November 2024

ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾ ದಾಳಿ : ‘IV’ ಗ್ಲುಕೋಸ್ ಬಾಕ್ಸ್ ಕಂಡು ಶಾಕ್ ಆದ ಅಧಿಕಾರಿಗಳು

ಸಮಗ್ರ ನ್ಯೂಸ್: ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರ ತನಿಖಾ ತಂಡ ರಚನೆ ಮಾಡಿತ್ತು. ಐ ವಿ ಗ್ಲುಕೋಸ್ ನಿಂದ ಬಾಣಂತಿಯರ ಸಾವು ಆಗಿದೆ ಎಂದು ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಬೆಳಗಾವಿಯ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಇದೀಗ ಆರ್‌ಎಲ್‌ಎಸ್ ಐವಿ ಗ್ಲುಕೋಸ್ ಬಾಕ್ಸ್ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೌದು ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದಲ್ಲಿ ಐವಿ ಗ್ಲುಕೋಸ್ ಪತ್ತೆಯಾಗಿದೆ.ಖಚಿತ ಮಾಹಿತಿಯನ್ನು ಆಧರಿಸಿ ಉಗ್ರಾಣದ ಮೇಲೆ […]

ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾ ದಾಳಿ : ‘IV’ ಗ್ಲುಕೋಸ್ ಬಾಕ್ಸ್ ಕಂಡು ಶಾಕ್ ಆದ ಅಧಿಕಾರಿಗಳು Read More »

ಹವಾಮಾನ ವರದಿ| ಡಿ.5ರವರೆಗೆ ರಾಜ್ಯಾದ್ಯಂತ ಸಾಧಾರಣದಿಂದ ಭಾರೀ ಮಳೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಡಿಸೆಂಬರ್‌ 5ರವರೆಗೂ ಮಳೆ ಮುಂದುವರಿಯಲಿದೆ. ಡಿಸೆಂಬರ್‌ 1ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನುಳಿದಂತೆ ಬೇರೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವುದು. ಡಿಸೆಂಬರ್‌ 2ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಾದ

ಹವಾಮಾನ ವರದಿ| ಡಿ.5ರವರೆಗೆ ರಾಜ್ಯಾದ್ಯಂತ ಸಾಧಾರಣದಿಂದ ಭಾರೀ ಮಳೆ Read More »

ಕಲಬುರಗಿ | 93 ವರ್ಷದ ಮಹಿಳಾ ಖೈದಿ ಪರೋಲ್ ಮೇಲೆ ಬಿಡುಗಡೆ

ಸಮಗ್ರ ನ್ಯೂಸ್ : 93 ವರ್ಷದ ವೃದ್ಧ ಮಹಿಳಾ ಖೈದಿಯನ್ನು ಗುರುವಾರ ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ನ.16ರಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 93 ವರ್ಷದ ವೃದ್ದೆ, ಮಹಿಳಾ ಸಜೆ ಕೈದಿಯೊಬ್ಬರು, ಸ್ವ ಕಾರ್ಯಗಳನ್ನು ಮಾಡಿಕೊಳ್ಳಲಾರದ ಸ್ಥಿತಿಯಲ್ಲಿ, ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದ ಸ್ಥಿತಿಯನ್ನು ಕಂಡು ಮುರುಗಿದ್ದರು.ಕಾನೂನು ಸೇವಾ ಪ್ರಾಧಿಕಾರಕ್ಕೆ ಸದರಿ ಮಹಿಳೆಯನ್ನು ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದರು. ಅವರ

ಕಲಬುರಗಿ | 93 ವರ್ಷದ ಮಹಿಳಾ ಖೈದಿ ಪರೋಲ್ ಮೇಲೆ ಬಿಡುಗಡೆ Read More »

ಚಿಂಚೋಳಿ | ವೃದ್ಧೆಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಸಮಗ್ರ ನ್ಯೂಸ್:ಚಿಂಚೋಳಿ ಕಲಬುರಗಿ ಜಿಲ್ಲೆ ತಾಲ್ಲೂಕಿನ ಗ್ರಾಮವೊಂದರ 80 ವರ್ಷದ ವಯೋ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಬೆಳ್ಳಿ ಚೈನ್ ಹಾಗೂ ಮೊಬೈಲ್ ದೋಚಿದ್ದ ಆರೋಪಿಯನ್ನು ಚಿಂಚೋಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಾಲ್ಲೂಕಿನ ಐನೋಳ್ಳಿ ಗ್ರಾಮದ ತಯ್ಯಬ್ ಮಿರನಶಹಾ ಫಕೀರ ಎಂಬಾತನನ್ನು ಹೈದರಾಬಾದಿನಲ್ಲಿ ವಶಕ್ಕೆ ಪಡೆದ ಪೊಲೀಸರು, ಆತನ ಆರೋಗ್ಯ ತಪಾಸಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಈತನ ಬಳಿ ಮೊಬೈಲ್, ಆಧಾರ ಕಾರ್ಡ್ ಮತ್ತು ಗುರುತಿನ ಚೀಟಿಯಿಲ್ಲವಂತೆ. ಕುಟುಂಬದ ಜತೆಗೆ ಸರಿಯಾಗಿ ನಂಟು ಇಲ್ಲದೇ ಊರೂರು

ಚಿಂಚೋಳಿ | ವೃದ್ಧೆಯ ಮೇಲೆ ಅತ್ಯಾಚಾರ: ಆರೋಪಿ ಬಂಧನ Read More »

ಮಲಗಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ ಮಾಡಿದ ಹೆಂಡತಿ.!

ಸಮಗ್ರ ನ್ಯೂಸ್:ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದು ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಮೀನು ವ್ಯಾಪಾರಿಯಾಗಿದ್ದ ರವಿ ಎಂಬಾತ 20 ವರ್ಷಗಳ ಹಿಂದೆ ಜಯಂತಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ.ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.ರವಿ ದಿನವೂ ಕುಡಿದು ಮನೆಗೆ ಬರುತ್ತಿದ್ದನು ಮತ್ತು ಪ್ರತಿದಿನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಇದರಿಂದ ಪತಿ-ಪತ್ನಿಯ ನಡುವೆ ಜಗಳ ಉಂಟಾಗಿತ್ತು. ಒಂದು ಹಂತದಲ್ಲಿ ಪತಿಯ ಕ್ರೌರ್ಯವನ್ನು ಸಹಿಸಲಾಗದೆ ಜಯಂತಿ ಅಡುಗೆ ಎಣ್ಣೆಯನ್ನು ಕುದಿಸಿ ಮಲಗಿದ್ದ

ಮಲಗಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ ಮಾಡಿದ ಹೆಂಡತಿ.! Read More »

ಮುಸ್ಲಿಂರಿಗೆ ಮತದಾನದ ಹಕ್ಕು ಬೇಡ, ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್‌ಐಆರ್‌ಗೆ ಶಾಸಕ ಯತ್ನಾಳ ಹೇಳಿದ್ದೇನು?

ಸಮಗ್ರ ನ್ಯೂಸ್ : ಮುಸ್ಲಿಂರ ಮತದಾನದ ಹಕ್ಕು ಕಿತ್ತುಕೊಳ್ಳುವ ಬಗ್ಗೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ ಹೇಳಿಕೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡಿದ್ದಲ್ಲದೇ ಸ್ವಾಮೀಜಿ ಹೇಳಿಕೆಗೆ ಸ್ವಾಗತ ಎಂದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಸಮಾರಂಭವೊಂದರಲ್ಲಿ ಚಂದ್ರಶೇಖರ ಸ್ವಾಮೀಜಿ ಮುಸ್ಲಿಂರ ಮತದಾನದ ಹಕ್ಕು ಕಿತ್ತುಕೊಳ್ಳುವ ಬಗ್ಗೆ ಮಾತನಾಡಿದ್ದರು.ಅಲ್ಲದೇ, ತಮ್ಮ ಹೇಳಿಕೆಗೆ ವಿಷಾದ ಕೂಡ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಸ್ವಾಮೀಜಿ ಮೇಲೆ ಎಫ್‌ಐಆ‌ರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳರು ಸ್ವಾಮೀಜಿ ಹೇಳಿಕೆ ಸರಿಯಾಗಿದೆ ಎಂದಿದ್ದಾರೆ. ಸ್ವಾಮೀಜಿ ಮೇಲೆ

ಮುಸ್ಲಿಂರಿಗೆ ಮತದಾನದ ಹಕ್ಕು ಬೇಡ, ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್‌ಐಆರ್‌ಗೆ ಶಾಸಕ ಯತ್ನಾಳ ಹೇಳಿದ್ದೇನು? Read More »

ನಿಂಬೆ ರಸ, ಅರಿಶಿನದಿಂದ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸ‌ರ್ ಸಿಧುಗೆ ಬಿಗ್ ಶಾಕ್! 850 ಕೋಟಿ ರೂ. ನೋಟಿಸ್

ಸಮಗ್ರ ನ್ಯೂಸ್: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರಿಗೆ ಬಿಗ್ ಶಾಕ್ ಎದುರಾಗಿದೆ. ಯಾವುದೇ ಅಲೋಪತಿ ಔಷಧಗಳಿಲ್ಲದೆ 4ನೇ ಹಂತದ ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಅದ್ಭುತವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಅವರ ವಿರುದ್ಧ ಛತ್ತೀಸ್‌ಗಢ ಸಿವಿಲ್ ಸೊಸೈಟಿ ಆಕ್ರೋಶ ವ್ಯಕ್ತಪಡಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸಿಧು ಅವರ ಪತ್ನಿ ನವಜೋತ್‌ ಕೌರ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲವಾದಲ್ಲಿ 850

ನಿಂಬೆ ರಸ, ಅರಿಶಿನದಿಂದ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸ‌ರ್ ಸಿಧುಗೆ ಬಿಗ್ ಶಾಕ್! 850 ಕೋಟಿ ರೂ. ನೋಟಿಸ್ Read More »

ಕುಕ್ಕೆ ಸುಬ್ರಹ್ಮಣ್ಯನ ಜಾತ್ರೆಗೆ ತಯಾರಾಗುತ್ತಿದೆ ಬೆತ್ತದಿಂದ ರಥ| ಮೂಲ ನಿವಾಸಿಗಳಿಂದ‌ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಬೆತ್ತದ ರಥಗಳು ಪ್ರಧಾನವಾಗಿವೆ. ಮಲೆಕುಡಿಯ ಜನಾಂಗದವರು ತಮ್ಮ ಕೈಚಳಕದಿಂದ ತೇರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಹಗ್ಗ ಬಳಸದೆ ಬೆತ್ತಗಳಿಂದಲೇ ವಿಶಿಷ್ಟವಾದ ರಥವನ್ನು ಅವರು ನಿರ್ಮಿಸುತ್ತಿದ್ದಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿ ರಥಗಳನ್ನು ಸಂಪ್ರದಾಯದಂತೆ ನಿರ್ಮಿಸುತ್ತಿದ್ದಾರೆ. ರಥದ ಅಟ್ಟೆಯನ್ನು

ಕುಕ್ಕೆ ಸುಬ್ರಹ್ಮಣ್ಯನ ಜಾತ್ರೆಗೆ ತಯಾರಾಗುತ್ತಿದೆ ಬೆತ್ತದಿಂದ ರಥ| ಮೂಲ ನಿವಾಸಿಗಳಿಂದ‌ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ Read More »

ತೀವ್ರತೆ ಪಡೆದ ಫೆಂಗಲ್ ಚಂಡಮಾರುತ| ಇಂದು ಪೂರ್ವ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ| ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ; ಕರ್ನಾಟಕದಲ್ಲೂ ಮಳೆ ಸಂಭವ

ಸಮಗ್ರ ನ್ಯೂಸ್: ಬಂಗಾಲಕೊಲ್ಲಿಯಲ್ಲಿ “ಫೆಂಗಲ್‌’ ಚಂಡಮಾರುತ ತೀವ್ರತೆ ಪಡೆದಿದ್ದು, ಗಂಟೆಗೆ 90 ಕಿ.ಮೀ.ವೇಗದಲ್ಲಿ ಶನಿವಾರ ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಮಿಳುನಾಡು, ಪುದು ಚೇರಿಯ ಜತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್‌ ಅಲರ್ಟ್‌ ಘೋಷಿಸಿದೆ. ಕಾಂಚೀಪುರಂನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರಪತಿ

ತೀವ್ರತೆ ಪಡೆದ ಫೆಂಗಲ್ ಚಂಡಮಾರುತ| ಇಂದು ಪೂರ್ವ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ| ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ; ಕರ್ನಾಟಕದಲ್ಲೂ ಮಳೆ ಸಂಭವ Read More »

ಕುಕ್ಕೆ ಸುಬ್ರಹ್ಮಣ್ಯ: ಇಂದು ಲಕ್ಷದೀಪೋತ್ಸವ, ಅಖಂಡ ಕುಣಿತ ಭಜನೆ ಸಂಭ್ರಮ| ರಾತ್ರಿಯಿಂದ ಬೀದಿ ಮಡೆಸ್ನಾನ ಆರಂಭ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ನ.30ರಂದು ಲಕ್ಷದೀಪೋತ್ಸವ ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷ ದೀಪಗಳು ಬೆಳಗಲಿವೆ. ಜತೆಗೆ ವಿಶೇಷವಾಗಿ ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ. ಸಂಜೆ 6ರಿಂದ ರಾತ್ರಿ 8ರ ತನಕ ರಥೋತ್ಸವದ ಮೊದಲು ಕುಣಿತ ಭಜನೆ

ಕುಕ್ಕೆ ಸುಬ್ರಹ್ಮಣ್ಯ: ಇಂದು ಲಕ್ಷದೀಪೋತ್ಸವ, ಅಖಂಡ ಕುಣಿತ ಭಜನೆ ಸಂಭ್ರಮ| ರಾತ್ರಿಯಿಂದ ಬೀದಿ ಮಡೆಸ್ನಾನ ಆರಂಭ Read More »