ಸಮಗ್ರ ನ್ಯೂಸ್: NITK ಹಳೆಯ ವಿದ್ಯಾರ್ಥಿ ಮತ್ತು NCC ಕೆಡೆಟ್ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದಾರೆ.
ಎಳಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ 10 ತಿಂಗಳ ತೀವ್ರ ಮಿಲಿಟರಿ ತರಬೇತಿ ಕಾರ್ಯಕ್ರಮದ ನಂತರ, ಮೇ 31, 2025 ರಂದು ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅನನ್ಯ ಅವರನ್ನು ಔಪಚಾರಿಕವಾಗಿ ನೌಕಾಪಡೆಗೆ ಸೇರಿಸಲಾಯಿತು.
ನಿವೃತ್ತ ಟೆಲಿಕಾಂ ಉದ್ಯೋಗಿ ಶ್ರೀ ಸತೀಶ್ ರಾವ್ ಮತ್ತು ವೀಣಾ ದಂಪತಿಗಳ ಪುತ್ರಿ ಕುಮಾರಿ ಅನನ್ಯಾ ರಾವ್ LKg ಇಂದ SSLC ವರೆಗೆ BGS ಕಾವೂರ್ ನಲ್ಲಿ ವಿದ್ಯಾಭ್ಯಾಸ, PUC ಚೈತನ್ಯ ಕಾಲೇಜ್, B Tech ಪದವಿಯನ್ನು ಸುರತ್ಕಲ್ಲಿನ NITK ಯಿಂದ ಮೆಕಾನಿಕಲ್ ವಿಭಾಗದಲ್ಲಿ ಅಧ್ಯಯನ ಮಾಡಿರುತ್ತಾರೆ.
ಬಾಲ್ಯದಿಂದ ದೇಶ ಸೇವೆಯಲ್ಲಿ ಅಭಿರುಚಿ ಇದ್ದು ಭಾರತೀಯ ಸೈನ್ಯ ಸೇರಬೇಕೆಂಬ ಹಂಬಲ ಅದಕ್ಕಾಗಿ ಕಾಲೇಜ್ ನಲ್ಲಿ NCC ತರಬೇತಿ ಹೊಂದಿದ್ದಳು. NITK ಸುರತ್ಕಲ್ ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್ ಲೆಫ್ಟಿಂನೆಂಟ್ ಆಗಿ ಆಯ್ಕೆಗೊಂಡಿದ್ದಾರೆ.