September 2024

ಡಿಕೆಶಿ ಅಮೇರಿಕಾ ಭೇಟಿ/ ವೈಯುಕ್ತಿಕ ಕಾರಣಕ್ಕೆ ಭೇಟಿ ಎಂದರು ಉಪಮುಖ್ಯಮಂತ್ರಿ

ಸಮಗ್ರ ನ್ಯೂಸ್‌: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಕೆಲವು ಉನ್ನತ ನಾಯಕರನ್ನು ಭೇಟಿ ಮಾಡಲು ಅಮೆರಿಕಕ್ಕೆ ಭೇಟಿ ನೀಡಿದ್ದೇನೆ ಎಂಬ ವದಂತಿಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದು, ಅಮೇರಿಕಾ ಭೇಟಿ ಸಂಪೂರ್ಣವಾಗಿ ವೈಯಕ್ತಿಕ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ನನ್ನ ಕುಟುಂಬದೊಂದಿಗೆ ಸೆಪ್ಟೆಂಬರ್ 15 ರವರೆಗೆ ಯುಎಸ್‌ಗೆ ಪ್ರಯಾಣಿಸುತ್ತಿದ್ದೇನೆ. ಇದು ವೈಯಕ್ತಿಕ ಭೇಟಿ,” ಎಂದು ತಿಳಿಸಿದ್ದಾರೆ. ಅಮೆರಿಕ ಪ್ರವಾಸದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರವನ್ನೂ […]

ಡಿಕೆಶಿ ಅಮೇರಿಕಾ ಭೇಟಿ/ ವೈಯುಕ್ತಿಕ ಕಾರಣಕ್ಕೆ ಭೇಟಿ ಎಂದರು ಉಪಮುಖ್ಯಮಂತ್ರಿ Read More »

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ೨೯ ಪದಕಗಳನ್ನು ಜಯಿಸಿದ ಭಾರತ

ಸಮಗ್ರ ನ್ಯೂಸ್‌: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ ಸರ್ವಶ್ರೇಷ್ಠ ಪ್ರದರ್ಶನ ತೋರಿವೆ. ಕ್ರೀಡಾಕೂಟದಲ್ಲಿ ಭಾರತ ಅಸ್ಪೀಟ್ ಗಳು 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟಾರೆ 29 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎನಿಸಿಕೊಂಡಿವೆ. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ಚೀನಾ 94 ಚಿನ್ನ ಸಹಿತ 217 ಪದಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿ ಭದ್ರವಾದರೆ, ಗ್ರೇಟ್ ಬ್ರಿಟನ್

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ೨೯ ಪದಕಗಳನ್ನು ಜಯಿಸಿದ ಭಾರತ Read More »

ಎಮರ್ಜೆನ್ಸಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್/ ಯುಎ ಪ್ರಮಾಣ ಪತ್ರ ನೀಡಿದ ಸೆನ್ಸಾರ್‌ ಮಂಡಳಿ

ಸಮಗ್ರ ನ್ಯೂಸ್‌: ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾಕ್ಕೆ ಇದೀಗ ಎಮರ್ಜೆನ್ಸಿಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ ನ(ಸಿಬಿಎಫ್‌ಸಿ) ಸ್ಕಿನಿಂಗ್ ಸಮಿತಿಯು ಬಿಡುಗಡೆಗೆ ಮುನ್ನ ಮೂರು ಕಟ್ ಹಾಗೂ 10 ಬದಲಾವಣೆ ಮಾಡಬೇಕೆಂಬ ಷರತ್ತಿನ ಮೇಲೆ ‘ಯುಎ’ ಪ್ರಮಾಣೀಕರಣಕ್ಕೆ ಅನುಮೋದನೆ ನೀಡಿದೆ. ಟ್ರೈಲರ್ ಬಿಡುಗಡೆಯಾದಗಿನಿಂದಲೂ ಹಲವು ವಿವಾದಗಳಲ್ಲಿ ಸಿಲುಕಿದ ಎಮರ್ಜೆನ್ಸಿ ಸಿನಿಮಾ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಡ್ ಸರ್ಟಿಫಿಕೇಶನ್ (CBFC)ನಿಂದ ಪ್ರಮಾಣೀಕರಣ ಸಿಗದ ಕಾರಣ ಸೆಪ್ಟೆಂಬರ್

ಎಮರ್ಜೆನ್ಸಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್/ ಯುಎ ಪ್ರಮಾಣ ಪತ್ರ ನೀಡಿದ ಸೆನ್ಸಾರ್‌ ಮಂಡಳಿ Read More »

ಕನ್ನಡದಲ್ಲೇ ಔಷಧಿ ಚೀಟಿ ಬರೆದು ಮಾದರಿಯಾದ ವೈದ್ಯ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದೇ ಔಷಧಿ ಚೀಟಿಯನ್ನು ಬರೆಯಲು ಆದೇಶ ನೀಡಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲೇ ಔಷಧಿ ಚೀಟಿಯನ್ನು ಬರೆದು ಮಾದರಿಯಾಗಿದ್ದಾರೆ. ಬೆಂಗಳೂರಿನ ಕೆ.ವಿ.ಡೆಂಟಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಡಾ.ಹರಿಪ್ರಸಾದ್ ಸಿ.ಎಸ್. ಎಂಬುವರು ಔಷಧಿ ಚೀಟಿಯನ್ನು ಕನ್ನಡದಲ್ಲೇ ಬರೆದುಕೊಟ್ಟು ಮಾದರಿಯಾಗಿದ್ದಾರೆ. ಈಗಾಗಲೇ ರಾಯಚೂರಿನಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲೇ ಬರೆಯಲು ಆದೇಶ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದೇ ಔಷಧಿ ಚೀಟಿಯನ್ನು ಬರೆಯಲು

ಕನ್ನಡದಲ್ಲೇ ಔಷಧಿ ಚೀಟಿ ಬರೆದು ಮಾದರಿಯಾದ ವೈದ್ಯ Read More »

ಇಂದಿನ ಹವಾಮಾನ ವರದಿ| ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ| ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ದೊರೆತಿದೆ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಪ್ರತಿ ವರ್ಷವೂ ಚೌತಿ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುತ್ತಿತ್ತು ಆದರೆ ಈ ಬಾರಿ ಚೌತಿ ಕಳೆದರೂ ಮಳೆ ಹೆಚ್ಚಾಗುವ ಸೂಚನೆ ಇದೆ. ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ,

ಇಂದಿನ ಹವಾಮಾನ ವರದಿ| ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ| ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ Read More »

ಮೋಹಕತಾರೆ ರಮ್ಯಾಗೆ ಕೂಡಿ ಬಂತೇ ಕಂಕಣ ಭಾಗ್ಯ!? ಸ್ಯಾಂಡಲ್ ವುಡ್ ನ ಗಲ್ಲಿಗಳಲ್ಲಿ ಕೇಳಿ ಬಂದ ಗಾಸಿಪ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ಮೋಹಕತಾರೆ ರಮ್ಯಾ‌ ಮದುವೆಯಾಗಲಿದ್ದಾರೆ!. ಹೌದು ಹೀಗೊಂದು ಸುದ್ದಿ ಹರಿದಾಡುತ್ತಿದೆ. ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮ್ಯಾ, ಇದೊಂದು ರೂಮರ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಹಲವಾರು ಬಾರಿಯೂ

ಮೋಹಕತಾರೆ ರಮ್ಯಾಗೆ ಕೂಡಿ ಬಂತೇ ಕಂಕಣ ಭಾಗ್ಯ!? ಸ್ಯಾಂಡಲ್ ವುಡ್ ನ ಗಲ್ಲಿಗಳಲ್ಲಿ ಕೇಳಿ ಬಂದ ಗಾಸಿಪ್ Read More »

ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

ಸಮಗ್ರ ನ್ಯೂಸ್: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಪೋಷಕರಾಗಿದ್ದಾರೆ. ದೀಪಿಕಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆಯಷ್ಟೇ ದೀಪಿಕಾ ಪಡುಕೋಣೆ ಮುಂಬೈನ ಅಂಬಾನಿ ಮಾಲೀಕತ್ವದ ಹೆಚ್‌ಎನ್‌ ರಿಲಯನ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ರಣ್ವೀರ್ ಮನೆಗೆ ಗೌರಿಯ ಆಗಮನವಾಗಿದೆ. ಒಂದು ದಿನದ ಹಿಂದಷ್ಟೇ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್ವೀರ್ ಸಿಂಗ್ ಹಾಗೂ ಕುಟುಂಬದವರ ಜೊತೆಗೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ Read More »

ಮಂಗಳೂರು ಹೊರವಲಯದ ತಲಪಾಡಿ ಬಳಿ ನವವಿವಾಹಿತ ದಂಪತಿಗಳಿದ್ದ ಕಾರು ಅಪಘಾತ| ಪತ್ನಿ ಸಾವು; ಪತಿ ಗಂಭೀರ

ಸಮಗ್ರ ನ್ಯೂಸ್: ಎರಡು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವ ದಂಪತಿ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಬಳಿ ನಡೆದಿದೆ. ಪೆರ್ನೆ ಸಮೀಪದ ಒಡ್ಯ ನಿವಾಸಿ ಅನಿಶ್ ಕೃಷ್ಣ ತಮ್ಮ ಪತ್ನಿ ಮಾನಸ ಜೊತೆ ಬಿ.ಸಿ.ರೋಡ್ ನಿಂದ ‌ಮಂಗಳೂರು ಕಡೆಗೆ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡು ಡಿವೈಡರ್​ಗೆ ಗುದ್ದಿ ಹಾರಿ ಕೆಎಸ್‌ಆರ್‌ಟಿಸಿ ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಮಾನಸ ಸ್ಥಳದಲ್ಲಿಯೇ ಅಸುನೀಗಿದ್ದು, ಗಂಭೀರ ಗಾಯಗೊಂಡ

ಮಂಗಳೂರು ಹೊರವಲಯದ ತಲಪಾಡಿ ಬಳಿ ನವವಿವಾಹಿತ ದಂಪತಿಗಳಿದ್ದ ಕಾರು ಅಪಘಾತ| ಪತ್ನಿ ಸಾವು; ಪತಿ ಗಂಭೀರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದಿನನಿತ್ಯದ ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗಳ ಹಿಂದೆ‌ ರಾಶಿ, ನಕ್ಷತ್ರಗಳ ಪ್ರೇರಣೆ ಇರುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಸೆ. 8 ರಿಂದ 14ರವರೆಗಿನ ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಯಾರಿಗೆ ಲಾಭ? ಯಾರಿಗೆ ಶುಭ? ಎಂಬುದನ್ನು ತಿಳಿಯೋಣ… ಮೇಷ ರಾಶಿ:ಈ ವಾರ ಮೇಷ ರಾಶಿಯವರಿಗೆ ಮಿಶ್ರ ಫಲಗಳಿವೆ. ಪ್ರಮುಖ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಹಠಾತ್ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುಳ್ಯ: ಆಟೋರಿಕ್ಷಾ – ಸ್ಕೂಟಿ ನಡುವೆ ಅಪಘಾತ| ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಸಾವು

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಸ್ಕೂಟಿ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ರಿಕ್ಷಾ ಶರತ್ ಎಂಬವರದಾಗಿದ್ದು ಸ್ಕೂಟಿ ಸವಾರ ಐಟಿಐ ವಿದ್ಯಾರ್ಥಿ ನವೀನ್ ಎಂದು ತಿಳಿದುಬಂದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ಮೃತಪಟ್ಟ ದುರ್ದೈವಿ. ದ್ವಿತೀಯ ವರ್ಷದ ಐಟಿಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಿಧಿ ಬರಹ ಬೇರೆಯಾಗಿತ್ತು. ಈತ

ಸುಳ್ಯ: ಆಟೋರಿಕ್ಷಾ – ಸ್ಕೂಟಿ ನಡುವೆ ಅಪಘಾತ| ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಸಾವು Read More »