September 2024

ಎತ್ತಿನಹೊಳೆ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಮೊದಲೇ ಕುಸಿದ ಚಪ್ಪರ

ಸಮಗ್ರ ನ್ಯೂಸ್: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿತರಣಾ ಟ್ಯಾಂಕ್ 4ರಲ್ಲಿ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ದೊಡ್ಡನಗರ ವಿತರಣಾ ಟ್ಯಾಂಕ್ ಡಿಸಿ-3 ರಿಂದ ಹೆಬ್ಬನಹಳ್ಳಿ ಡಿಸಿ-4 ವರೆಗೆ ನೀರು ಪಂಪ್ ಮಾಡುವ ವ್ಯವಸ್ಥೆಗೆ ಸಿಎಂ ಮತ್ತು ಡಿಸಿಎಂ ಚಾಲನೆ ನೀಡಲಿದ್ದಾರೆ. ಆದರೆ ಗಂಗಾ ಪೂಜೆ ಮತ್ತು ಬಾಗೀನ ಅರ್ಪಣೆ ಕಾರ್ಯಕ್ರಮಕ್ಕೆ ನಿರ್ಮಿಸಿದ ಚಪ್ಪರ ಇಂದು ಉದ್ಘಾಟನೆಯ ಮೊದಲೇ […]

ಎತ್ತಿನಹೊಳೆ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಮೊದಲೇ ಕುಸಿದ ಚಪ್ಪರ Read More »

ಚಿಕ್ಕಮಗಳೂರು: ಪ್ರಪಾತಕ್ಕೆ ಬಿದ್ದ ಗೂಡ್ಸ್ ಗಾಡಿ; ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್: ಗೂಡ್ಸ್ ಗಾಡಿಯೊಂದು 20 ಅಡಿ ಎತ್ತರದಿಂದ ಸ್ಕಿಡ್ ಆಗಿ ಕೆಳಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದಲ್ಲಿ ಸೆ.5 ರಂದು ನಡೆದಿದೆ. ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು ತಿರುವಿನಲ್ಲಿ ಗಾಡಿಯು ಗುಡ್ಡದ ಮರಗಿಡಗಳಿಗೆ ಸಿಲುಕಿ ಅಪಘಾತ ಸಂಭವಿಸಿದೆ. ಗಾಡಿ ಸ್ಲೋ ಇದ್ದ ಕಾರಣ ಗಾಡಿಯಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ಪ್ರಪಾತಕ್ಕೆ ಬಿದ್ದ ಗೂಡ್ಸ್ ಗಾಡಿ; ನಾಲ್ವರಿಗೆ ಗಾಯ Read More »

ಅಭಯ ಪ್ರದಾಯಕ, ವಿಘ್ನ ನಿವಾರಕ ಸೌತಡ್ಕ ಗಣಪ| ಬಯಲು ಆಲಯದಲ್ಲೇ ಸಕಲರ ಪೊರೆಯುವ ಗಣನಾಯಕ

ಸಮಗ್ರ ನ್ಯೂಸ್: ಸೌತಡ್ಕ ಮಹಾಗಣಪತಿ ದೇವಸ್ಥಾನ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿ ಈ ಮಹಾಗಣಪತಿ ದೇವಸ್ಥಾನವಿದೆ. ಗೋಪುರವಿಲ್ಲದೇ, ಗರ್ಭಗುಡಿ ಇಲ್ಲದೇ, ಬಯಲಿನಲ್ಲೇ ಮಹಾಗಣಪತಿ ಎಲ್ಲರಿಗೂ ದರ್ಶನ ನೀಡಿ, ಎಲ್ಲರ ಆಸೆಗಳನ್ನು ಈಡೇರಿಸುತ್ತಲೇ ಬಂದಿದ್ದಾನೆ. ಇನ್ನು ಗಣಪತಿಯ ಅಕ್ಕ ಪಕ್ಕ ಸಿದ್ಧಿ ಬುದ್ಧಿಯ ಮೂರ್ತಿಗಳು ಇದೆ. ಇನ್ನು ಮಹಾಗಣಪತಿ ಹೇಗೆ ಸೌತಡ್ಕಕ್ಕೆ ಬಂದು ನೆಲೆಸಿದ ಎಂದು ನೋಡುವುದಾದರೆ, ಈ ಸ್ಥಳದಲ್ಲಿ ಮೊದಲು ಒಂದು ಗಣೇಶನ ದೇವಸ್ಥಾನವಿತ್ತು. ಆದರೆ ಅದು ಬರೀ ರಾಜಮನೆತನದವರಿಗೆ ಮಾತ್ರ ಸೀಮಿತವಾಗಿತ್ತು. ರಾಜ

ಅಭಯ ಪ್ರದಾಯಕ, ವಿಘ್ನ ನಿವಾರಕ ಸೌತಡ್ಕ ಗಣಪ| ಬಯಲು ಆಲಯದಲ್ಲೇ ಸಕಲರ ಪೊರೆಯುವ ಗಣನಾಯಕ Read More »

ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿಯ ಇಬ್ಬರು ವೈದ್ಯೆಯರು ಆಯ್ಕೆ

ಸಮಗ್ರ ನ್ಯೂಸ್: ಈ ಬಾರಿಯ ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿ ಇಬ್ಬರು ವೈದ್ಯ ಬೆಡಗಿಯರು ಆಯ್ಕೆಯಾಗಿದ್ದಾರೆ.‌ ಫಿಲಿಪ್ಪಿನ್ಸ್​​ನಲ್ಲಿ ಈ ವರ್ಷಾಂತ್ಯ ನಡೆಯುವ ಸೌಂದರ್ಯ ಸ್ಪರ್ಧೆಗೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮತ್ತು ಡಾ.ಶ್ರುತಿ ಬಲ್ಲಾಳ್ ಆಯ್ಕೆಯಾಗಿದ್ದಾರೆ. ಈಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ನಡೆದ ಮಿಸ್ ಆಯಂಡ್ ಮಿಸೆಸ್ ಇಂಡಿಯಾದ 8ನೇ ಆವೃತ್ತಿಯ ಫ್ಯಾಷನ್‌ ಶೋ ಕಿರೀಟವನ್ನು ಮುಡಿಗೇರಿಸಿಕೊಂಡು, ಇವರು ಅಂತಾರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಂಡಿಪೆಂಡೆಂಟ್ ಇಂಡಿಯಾ ಇಂಟರ್ ನ್ಯಾಷನಲ್​ ವಿಭಾಗದಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್, ಅರ್ಥ್

ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿಯ ಇಬ್ಬರು ವೈದ್ಯೆಯರು ಆಯ್ಕೆ Read More »

ಕಡಬ: ತೋಡಿಗೆ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಪೇರಡ್ಕದಲ್ಲಿ ಮೀನಾಡಿ ಸಮೀಪದ ದೋಳ ನಿವಾಸಿ ಉಮೇಶ (35) ಅವರು ನೀರು ತುಂಬಿದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಕೂಲಿಕಾರ್ಮಿಕರಾಗಿದ್ದ ಅವರು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಸಂಜೆ ಸುಮಾರು ಒಂದು ಕಿ.ಮೀ. ದೂರದ ಪೇರಡ್ಕ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕಡಬ: ತೋಡಿಗೆ ಬಿದ್ದು ಯುವಕ ಸಾವು Read More »

ರಸ್ತೆ ಅಪಘಾತದಲ್ಲಿ ಪಣಂಬೂರು ಬಂದರ್ ನ ಉದ್ಯೋಗಿ ಮೃತ್ಯು

ಸಮಗ್ರ ನ್ಯೂಸ್: ರಸ್ತೆ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಸೆ. 5ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ. ಮೃತ ಗಣೇಶ ದೇವಾಡಿಗ (27) ಹಳೆಯಂಗಡಿ ಇಂದಿರಾನಗರ ನಿವಾಸಿಯಾಗಿದ್ದು, ಅವರು ಪಣಂಬೂರು ಬಂದರ್ ನಲ್ಲಿ ಉದ್ಯೋಗದಲ್ಲಿದ್ದು, ಬೆಳಗ್ಗೆ 7ಗಂಟೆಯ ಸುಮಾರಿಗೆ ಕೆಲಸಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಮುಕ್ಕ ಜಂಕ್ಷನ್ ನಲ್ಲಿ ಹಾಕಲಾಗಿದ್ದ ಬ್ಯಾರಿಕೆಟ್ ಬಳಿ ಸ್ಕೂಟರ್ ನಿಧಾನಿಸಿದಾಗ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಅವರು

ರಸ್ತೆ ಅಪಘಾತದಲ್ಲಿ ಪಣಂಬೂರು ಬಂದರ್ ನ ಉದ್ಯೋಗಿ ಮೃತ್ಯು Read More »

ಕುಕ್ಕೆ ಸುಬ್ರಹ್ಮಣ್ಯ:ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಸೇವಾ ಯೋಜನಾ ಘಟಕದ ಚಟುವಟಿಕೆ ಕಾರ್ಯಕ್ರಮದ ಉದ್ಘಾಟನೆಯು ಸೆ.5 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟರಾಗಿದ್ದ ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ರವರು ರಾಷ್ಟ್ರೀಯ ಯೋಜನೆಯ ಮಹತ್ವ ಹಾಗೂ ವ್ಯಕ್ತಿತ್ವ ವಿಕಾಸನದ ಬಗ್ಗೆ ತಿಳಿಸಿಕೊಟ್ಟರು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ. ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಲತಾ ಬಿ.ಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಸುಮಿತ್ರ ಘಟಕದ ಸದಸ್ಯರುಗಳಾದ ನಿಶಾ ಗೌರಿ

ಕುಕ್ಕೆ ಸುಬ್ರಹ್ಮಣ್ಯ:ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ Read More »

ಸುರತ್ಕಲ್: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

ಸಮಗ್ರ ನ್ಯೂಸ್: ರಾ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಸೆ.5ರಂದು ನಡೆದಿದೆ. ಸುಟ್ಟು ಕರಕಲಾದ ಕಾರು ಬೆನ್ಸ್ ಕಂಪೆನಿಯ ಕಾರೆಂದು ಹೇಳಲಾಗುತ್ತಿದ್ದು, ಕಾರು ಉಡುಪಿಯಿಂದ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಸುರತ್ಕಲ್ ಎನ್ ಐಟಿಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ . ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು ಸ್ಥಳಕ್ಕೆ

ಸುರತ್ಕಲ್: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ Read More »

ರೋಗಿಯನ್ನು ಹೊರಗೆಸೆದು ಅಂಬ್ಯುಲೆನ್ಸ್ ನಲ್ಲೇ ಚಾಲಕ ಮತ್ತು ಸಹಾಯಕನಿಂದ ರೋಗಿಯ ಪತ್ನಿಯ ಅತ್ಯಾಚಾರ| ಗಂಭೀರ ಗಾಯಗೊಂಡ ರೋಗಿ ಸಾವು

ಸಮಗ್ರ ನ್ಯೂಸ್: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ನಲ್ಲೇ ಚಾಲಕ ಹಾಗೂ ಆತನ ಸಹಾಯಕ ರೋಗಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಅಲ್ಲದ್ದೇ ಈ ವೇಳೆ ತಡೆಯಲು ಬಂದ ಪತಿಯನ್ನು ಈ ದುಷ್ಕರ್ಮಿಗಳು ಆಂಬುಲೆನ್ಸ್‌ನಿಂದ ಹೊರಗೆಸೆದಿದ್ದು, ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿ ಆತ ಸಾವನ್ನಪ್ಪಿದ್ದಾನೆ. ಲಕ್ನೋದ ಗಾಜಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರೋಗಿಯನ್ನು ಆಂಬುಲೆನ್ಸ್‌ನಲ್ಲಿ ಸಿದ್ಧಾರ್ಥನಗರ ಜಿಲ್ಲೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್‌ನಲ್ಲಿ ರೋಗಿಯ ಪತ್ನಿ ಹಾಗೂ ಆಕೆಯ ಸಹೋದರನೂ

ರೋಗಿಯನ್ನು ಹೊರಗೆಸೆದು ಅಂಬ್ಯುಲೆನ್ಸ್ ನಲ್ಲೇ ಚಾಲಕ ಮತ್ತು ಸಹಾಯಕನಿಂದ ರೋಗಿಯ ಪತ್ನಿಯ ಅತ್ಯಾಚಾರ| ಗಂಭೀರ ಗಾಯಗೊಂಡ ರೋಗಿ ಸಾವು Read More »

ತೆಲಂಗಾಣ: ಎನ್ಕೌಂಟರ್ ಗೆ 6 ಮಾವೋವಾದಿಗಳು ಬಲಿ

ಸಮಗ್ರ ನ್ಯೂಸ್: ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ನಕ್ಸಲೀಯರ ಭದ್ರಕೋಟೆಯಾಗಿದ್ದ ಕರಕಗುಡೆಂ ಮಂಡಲದ ನೀಲಾದ್ರಿಗುಟ್ಟಾ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ನೀಲಾಂದ್ರಿಗುಟ್ಟದ ಬೆಟ್ಟದ ಬಳಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೆಲಂಗಾಣದ ಪ್ರಮುಖ ಮಾವೋವಾದಿ ನಾಯಕರೊಬ್ಬರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್‌ಗಢ ಮೂಲದ ಶಸ್ತ್ರಸಜ್ಜಿತ

ತೆಲಂಗಾಣ: ಎನ್ಕೌಂಟರ್ ಗೆ 6 ಮಾವೋವಾದಿಗಳು ಬಲಿ Read More »