April 2025

ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ| ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆಗೆ ಐವರು ಬಲಿ

ಸಮಗ್ರ ನ್ಯೂಸ್: ನಿಂತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಭೀಕರ ಅಫಘಾತ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು ನಸುಕಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಾಗಲಕೋಟೆ ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ನೆಲೋಗಿ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ| ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆಗೆ ಐವರು ಬಲಿ Read More »

2025-26ನೇ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ| ಎ.11ರಿಂದ‌ ಬೇಸಿಗೆ ರಜೆ; ಮೇ.29ರಿಂದ ಶಾಲಾರಂಭ

ಸಮಗ್ರ ನ್ಯೂಸ್: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ 2025-26ನೆ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಎ.11ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಮೇ 29ರಿಂದ ಶಾಲೆಗಳು ಪುನಾರಾರಂಭಗೊಳ್ಳಲಿವೆ. 2025-26ನೆ ಸಾಲಿನ ಶಾಲಾ ಕರ್ತವ್ಯದ ದಿನಗಳ ಮೊದಲನೆ ಅವಧಿಯು ಮೇ 29ರಿಂದ ಸೆ.19ರವರೆಗೆ ಇರಲಿದೆ. ದಸರಾ ರಜೆ ಸೆ.20ರಿಂದ ಅ.7ರವರೆಗೆ ಇರುತ್ತದೆ. ಶಾಲಾ ಕರ್ತವ್ಯದ ದಿನಗಳ ಎರಡನೆ ಅವಧಿಯು ಅ.8ರಿಂದ 2026ರ ಎ.10ರವರೆಗೆ ಇರಲಿದೆ. ಬೇಸಿಗೆ ರಜೆಯು ಎ.11ರಿಂದ ಎ.28ರವರೆಗೆ ಇರುತ್ತದೆ.

2025-26ನೇ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ| ಎ.11ರಿಂದ‌ ಬೇಸಿಗೆ ರಜೆ; ಮೇ.29ರಿಂದ ಶಾಲಾರಂಭ Read More »

ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವ ಇಂದಿನಿಂದ ಆರಂಭ..!

ಸಮಗ್ರ ನ್ಯೂಸ್: ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಕ್ಕೆ ಇಂದು ರಾತ್ರಿ ಚಾಲನೆ ದೊರೆಯಲಿದೆ. 11 ದಿನಗಳ ಕರಗ ಮಹೋತ್ಸವಕ್ಕೆ ಸಕಲ ತಯಾರಿಗಳು ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದರೊಂದಿಗೆ ಅವರು 15 ಬಾರಿ ಕರಗ ಹೊತ್ತಂತಾಗಲಿದೆ. ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಏಪ್ರಿಲ್ 14 ರವರೆಗೆ, ಅಂದರೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಹೀಗಾಗಿ ದೇವಸ್ಥಾನದಲ್ಲಿ ಬಿರುಸಿನಿಂದ ತಯಾರಿಗಳು ಸಾಗಿವೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ ರಾತ್ರಿ10 ಗಂಟೆಗೆ

ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವ ಇಂದಿನಿಂದ ಆರಂಭ..! Read More »

ತಮಿಳುನಾಡು ಬಿಜೆಪಿ‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

ಸಮಗ್ರ ನ್ಯೂಸ್: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಅಣ್ಣಾಮಲೈ ರಾಜೀನಾಮೆ ಘೋಷಿಸಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ನಿರೀಕ್ಷೆಯಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಘೋಷಿಸಿದ್ದಾರೆ. ಕೊಯಮತ್ತೂರಿನಲ್ಲಿ ಮಾತನಾಡಿದ ಅಣ್ಣಾಮಲೈ, ಬಿಜೆಪಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಹೇಳಿದ್ದಾರೆ. ಮುಂದಿನ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ನಾನು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಉಜ್ವಲ ಭವಿಷ್ಯ ಇರಬೇಕೆಂದು ನಾನು

ತಮಿಳುನಾಡು ಬಿಜೆಪಿ‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ Read More »

ತವರಲ್ಲಿ ಅಬ್ಬರಿಸಿದ ಕೆಕೆಆರ್| ಸನ್ ರೈಸರ್ಸ್ ಗೆ ಹೀನಾಯ ಸೋಲು

ಸಮಗ್ರ ನ್ಯೂಸ್: ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 80 ರನ್‌ಗಳ ಭಾರಿ ಗೆಲುವು ಸಾಧಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಅಕ್ಷರಶಃ ತತ್ತರಿಸಿತು. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು

ತವರಲ್ಲಿ ಅಬ್ಬರಿಸಿದ ಕೆಕೆಆರ್| ಸನ್ ರೈಸರ್ಸ್ ಗೆ ಹೀನಾಯ ಸೋಲು Read More »

ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..!

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಮನನೊಂದು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ತನ್ನ ಮೇಲೆ FIR ದಾಖಲಾಗಿದಕ್ಕೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್ ಐ ಆರ್ ನಿಂದ ಮನನೊಂದು ಸಾವನ್ನಪ್ಪುತ್ತಿರುವುದಾಗಿ ಬರೆದುಕೊಂಡಿದ್ದಾರೆ. ವಿನಯ್ ಸೋಮಯ್ಯ, ಶಾಸಕ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ

ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..! Read More »

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು?

ಸಮಗ್ರ ನ್ಯೂಸ್: ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ‌ ಕಂಡಿದೆ. ಇಂದು ಗ್ರಾಮ್​​ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ. 8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್​​ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ

ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು? Read More »

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ

ಸಮಗ್ರ ನ್ಯೂಸ್: ದೇಶಭಕ್ತಿ ಚಿತ್ರಗಳು ಮತ್ತು ‘ಭರತ್ ಕುಮಾರ್’ ಎಂಬ ಅಡ್ಡಹೆಸರಿನಿಂದ ಹೆಸರುವಾಸಿಯಾದ ಭಾರತೀಯ ನಟ ಮತ್ತು ಚಲನಚಿತ್ರ ನಿರ್ದೇಶಕ ಮನೋಜ್ ಕುಮಾರ್, ತಮ್ಮ 87 ನೇ ವಯಸ್ಸಿನಲ್ಲಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. ಕುಮಾರ್ 1999 ರಲ್ಲಿ ನಟನೆಯಿಂದ ನಿವೃತ್ತರಾದರು, ಆದರೆ ಅವರ ಚಲನಚಿತ್ರಗಳನ್ನು ಇನ್ನೂ ಯುವಕರು ವೀಕ್ಷಿಸುತ್ತಾರೆ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು 1992 ರಲ್ಲಿ ಪದ್ಮಶ್ರೀ ಮತ್ತು ಭಾರತೀಯ ಚಲನಚಿತ್ರ ಮತ್ತು ಕಲೆಗಳಿಗೆ ನೀಡಿದ ಕೊಡುಗೆಗಾಗಿ 2015 ರಲ್ಲಿ

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ Read More »

ರಾಜ್ಯಸಭೆಯಲ್ಲಿ ‌ತಡರಾತ್ರಿ 2.35ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

ಸಮಗ್ರ ನ್ಯೂಸ್: ಲೋಕಸಭೆಯು ಅಂಗೀಕರಿಸಿದ ಒಂದು ದಿನದ ನಂತರ ರಾಜ್ಯಸಭೆಯು ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ರಾಜ್ಯಸಭೆಯು ಏಪ್ರಿಲ್ 3-4 ರ ಮಧ್ಯರಾತ್ರಿ ವಿವಾದಾತ್ಮಕ ವಕ್ಫ್(ತಿದ್ದುಪಡಿ) ಮಸೂದೆ- 2025 ಅನ್ನು ಅಂಗೀಕರಿಸಿತು, ಬಿಸಿ ಚರ್ಚೆಯ ನಂತರ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ‘ಪರವಾಗಿ'(ಹೌದು) 128 ಮತ್ತು ‘ವಿರುದ್ಧ’ (ಇಲ್ಲ) 95 ಮತಗಳಿಂದ ಅಂಗೀಕರಿಸಲಾಯಿತು. ಸರ್ಕಾರವು ಇದನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (UMEED) ಮಸೂದೆ ಎಂದು ಮರುನಾಮಕರಣ ಮಾಡಲು

ರಾಜ್ಯಸಭೆಯಲ್ಲಿ ‌ತಡರಾತ್ರಿ 2.35ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ Read More »

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ನೀರಕಟ್ಟೆಯ ಅಪಾಯಕಾರಿ ತಿರುವನ್ನು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದು, ಹತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರು ಹಾಗೂ

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ Read More »