ಉಪ್ಪಿನಂಗಡಿ: ಸರ್ಕಾರಿ ಬಸ್ ನಲ್ಲಿ ಬಟ್ಟೆ ಒಣಹಾಕಿ ‘ ಶಕ್ತಿ’ ಪ್ರದರ್ಶನ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಶಕ್ತಿ ಯೋಜ‌ನೆ ಜಾರಿಗೆ ತಂದ ಮೇಲೆ ಉಚಿತ ಪ್ರಯಾಣದ ಪ್ರಯೋಜನವನ್ನು ಕೋಟ್ಯಾಂತರ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಹಲವು ತೀರ್ಥಕ್ಷೇತ್ರ, ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ.

Ad Widget ... ..

ಈ ನಡುವೆ ಪ್ರಯಾಣಿಸುವ ಬಸ್ ಗಳೇ ವೈಯಕ್ತಿಕ ಕೆಲಸಗಳಿಗೆ ಬಳಕೆಯಾಗುತ್ತಿರುವುದು ಯೋಜನೆಯ ದುರುಪಯೋಗವಾಗುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

Ad Widget

ಗೋಕರ್ಣದಿಂದ ಮಂಗಳೂರು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ಜೂ.25ರ ಸಂಜೆ ಕಂಡುಬಂದ ದೃಶ್ಯವಿದು. ಕೆಲ ಮಹಿಳಾ ಪ್ರಯಾಣಿಕರು ತಮ್ಮ ಉಡುಪುಗಳನ್ನು ಬಸ್ ನೊಳಗೆ ಒಣಹಾಕಿ ಪ್ರಯಾಣಿಕರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದಾರೆ. ನಿರ್ವಾಹಕ ಇದನ್ನು ಕಂಡೂ ಕಾಣದಂತೆ ತನ್ನ ಪಾಡಿಗಿರುವುದು ಆಶ್ಚರ್ಯ ಉಂಟುಮಾಡಿದೆ.

ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತ ಕೆಲ ಮಹಿಳಾ ಪ್ರಯಾಣಿಕರು ತಮ್ಮ ಲಂಗ ಹಾಗೂ ಇನ್ನಿತರ ಉಡುಪುಗಳನ್ನು ಒಣಹಾಕಿದ್ದಾರೆ. ಯೋಜನೆಯ ಲಾಭವನ್ನು ಪಡೆಯುವ ಬದಲು ಬಸ್ಸನ್ನು ಮನೆಯನ್ನಾಗಿ ಮಾಡಿಕೊಂಡಿರುವುದು ಯೋಜನೆಯ ದುರುಪಯೋಗವೆಂದರೆ ತಪ್ಪಾಗಲಾರದು.

Leave a Comment

Your email address will not be published. Required fields are marked *