Ad Widget .

ಸುಳ್ಯ: ಆಟೋರಿಕ್ಷಾ – ಸ್ಕೂಟಿ ನಡುವೆ ಅಪಘಾತ| ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಸಾವು

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಸ್ಕೂಟಿ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.

Ad Widget . Ad Widget .

ರಿಕ್ಷಾ ಶರತ್ ಎಂಬವರದಾಗಿದ್ದು ಸ್ಕೂಟಿ ಸವಾರ ಐಟಿಐ ವಿದ್ಯಾರ್ಥಿ ನವೀನ್ ಎಂದು ತಿಳಿದುಬಂದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ಮೃತಪಟ್ಟ ದುರ್ದೈವಿ.

Ad Widget . Ad Widget .

ದ್ವಿತೀಯ ವರ್ಷದ ಐಟಿಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಿಧಿ ಬರಹ ಬೇರೆಯಾಗಿತ್ತು. ಈತ ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ. ನವೀನ್ ತಂದೆ,ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *