January 2025

ಮೊಮ್ಮಗಳಿಗಿಂತಲೂ ಚಿಕ್ಕವಳಾದ ಜತೆ ಯಡಿಯೂರಪ್ಪ ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ

ಸಮಗ್ರ ನ್ಯೂಸ್ : ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕೋ ಪ್ರಕರಣ ಇದೀಗ ಮತ್ತೇ ಚರ್ಚೆಯಾಗುತ್ತಿದೆ. ಇದಕ್ಕೆಲ್ಲ ಕಾರಣ ಸಂತ್ರಸ್ಥೆಯ ಸಹೋದರನ ವಿಡಿಯೋ ಹೇಳಿಕೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿರುವ ವ್ಯಕ್ತಿ ಬಿಎಸ್‌ವೈ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.ತನ್ನ ಸಹೋದರಿ ತನಗಾದ ಚಿತ್ರಹಿಂಸೆಯಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾಳೆ ಎಂದು ನೋವು ತೋಡುಕೊಂಡಿದ್ದಾರೆ. ಅತೀವ ದುಃಖದಿಂದ ನಾನು ಇಂದು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಪುಟ್ಟ ತಂಗಿ ಮೇಲಾದ […]

ಮೊಮ್ಮಗಳಿಗಿಂತಲೂ ಚಿಕ್ಕವಳಾದ ಜತೆ ಯಡಿಯೂರಪ್ಪ ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ Read More »

ಶರಣಾಗುವವರಿಗೆ ಕೊಡುವ ಪರಿಹಾರ ನಮಗೂ ಕೊಡಿ; ಎನ್ ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಮನವಿ!

ಸಮಗ್ರ ನ್ಯೂಸ್ : ಕಳೆದ ನವೆಂಬರ್ ತಿಂಗಳು ನಡೆದಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನಿಂದ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿದ್ದಾರೆ. ಇಂದು ಸುಮಾರು ಆರು ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಎನ್‌ಕೌಂಟರ್‌ಗೆ ಬಲಿಯಾಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ ಪರಿಹಾರ ಆದರೂ ನೀಡಿ ಎಂದು ಮನವಿ ಮಾಡಿದ್ದಾರೆ.ನಕ್ಸಲರ ಶರಣಾಗತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸುಗುಣ, ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ.

ಶರಣಾಗುವವರಿಗೆ ಕೊಡುವ ಪರಿಹಾರ ನಮಗೂ ಕೊಡಿ; ಎನ್ ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಮನವಿ! Read More »

180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ;ನಟನ ಪರಿಸ್ಥಿತಿ ಹೇಗಿದೆ?

ಸಮಗ್ರ ನ್ಯೂಸ್: ನಟ ಅಜಿತ್‌ ಅವರು ದೊಡ್ಡ ಸಾಹಸಿ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕಾರುಗಳ ಬಗ್ಗೆ ಅವರಿಗೆ ವಿಶೇಷವಾದ ಕ್ರೇಜ್ ಇದೆ. ಅದರಲ್ಲೂ ಕಾರ್ ರೇಸ್ ಮತ್ತು ಬೈಕ್ ರೇಸ್ ಎಂದರೆ ಅವರಿಗೆ ಸಖತ್ ಇಷ್ಟ. ಆದರೆ ಅದರಿಂದ ಅಪಾಯ ಕೂಡ ಎದುರಾಗಿದೆ. ದುಬೈನಲ್ಲಿ ಕಾರು ರೇಸ್ ಅಭ್ಯಾಸ ಮಾಡುವ ಸಂದರ್ಭದಲ್ಲಿ ಅಜಿತ್ ಅವರಿಗೆ ಅಪಘಾತ ಆಗಿದೆ. 180 ಕಿಮೀ ವೇಗದಲ್ಲಿ ಅಜಿತ್ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ

180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ;ನಟನ ಪರಿಸ್ಥಿತಿ ಹೇಗಿದೆ? Read More »

ಶೇಖ್‌ ಹಸೀನಾ ಪಾಸ್‌ಪೋರ್ಟ್‌ ರದ್ದು/ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ಮಧ್ಯಂತರ ಸರ್ಕಾರ

ಸಮಗ್ರ ನ್ಯೂಸ್‌: ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಾಸ್ ಪೋರ್ಟ್ ರದ್ದುಗೊಳಿಸಿದೆ. ಢಾಕಾದಲ್ಲಿ ಮಧ್ಯಂತರ ಸರ್ಕಾರ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದೆ. ಕ್ರಿಮಿನಲ್‌ ವಿಚಾರಣೆಯ ಹಿನ್ನೆಲೆಯಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 97 ವ್ಯಕ್ತಿಗಳ ಪಾಸ್ ಪೋರ್ಟ್ ಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

ಶೇಖ್‌ ಹಸೀನಾ ಪಾಸ್‌ಪೋರ್ಟ್‌ ರದ್ದು/ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ಮಧ್ಯಂತರ ಸರ್ಕಾರ Read More »

ಇಸ್ರೋ ನೂತನ ಮುಖ್ಯಸ್ಥರಾಗಿ ವಿ ನಾರಾಯಣನ್/ ಜನವರಿ 14 ರಂದು ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಬಾಹ್ಯಾಕಾಶ ಸಚಿವಾಲಯದ ಹೊಸ ಮುಖ್ಯಸ್ಯರನ್ನಾಗಿ ವಿ ನಾರಾಯಣನ್ ಅವರನ್ನು ಕೇಂದ್ರ ಸರ್ಕಾರವು ನೇಮಿಸಿದೆ. ಅವರು ಜನವರಿ 14 ರಂದು ಪ್ರಸ್ತುತ ಇಸ್ರೋ ಮಹಾನಿರ್ದೇಶಕ ಎಸ್‌.ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದ ಸಂಪುಟದ ನೇಮಕಾತಿ ಸಮಿತಿ ಅಧಿಸೂಚನೆಯನ್ನೂ ಹೊರಡಿಸಿದೆ. ಜನವರಿ 14 ರಿಂದ ಎರಡು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಲಿದ್ದಾರೆ. ವಿ ನಾರಾಯಣನ್ ಅವರು ಸುಮಾರು 40 ವರ್ಷಗಳ ಅನುಭವ ಹೊಂದಿದ್ದಾರೆ.

ಇಸ್ರೋ ನೂತನ ಮುಖ್ಯಸ್ಥರಾಗಿ ವಿ ನಾರಾಯಣನ್/ ಜನವರಿ 14 ರಂದು ಅಧಿಕಾರ ಸ್ವೀಕಾರ Read More »

‘ಒಂದು ರಾಷ್ಟ್ರ, ಒಂದು ಚುನಾವಣೆ’/ ಇಂದು ಜಂಟಿ ಸಂಸದೀಯ ಸಮಿತಿಯ ಮೊದಲ ಸಭೆ

ಸಮಗ್ರ ನ್ಯೂಸ್‌: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮೊದಲ ಸಭೆ ದೆಹಲಿಯಲ್ಲಿ ಇಂದು ನಡೆಯಲಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಪಿಪಿ ಚೌಧರಿ, ಜೆಪಿಸಿ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ಪ್ರಸ್ತಾಪಿಸುವ ಮಸೂದೆಗಳನ್ನು ಪರಿಶೀಲಿಸಲು ನಿಯೋಜಿಸಲಾದ ಸಂಸದೀಯ ಸಮಿತಿಗೆ ವಿವರಿಸಲು ನಿರ್ಧರಿಸಲಾಗಿದೆ. ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು

‘ಒಂದು ರಾಷ್ಟ್ರ, ಒಂದು ಚುನಾವಣೆ’/ ಇಂದು ಜಂಟಿ ಸಂಸದೀಯ ಸಮಿತಿಯ ಮೊದಲ ಸಭೆ Read More »

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆ‌ರ್ ದಾಖಲು

ಸಮಗ್ರ ನ್ಯೂಸ್ : ಮದುವೆಗೆ ಸಾಲ ಕೊಡುವುದಾಗಿ ಯುವತಿಯನ್ನು ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಬಿಜೆಪಿ ಮುಖಂಡನೋರ್ವ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ (BJP) ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖ‌ರ್ ಪರಿಚಯವಾಗಿತ್ತು.ಕಳೆದ ವರ್ಷ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆ‌ರ್ ದಾಖಲು Read More »

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆ‌ರ್ ದಾಖಲು

ಸಮಗ್ರ ನ್ಯೂಸ್ : ಮದುವೆಗೆ ಸಾಲ ಕೊಡುವುದಾಗಿ ಯುವತಿಯನ್ನು ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಬಿಜೆಪಿ ಮುಖಂಡನೋರ್ವ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ (BJP) ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖ‌ರ್ ಪರಿಚಯವಾಗಿತ್ತು.ಕಳೆದ ವರ್ಷ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್

ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ:ಎಫ್‌ಐಆ‌ರ್ ದಾಖಲು Read More »

ಕಾಝಿರಂಗ ಸಫಾರಿ ವೇಳೆ ಅವಘಡ, ಜೀಪಿನಿಂದ ಘೇಂಡಾ ಮೃಗಗಳ ನಡುವೆ ಬಿದ್ದ ತಾಯಿ-ಮಗಳು

ಸಮಗ್ರ ನ್ಯೂಸ್: ಕಾಝಿರಂಗ ಜ.07 ರಂದು ಭಾರತದ ಜನಪ್ರಿಯ ವನ್ಯಮೃಗಗಳ ಕಾಝಿರಂಗ ರಾಷ್ಟ್ರೀಯ ಅಭಯಾರಣ್ಯ ಇಲ್ಲಿ ಘೇಂಡಾಮೃಗಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಗಳು ಕಾಣಸಿಗುತ್ತದೆ. ಹೀಗಾಗಿ ಹಲವು ಪ್ರವಾಸಿಗರು ಆ ತಾಣಕ್ಕೆ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ಬಂದ ಕುಟುಂಬ ಸಪಾರಿಗೆ ತೆರಳಿದೆ. ಬಗೋರಿ ರೇಂಜ್‌ನ ಸಫಾರಿಯಲ್ಲಿ ಪ್ರವಾಸಿಗರು ತೆರಳಿದ್ದಾರೆ. ತೆರೆದ ಜೀಪಿನಲ್ಲಿ ಹಲವು ಪ್ರವಾಸಿಗರು ವನ್ಯ ಮೃಗಗಳ ವೀಕ್ಷಣೆಗೆ ತೆರಳಿದ್ದಾರೆ. ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುತ್ತಾ ತೆರಳುತ್ತಿದ್ದ ಪ್ರವಾಸಿಗರ ವಾಹನಗಳು ಸಂಕೀರ್ಣ ಜಾಗಕ್ಕೆ ಬರುತ್ತಿದ್ದಂತೆ ಘೇಂಡಾ ಮೃಗಗಳ ಗುಂಪು

ಕಾಝಿರಂಗ ಸಫಾರಿ ವೇಳೆ ಅವಘಡ, ಜೀಪಿನಿಂದ ಘೇಂಡಾ ಮೃಗಗಳ ನಡುವೆ ಬಿದ್ದ ತಾಯಿ-ಮಗಳು Read More »

ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ

ಸಮಗ್ರ ನ್ಯೂಸ್ : ಚಿರತೆ ಎಂದರೆ ಎಲ್ಲರೂ ಎದ್ದು ಬಿದ್ದು ಓಡೋರೆ ಹೆಚ್ಚು, ಇನ್ನು ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಂದರೆ ಜನ ಹಿಂದೆ ಹಿಂದೆ ಸಾಗುತ್ತಾ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೂ ಅಡ್ಡಿಪಡಿಸುತ್ತಾ ಕ್ವಾಟ್ಲಿ ನೀಡ್ತಾರೆ. ಆದರೆ ಇಲ್ಲೊಂದು ಕಡೆ ಯುವಕನೇ ಅರಣ್ಯ ಇಲಾಖೆಯವರಿಗೆ ಚಿರತೆ ಹಿಡಿದು ಕೊಟ್ಟ ಘಟನೆ ತುಮಕೂರಿನ ತಿಪಟೂರಿನಲ್ಲಿ ನಡೆದಿದೆ. ಊರಿಗೆ ಚಿರತೆ ನುಗ್ಗಿದ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಲೆಯೊಂದಿಗೆ ಚಿರತೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿ ಬಂದಿದ್ದಾರೆ.

ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ Read More »