋ ತೋಟ,ಮನೆಗೂ ನುಗ್ಗುತ್ತಿದ್ದು ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ.
ಡ್ಯಾಮ್ ನಲ್ಲಿ ಸಿಲುಕುವ ಈ ಮರದ ದಿಮ್ಮಿ ಮತ್ತು ಕಸಗಳನ್ನು ತೆಗೆದರೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.







