ಸಮಗ್ರ ನ್ಯೂಸ್: ಕೋಟಿ ಕೋಟಿ ಭಾರತೀಯರು & ಇಡೀ ಪ್ರಪಂಚವೇ ಕಾಯುತ್ತಿರುವ ಘಳಿಗೆ ಇದೀಗ ಬಂದಿದ್ದು, ಬಾಹ್ಯಾಕಾಶ ಅಧ್ಯಯನಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ ಅವರು ಇದೀಗ ಮರಳಿ ಭೂಮಿಗೆ ಬರುತ್ತಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಅವರನ್ನ ಈಗ ಭೂಮಿಗೆ ಕರೆದುಕೊಂಡು ಬರಲು ‘ಸ್ಪೇಸ್ ಎಕ್ಸ್’ ಆಕಾಶಕ್ಕೆ ತಲುಪಿದೆ.
ಭಾರತ ಮೂಲದ ನಂಟು ಹೊಂದಿರುವ ಬಾಹ್ಯಾಕಾಶ ವಿಜ್ಞಾನಿ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಬರುತ್ತಿದ್ದಾರೆ. ಹಾಗಾದ್ರೆ ಇವರು ಇಷ್ಟುದಿನ ಎಲ್ಲಿ ಇದ್ದರು? ಅಂತಾ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೂ ಇದು ನಿಜ, ಯಾಕಂದ್ರೆ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ವಿಜ್ಞಾನಿ ಆಗಿದ್ದು, ಹಲವು ಬಾರಿ ಆಕಾಶಕ್ಕೆ ಹೋಗಿ ಅಧ್ಯಯನ ನಡೆಸಿ ಭೂಮಿಗೆ ವಾಪಸ್ ಬಂದಿದ್ದಾರೆ.
ಅದೇ ರೀತಿ ಸುನಿತಾ ವಿಲಿಯಮ್ಸ್ ಇದೇ ವರ್ಷದ ಜೂನ್ ತಿಂಗಳಲ್ಲಿ ಬೋಯಿಂಗ್ ಸ್ಟಾರ್ ಲೈನರ್ ನೌಕೆ ಮೂಲಕ, ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ರು. ಸುನಿತಾ ವಿಲಿಯಮ್ಸ್ ಅವರ ಜೊತೆಗೆ ಬುಚ್ ವಿಲ್ಮೋರ್ ಕೂಡ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಹೀಗೆ ಹೋದವರು ವಾಪಸ್ ಬರಬೇಕು ಅಂತಾ ಸಿದ್ಧತೆ ನಡೆಸಿದ್ದಾಗಲೇ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿತ್ತು!
ಸುನಿತಾ ವಿಲಿಯಮ್ಸ್ & ಬುಚ್ ವಾಪಸ್ ಭೂಮಿಗೆ ಬರಲು ತಾಂತ್ರಿಕ ದೋಷ ಅಡ್ಡಿಯಾದ ಹಿನ್ನೆಲೆ ಆತಂಕ ಮನೆಮಾಡಿತ್ತು. ಈ ಕಾರಣಕ್ಕೆ ‘ನಾಸಾ’ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದರು. ಇದೆಲ್ಲಾ ವರ್ಕೌಟ್ ಆಗದೇ ಕೊನೆಗೆ ‘ಸ್ಪೇಸ್ ಎಕ್ಸ್’ ನೌಕೆ ಇದೀಗ ಆಕಾಶಕ್ಕೆ ಹಾರಿದೆ. ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯ ಡ್ಯ್ರಾಗನ್ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಶಸ್ವಿಯಾಗಿ ತಲುಪಿದೆ. ಆದರೆ ನೌಕೆ ದಿಢೀರ್ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲ್ಲ. ಯಾಕಂದ್ರೆ ಇದಕ್ಕೆ ಒಂದಷ್ಟು ಸಮಯ ಬೇಕಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ಭೂಮಿಗೆ ವಾಪಸ್ ಬರುವ ನಿರೀಕ್ಷೆ ಇದೆ.