Ad Widget .

ಗೀಸರ್ ಫಿಟ್ ಮಾಡಲು ಬಂದಿದ್ದ ವ್ಯಕ್ತಿಯಿಂದ ರಹಸ್ಯ ಕ್ಯಾಮರಾ ಅಳವಡಿಸಿ ಮಹಿಳೆಯ ಬ್ಲ್ಯಾಕ್ ಮೇಲ್| ಖಾಸಗಿ ಫೋಟೋ ವೈರಲ್ ಮಾಡುತ್ತೇನೆಂದವಗೆ ಬಿತ್ತು ಬಿಸಿಬಿಸಿ ಕಜ್ಜಾಯ

ಸಮಗ್ರ ನ್ಯೂಸ್: ಗೀಸರ್ ಫಿಟ್ ಮಾಡಲೆಂದು ಬಂದಿದ್ದ ವ್ಯಕ್ತಿಯೋರ್ವ ರಹಸ್ಯ ಕ್ಯಾಮರಾ ಅಳವಡಿಸಿ, ಮಹಿಳೆಯ ಖಾಸಗಿ ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಿರಾತಕನನ್ನು ಸ್ಥಳೀಯ ನಿವಾಸಿಗಳು ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget .

ಸಿ.ಕೆ.ಪಾಳ್ಯದ ಮುರಳಿ ಎಂಬಾತ ಗೀಸರ್ ಫಿಟ್ ಮಾಡಲೆಂದು ಮನೆಗೆ ಬಂದಿದ್ದ. ಈ ವೇಳೆ ರಹಸ್ಯ ಕ್ಯಾಮರಾ ಅಳವಡಿಸಿ ಹೋಗಿದ್ದಾನೆ. ಮಹಿಳೆಗೆ ಕಳೆದ ಒಂದು ವರ್ಷದಿಂದ ಬ್ಲ್ಯಾಕ್ ಮೇಲ್ ಮಾಡಿ ತಾನು ಕರೆದಲ್ಲೆಲ ಬರಬೇಕು ಇಲ್ಲವಾದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

Ad Widget . Ad Widget .

ವಿಷಯ ತಿಳಿದ ಸ್ಥಳೀಯ ನಿವಾಸಿಗಳು, ಆರೋಪಿ ಮುರುಳಿಯನ್ನು ಪಕ್ಕಾ ಪ್ಲಾನ್ ಮಾಡಿ ಹಿಡಿದಿದ್ದಾರೆ. ಹೀಗೆ ಹಿಡಿದವರೇ ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *