ಸಮಗ್ರ ನ್ಯೂಸ್: ಸೈಬರ್ ವಂಚಕರು ಹಣ ದೋಚಲು ಹೊಸ ಹೊಸ ತಂತ್ರ ಹುಡುಕುತ್ತಿದ್ದು, ನಗರದಲ್ಲಿ ಪೋನ್ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ವ್ಯಕ್ತಿಯೋರ್ವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ.
ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಮುಂಜಾನೆ ಪೋನ್ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ ಕೂಡಲೇ ಕರೆ ಕಡಿತಗೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಈ ದೂರವಾಣಿ ಸಂಖ್ಯೆ ಜೋಡಣೆ ಆಗಿದ್ದ ಬ್ಯಾಂಕಿನ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ದೂರು ಸಲ್ಲಿಸಿದಾಗ, 161 ರೂ. ವರ್ಗಾವಣೆಗೊಂಡಿದ್ದು, ಸಮರ್ಪಕ ಬ್ಯಾಲೆನ್ಸ್ ಇಲ್ಲದ ಕಾರಣ 14,839 ರೂ. ವರ್ಗಾವಣೆ ಆಗಿಲ್ಲ ಎಂದು ತಿಳಿದು ಬಂತು.
ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಅದನ್ನು ಸ್ವೀಕರಿಸಲಿಲ್ಲ. ಕರೆ ಬಂದ ಪೋನ್ ನಂಬರ್ 68778220051 ಆಗಿದ್ದು, ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.