Ad Widget .

ರೋಗಿಯನ್ನು ಹೊರಗೆಸೆದು ಅಂಬ್ಯುಲೆನ್ಸ್ ನಲ್ಲೇ ಚಾಲಕ ಮತ್ತು ಸಹಾಯಕನಿಂದ ರೋಗಿಯ ಪತ್ನಿಯ ಅತ್ಯಾಚಾರ| ಗಂಭೀರ ಗಾಯಗೊಂಡ ರೋಗಿ ಸಾವು

ಸಮಗ್ರ ನ್ಯೂಸ್: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ನಲ್ಲೇ ಚಾಲಕ ಹಾಗೂ ಆತನ ಸಹಾಯಕ ರೋಗಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಅಲ್ಲದ್ದೇ ಈ ವೇಳೆ ತಡೆಯಲು ಬಂದ ಪತಿಯನ್ನು ಈ ದುಷ್ಕರ್ಮಿಗಳು ಆಂಬುಲೆನ್ಸ್‌ನಿಂದ ಹೊರಗೆಸೆದಿದ್ದು, ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿ ಆತ ಸಾವನ್ನಪ್ಪಿದ್ದಾನೆ.

Ad Widget . Ad Widget .

ಲಕ್ನೋದ ಗಾಜಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರೋಗಿಯನ್ನು ಆಂಬುಲೆನ್ಸ್‌ನಲ್ಲಿ ಸಿದ್ಧಾರ್ಥನಗರ ಜಿಲ್ಲೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್‌ನಲ್ಲಿ ರೋಗಿಯ ಪತ್ನಿ ಹಾಗೂ ಆಕೆಯ ಸಹೋದರನೂ ಇದ್ದರು. ಆದರೆ ಘಟನೆ ನಡೆಯುವ ವೇಳೆ ಆತನನ್ನು ಆಂಬುಲೆನ್ಸ್‌ನ ಹಿಂದಿನ ಕ್ಯಾಬಿನ್‌ನಲ್ಲಿ ಬಂಧಿಸಿದ ಚಾಲಕ ಹಾಗೂ ಆತನ ಸಹಾಯಕ ಮಹಿಳೆಗೆ ಲೈಂಗಿಕ ಕಿರುಕುಳವೆಸಗಲು ಮುಂದಾಗಿದ್ದಾರೆ.

Ad Widget . Ad Widget .

ಈ ವೇಳೆ ತಡೆಯಲು ಬಂದ ಅನಾರೋಗ್ಯಪೀಡಿತ ಪತಿಯನ್ನು ಎತ್ತಿ ಆಂಬುಲೆನ್ಸ್‌ನಿಂದ ಹೊರಗೆಸೆದಿದ್ದಾರೆ. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಲಕ್ನೋದಿಂದ ಸಿದ್ಧಾರ್ಥ್‌ನಗರ ಜಿಲ್ಲೆಗೆ ಹೋಗುತ್ತಿದ್ದ ವೇಳೆ ಬಸ್ತಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕ ಈ ಕೃತ್ಯವೆಸಗಿದ್ದಾರೆ.
ಇವರ ವಿರುದ್ಧ ಉದ್ದೇಶಪೂರಿತ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.

Leave a Comment

Your email address will not be published. Required fields are marked *