Ad Widget .

ನಾಪತ್ತೆಯಾಗಿದ್ದ SSLCಯ 6 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ

ಸಮಗ್ರ ನ್ಯೂಸ್: ಹೊಳಲ್ಕೆರೆ ಪಟ್ಟಣದಿಂದ ಆರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿತ್ತು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಡ್ರೀಮ್ ವರ್ಡ್ ಇಂಟರ್ ನ್ಯಾಷನಲ್‌ ಸ್ಕೂಲ್ ನಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ 6 ವಿದ್ಯಾರ್ಥಿಗಳಾದ ಶ್ರೇಯಸ್, ಧನುಷ್, ಮನು, ತರುಣ್, ಸಿದ್ದೇಶ್ ಹಾಗೂ ಯಶಸ್ ನಾಪತ್ತೆಯಾಗಿದ್ದರು. ಈ ಆರು ಜನ ವಿದ್ಯಾರ್ಥಿಗಳು, ಶಾಲೆಯ ವಸತಿ ಶಾಲೆಯಲ್ಲಿದ್ದರು. ಆದರೆ, ಇಂದು ಬೆಳಗ್ಗೆಯಿಂದ ನಾಪತ್ತೆ ಆಗಿದ್ದರು. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದಾಗ ಇದೀಗ ನಾಪತ್ತೆಯಾಗಿದ್ದ 6ಜನ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಪತ್ತೆಯಾಗಿದ್ದಾರೆ. ಶ್ರೇಯಸ್ ಸಂಬಂಧಿ ಮನೆಗೆ ಈ ವಿದ್ಯಾರ್ಥಿಗಳು ತೆರಳಿದ್ದು, ಪೀಣ್ಯ ಬಡಾವಣೆಯ‌ ಶ್ವೇತಾ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದಾರೆ. ವಿಡಿಯೋ ಕಾಲ್ ಮಾಡಿ ತಹಸೀಲ್ದಾರ್ ಫಾತಿಮಾ ಖಚಿತ ಪಡಿಸಿಕೊಂಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *