Ad Widget .

ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಸಮಗ್ರ ನ್ಯೂಸ್:ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅ.8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಮ್ಮಿಕೊಳ್ಳಲಾಯಿತು.

Ad Widget . Ad Widget .

ಮಿಥುನ್ ಅವರ ಗಮನಾರ್ಹ ಸಿನಿಮಾ ಪ್ರಯಾಣ ತಲೆಮಾರಿಗೆ ಸ್ಫೂರ್ತಿ ನೀಡುವಂಥದ್ದು, ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಮಿಥುನ್ ಚಕ್ರವರ್ತಿಯವರನ್ನು ದಾದಾಸಾಹೇಬ್ ಫಾಲ್ಕೆ ತೀರ್ಪುಗಾರರ ಸಮಿತಿ ಆಯ್ಕೆ ಮಾಡಿದೆ ಎಂದು ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Ad Widget . Ad Widget .

ಚಿತ್ರರಂಗಕ್ಕೆ ಕಾಲಿಟ್ಟಿದ್ದು 1976ರಲ್ಲಿ. 26ನೇ ವಯಸ್ಸಿನಲ್ಲಿ ಹೀರೋ ಆಗಿದ್ದರು.ಈ ವರ್ಷದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ನೀಡಲಾಗಿತ್ತು. ‘ಮೃಗಯಾ’ ಅವರ ಮೊದಲ ಸಿನಿಮಾ.

ಅವರಿಗೆ ಮೊದಲ ಸಿನಿಮಾದ ಶ್ರೇಷ್ಠನಟ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅವರು ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಕನ್ನಡದ ‘ದಿ ವಿಲನ್’ ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರು ಅನೇಕ ರಿಯಾಲಿಟಿ ಶೋಗೆ ಹೋಸ್ಟ್ ಆಗಿದ್ದಾರೆ.

ಇದು ಬಾಲಿವುಡ್‌ನ ಟ್ರೆಂಡ್‌ ಬದಲಿಸಿದ ಹಿರಿಮೆಗೂ ಪಾತ್ರವಾಗಿದೆ. ನೂರಾರು ಚಿತ್ರಗಳಲ್ಲಿ ನಟಿಸಿದ್ದ ಮಿಥುನ್ ಒಂದು ಕಾಲದಲ್ಲಿ ಅಮಿತಾಭ್ ಬಚ್ಚನ್ ನಂತರದ ಸ್ಥಾನದಲ್ಲಿ ಬಾಲಿವುಡ್‌ನಲ್ಲಿ ವಿರಾಜಮಾನರಾಗಿದ್ದರು. ಚಿತ್ರರಂಗದ ಎರಡನೇ ಇನ್ನಿಂಗ್ಸ್‌ನಲ್ಲಿ ಕಾಶ್ಮೀರಿ ಫೈಲ್ಸ್, ತಾಸ್ಕೆಂಟ್ ಫೈಲ್ಸ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸುತ್ತಾ ಚಾರಿತ್ರಿಕ ನಟನಾಗಿ ಮಿಂಚುತ್ತಿದ್ದಾರೆ.

Leave a Comment

Your email address will not be published. Required fields are marked *