ಕಾರು-ಬೈಕ್ ಡಿಕ್ಕಿ;ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಕಾರು-ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಅ.05 ರಂದು ಕಡಬದಲ್ಲಿ ನಡೆದಿದೆ.

Ad Widget ... ..

ಮೃತರನ್ನು‌ ಕಡಬ ಹಳೇಸ್ಟೇಷನ್ ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ದುರ್ಘಟನೆ ಸಂಭವಿಸಿದೆ.

Ad Widget

ಅಪಘಾತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *