July 2024

ಟೀಂ ಇಂಡಿಯಾ ತ್ರೋಡೌನ್ ತಜ್ಞ ರಾಘವೇಂದ್ರ ಕುಕ್ಕೆ ಭೇಟಿ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರ ಟೀಂ ಇಂಡಿಯಾದ ತ್ರೋಡೌನ್ ತಜ್ಞ ರಾಘವೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಟೀಂ ಇಂಡಿಯಾದ ತ್ರೋಡೌನ್ ತಜ್ಞರಾಗಿರುವ ರಾಘವೇಂದ್ರ ಅವರು ಟಿ20 ವಿಶ್ವಕಪ್ ಗೆದ್ದ ಬಳಿಕ ಕುಕ್ಕೆ ದೇವಸ್ಥಾನಕ್ಕೆ ಆಗಮಿಸಿದ್ದು, ಈ ಹಿಂದೆ ದೇವಸ್ಥಾನಕ್ಕೆ ಬಂದ ಸಂದರ್ಭ ಟೀಂ ಇಂಡಿಯಾ ವಿಶ್ವಚಾಂಪಿಯನ್ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.ಈ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು. […]

ಟೀಂ ಇಂಡಿಯಾ ತ್ರೋಡೌನ್ ತಜ್ಞ ರಾಘವೇಂದ್ರ ಕುಕ್ಕೆ ಭೇಟಿ Read More »

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಮಧ್ಯ ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು ಸುಮಾರು 63 ಪ್ರಯಾಣಿಕರು ಮೃತರಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡೂ ಬಸ್ಸುಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಇದ್ದರು ಎನ್ನಲಾಗಿದೆ. ಮುಂಜಾನೆ 3.30ರ ಸುಮಾರಿಗೆ ಭೂಕುಸಿತವಾಗಿ ಬಸ್ಸುಗಳು ನದಿಯಲ್ಲಿ ಕೊಚ್ಚಿಕೊಂಡು ಹೋಯಿತು. ನಾವು ಘಟನಾ ಸ್ಥಳದಲ್ಲಿದ್ದೇವೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದ ಬಸ್ಸುಗಳನ್ನು, ಜನರನ್ನು ಹುಡುಕುವ

ನೇಪಾಳದಲ್ಲಿ ಭಾರೀ ಭೂಕುಸಿತ| 63 ಮಂದಿ ದುರ್ಮರಣ Read More »

ಸುಬ್ರಹ್ಮಣ್ಯ: ಅನುಮತಿ ಪಡೆಯದೇ ಜಾನುವಾರು ಸಾಗಾಟ| ಸಕಲೇಶಪುರದ ಮೂಲದ ಚಾಲಕ, ವಾಹನ ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದ್ದು, ಪಿಕಪ್‌ ವಾಹನ, ಪಿಕಪ್‌ ಚಾಲಕ, ಜಾನುವಾರುಗಳನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಠಾಣಾ ವ್ಯಾಪ್ತಿಯ ಪಂಜದಲ್ಲಿ ನಡೆದಿದೆ. ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ಪಿಕಪ್‌ ವಾಹನದಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ವಾಹನ ಸಹಿತ ಚಾಲಕ, ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದರು. ವಾಹನ ಚಾಲಕ ಸಕಲೇಶಪುರ ಮೂಲದ ಲೋಹಿತ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು

ಸುಬ್ರಹ್ಮಣ್ಯ: ಅನುಮತಿ ಪಡೆಯದೇ ಜಾನುವಾರು ಸಾಗಾಟ| ಸಕಲೇಶಪುರದ ಮೂಲದ ಚಾಲಕ, ವಾಹನ ವಶಕ್ಕೆ ಪಡೆದ ಪೊಲೀಸರು Read More »

ವಾಲ್ಮೀಕಿ ನಿಗಮದಲ್ಲಿ ಅಕ್ರಮ| ಮಾಜಿ ಸಚಿವ ಬಿ. ನಾಗೇಂದ್ರರನ್ನು ವಶಕ್ಕೆ ಪಡೆದ ಇಡಿ

ಸಮಗ್ರ ನ್ಯೂಸ್: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸ, ಆಪ್ತರ ಮನೆಗಳ ಮೇಲೆ

ವಾಲ್ಮೀಕಿ ನಿಗಮದಲ್ಲಿ ಅಕ್ರಮ| ಮಾಜಿ ಸಚಿವ ಬಿ. ನಾಗೇಂದ್ರರನ್ನು ವಶಕ್ಕೆ ಪಡೆದ ಇಡಿ Read More »

ಸುಳ್ಯ: ಗಾಂಜಾ ಸಾಗಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಸಮಗ್ರ ನ್ಯೂಸ್: ಗಾಂಜಾ ಸಾಗಾಟದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. ಪ್ರಕರಣದ ವಿವರ:2018ರ ಮಾರ್ಚ್ 28ರಂದು ಸುಳ್ಯ ಗಾಂಧಿನಗರ ಶಾಲಾ ಕ್ರಾಸ್ ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದ ಸಮಯ ಸಂಜೆ 6.45 ಗಂಟೆಗೆ ಅರಂಬೂರು ಕಡೆಯಿಂದ ಸುಳ್ಯ ಕಡೆಗೆ ಮೋಟಾರು ಸೈಕಲ್‌ ನಲ್ಲಿ ಬರುತ್ತಿದ್ದ ಪಿ.ಎಂ. ಮೊಯಿದ್ದೀನ್ ಯಾನೆ ತಲವಾರ್ ಮೊಯಿದು ಮತ್ತು ಮುರಳಿ ಸಿ ಎಂಬಿಬ್ಬರನ್ನು

ಸುಳ್ಯ: ಗಾಂಜಾ ಸಾಗಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »

ಕಳಪೆ‌ ಆಹಾರ ಪೂರೈಕೆ ಆರೋಪ| ನಟ ಸುದೀಪ್ ಮಾಲೀಕತ್ವದ ಹೊಟೇಲ್ ಮೇಲೆ‌ ದಾಳಿ|

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಒಡೆತನದ ತೆಲಂಗಾಣದಲ್ಲಿರುವ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ತೆಲಂಗಾಣದ ಆಹಾರ ಮತ್ತು ಸುರಕ್ಷತೆ ಆಯುಕ್ತರ ನೇತೃತ್ವದ ಕಾರ್ಯಪಡೆ ತೆಲಂಗಾಣದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿದ್ದು, ಸಿಕಂದರಬಾದ್ ನಲ್ಲಿರುವ ಕಿಚ್ಚ ಸುದೀಪ್ ಒಡೆತನದ `ವಿವಾಹ ಭೋಜನಮುಡು’ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದು ಪತ್ತೆಯಾಗಿದೆ. 2024 ಜುಲೈ 8ರಂದು ಕಾರ್ಯಪಡೆ ದಾಳಿ ನಡೆಸಿದಾಗ ಹಲವಾರು ನಿಯಮಗಳನ್ನು ಉಲ್ಲಂಘಿಸಿರುವುದು

ಕಳಪೆ‌ ಆಹಾರ ಪೂರೈಕೆ ಆರೋಪ| ನಟ ಸುದೀಪ್ ಮಾಲೀಕತ್ವದ ಹೊಟೇಲ್ ಮೇಲೆ‌ ದಾಳಿ| Read More »

ಕೇಂದ್ರ ಬಜೆಟ್ 2024 ರ ತಯಾರಿ/ ಅರ್ಥಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದ ಮೋದಿ

ಸಮಗ್ರ ನ್ಯೂಸ್‌: ಕೇಂದ್ರ ಬಜೆಟ್ 2024 ರ ತಯಾರಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಅರ್ಥಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯು ಜುಲೈ 23 ರಂದು ತನ್ನ ಮೂರನೇ ಅವಧಿಗೆ ಸಮಗ್ರ ಬಜೆಟ್ ಅನ್ನು ಮಂಡಿಸಲು ಸಜ್ಜಾಗುತ್ತಿರುವ ಪ್ರಮುಖ ಹೆಜ್ಜೆಯಾಗಿದೆ. ಬಜೆಟ್ ಪೂರ್ವ ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಮತ್ತು ಯೋಜನಾ ಮಂಡಳಿಯ ಇತರ ಸದಸ್ಯರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಮುಂಬರುವ ಆರ್ಥಿಕ

ಕೇಂದ್ರ ಬಜೆಟ್ 2024 ರ ತಯಾರಿ/ ಅರ್ಥಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದ ಮೋದಿ Read More »

ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್… ತಮಿಳುನಾಡಿಗೆ ನೀರು ಹರಿಸಲು CWRC ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದೆ. ಹೌದು ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ ಎಂಬುದಾಗಿ ಕರ್ನಾಟಕ ಈ ಹಿಂದೆ ಮನವಿ ಮಾಡಿದರೂ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚಿಸಿದೆ. ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಲ್ಕೂ ಜಲಾಶಯಗಳಲ್ಲಿ 58.66

ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್… ತಮಿಳುನಾಡಿಗೆ ನೀರು ಹರಿಸಲು CWRC ಸೂಚನೆ Read More »

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ| ಕ್ಯಾನ್ಸರ್ ನಿಂದ ಅಪರ್ಣಾ ವಿಧಿವಶ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ʼಮಸಣದ ಹೂವುʼ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ಅವರು ʼಇನ್ಸ್ ಸ್ಪೆಕ್ಟರ್ ವಿಕ್ರಮ್ʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ನಿರೂಪಣಾ ಕ್ಷೇತ್ರವನ್ನು ಪ್ರವೇಶಿದ್ದರು. ಅಚ್ಚ ಕನ್ನಡದಲ್ಲಿ ತಮ್ಮ ನಿರೂಪಣೆಯನ್ನು ಮಾಡಿ ಹೆಸರುವಾಸಿಯಾಗಿದ್ದವರು. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ| ಕ್ಯಾನ್ಸರ್ ನಿಂದ ಅಪರ್ಣಾ ವಿಧಿವಶ Read More »

ಸುಳ್ಯ: ಕುಡುಕರನ್ನು ಓಡಿಸಲು‌ ಕುಡಿದು ಬಂದ ಹೊಯ್ಸಳ ಪೊಲೀಸರು!? ಗುತ್ತಿಗಾರಿನಲ್ಲೊಂದು ವಿಲಕ್ಷಣ ಘಟನೆ

ಸಮಗ್ರ ನ್ಯೂಸ್: ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೋಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ವಿಲಕ್ಷಣ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ‌ಭಾರೀ ವೈರಲ್ ಅಗುತ್ತಿದ್ದು, ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಜು.10 ರಂದು ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕೆಲಮದಿ ಕುಡಿದು ಮಲಗಿದ್ದು,‌ ಇವರಿಂದ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಮಹಿಳೆಯೋರ್ವರು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ

ಸುಳ್ಯ: ಕುಡುಕರನ್ನು ಓಡಿಸಲು‌ ಕುಡಿದು ಬಂದ ಹೊಯ್ಸಳ ಪೊಲೀಸರು!? ಗುತ್ತಿಗಾರಿನಲ್ಲೊಂದು ವಿಲಕ್ಷಣ ಘಟನೆ Read More »