July 2024

ಮಡಿಕೇರಿ: ರಸ್ತೆ ಬದಿ ನಿಲ್ಲಿಸಿದ ಸ್ವಿಫ್ಟ್‌ ಕಾರಿಗೆ ಬೆಂಕಿ

ಸಮಗ್ರ ನ್ಯೂಸ್: ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ 275ರ ಸಂಪಿಗೆ ಕಟ್ಟೆ ಬಳಿ ತಾಂತ್ರಿಕ ದೋಷದಿಂದ ಸ್ವಿಫ್ಟ್‌ ಕಾರುವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರು ಸುಟ್ಟು ಕರಕಲಾಗಿದೆ. ಈ ಅವಘಡದಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರಿನ ಶ್ರೀನಿವಾಸ್ ಎಂಬುವವರು ಶನಿವಾರ ಬೆಳಗ್ಗೆ ಅಪಘಾತವಾಗಿದ್ದ ಕಾರನ್ನು ಹೆದ್ದಾರಿ ಬದಿ ನಿಲ್ಲಿಸಿದರು. ಸಂಜೆ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬಂದಿದ್ದಾರೆ. […]

ಮಡಿಕೇರಿ: ರಸ್ತೆ ಬದಿ ನಿಲ್ಲಿಸಿದ ಸ್ವಿಫ್ಟ್‌ ಕಾರಿಗೆ ಬೆಂಕಿ Read More »

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ

ಸಮಗ್ರ ನ್ಯೂಸ್‌: ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಸುಧಾರಣೆ’ ತರುವ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಅನುವಾಗುವ ಮಹತ್ವದ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಜುಲೈ 22 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಜು.23ರಂದು ಬಜೆಟ್‌ ಮಂಡನೆ ನಡೆಯಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಇತರ ಕಾಯ್ದೆಗಳಲ್ಲಿ ಸರ್ಕಾರ ಬ್ಯಾಂಕಿಂಗ್ ಕಾಯ್ದೆಗಳಲ್ಲಿ ತಿದ್ದುಪಡಿಗೆ ಮುಂದಾಗಿದೆ. ಇದಲ್ಲದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ‘ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970’ ಮತ್ತು ’ಬ್ಯಾಂಕಿಂಗ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ/ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ Read More »

ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆಯಿಂದ ಪರಿಹಾರ/ ವಯಸ್ಸಿಗೆ ಅನುಗುಣವಾಗಿ ತರಗತಿಗೆ ಪ್ರವೇಶ

ಸಮಗ್ರ ನ್ಯೂಸ್‌: ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಎದುರಾಗುತ್ತಿದ್ದ ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆ ವಯೋಮಿತಿ ನಿಗದಿಪಡಿಸಿ ಪರಿಹಾರ ಕಲ್ಪಿಸಿದೆ. ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ಹಾಗೂ ಗರಿಷ್ಠ ವಯೋಮಿತಿಯನ್ನು ಕ್ರಮವಾಗಿ 4 ರಿಂದ 6 ವರ್ಷ, 5ರಿಂದ 7 ವರ್ಷ ಮತ್ತು 6ರಿಂದ 8 ವರ್ಷಗಳಿಗೆ ನಿಗದಿಪಡಿಸಿ, 2023-24ನೇ ಸಾಲಿನಿಂದ ಪೂರ್ವಾನ್ವಯವಾಗುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರ ಜೊತೆಗೆ 8 ವರ್ಷ ದಾಟಿದ ಮಕ್ಕಳಿಗೆ

ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆಯಿಂದ ಪರಿಹಾರ/ ವಯಸ್ಸಿಗೆ ಅನುಗುಣವಾಗಿ ತರಗತಿಗೆ ಪ್ರವೇಶ Read More »

ವಿಶ್ವಾಸ ಮತ ಕಳೆದುಕೊಂಡ ಪ್ರಚಂಡ/ ಹುದ್ದೆಗೆ ರಾಜೀನಾಮೆ ನೀಡಿದ ನೇಪಾಳ ಪ್ರಧಾನಿ

ಸಮಗ್ರ ನ್ಯೂಸ್‌: ನೇಪಾಳ ಸಂಸತ್ತಿನಲ್ಲಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರು ವಿಶ್ವಾಸ ಮತವನ್ನು ಕಳೆದುಕೊಂಡಿದ್ದು, ಮುಂದಿನ ಪ್ರಧಾನಿಯಾಗಿ ಕಮ್ಯುನಿಸ್ಟ್ ಪ್ರತಿಸ್ಪರ್ಧಿ ಕೆ.ಪಿ ಶರ್ಮಾ ಓಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಧಾನಿ ಸ್ಥಾನಕ್ಕೆ ಪ್ರಚಂಡ ಅವರು ರಾಜೀನಾಮೆ ನೀಡಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕಿಸ್ಟ್‌ ಲೆನಿನಿಸ್ಟ್ (CPN-UML) ತನ್ನ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮತ್ತು ನೇಪಾಳಿ ಕಾಂಗ್ರೆಸ್‌ನೊಂದಿಗೆ ತಡರಾತ್ರಿಯ ಸಮ್ಮಿಶ್ರ ಒಪ್ಪಂದವನ್ನು ಮಾಡಿಕೊಂಡ ನಂತರ ಪ್ರಚಂಡ ಅವರು ಐದನೇ ವಿಶ್ವಾಸ ಮತಕ್ಕೆ ಕರೆ ನೀಡಿದರು.

ವಿಶ್ವಾಸ ಮತ ಕಳೆದುಕೊಂಡ ಪ್ರಚಂಡ/ ಹುದ್ದೆಗೆ ರಾಜೀನಾಮೆ ನೀಡಿದ ನೇಪಾಳ ಪ್ರಧಾನಿ Read More »

ಮುಖ್ಯಮಂತ್ರಿಗೆ ಬಂದಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ/ ರೈತ ಸಂಘಗಳ ಆಕ್ರೋಶ

ಸಮಗ್ರ ನ್ಯೂಸ್‌: ಜುಲೈ 10ರಂದು ಚಾಮರಾಜನಗರದಲ್ಲಿ ನಡೆದಿದ್ದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ರೈತರು ಮತ್ತು ಆಮ್ಲಜನಕ ದುರಂತದ ಸಂತ್ರಸ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ವಿವಿಧ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಈ ಅರ್ಜಿಗಳು ಕಸದ ರಾಶಿಯಲ್ಲಿ ಮತ್ತು ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬಿದ್ದಿವೆ. ಸಾರ್ವಜನಿಕರು, ರೈತರು ಗಂಟೆಗಟ್ಟಲೆ ಕಾದು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರೂ

ಮುಖ್ಯಮಂತ್ರಿಗೆ ಬಂದಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ/ ರೈತ ಸಂಘಗಳ ಆಕ್ರೋಶ Read More »

ಮಾಜಿ ಶಾಸಕ ಡಿ.ಎಸ್ ವೀರಯ್ಯರನ್ನು ಬಂಧಿಸಿದ ಸಿಐಡಿ

ಸಮಗ್ರ ನ್ಯೂಸ್: ಮಾಜಿ ಶಾಸಕ ಡಿ.ಎಸ್. ವೀರಯ್ಯ ಅವರನ್ನು ಸಿಐಡಿ ಬಂಧಿಸಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ. ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ವೀರಯ್ಯ ಅಧ್ಯಕ್ಷರಾಗಿದ್ದಾಗ 47 ಕೋಟಿ ರೂಪಾಯಿ ಹಗರಣ ನಡೆದ ಆರೋಪವಿದ್ದು, ಇದರ ತನಿಖೆ ಹಿನ್ನೆಲೆಯಲ್ಲಿ‌ ಬಂಧನ ಮಾಡಲಾಗಿದೆ. 2021 ರಿಂದ 2023ರ ನಡುವೆ ನಡೆದಿದೆ ಎನ್ನಲಾಗಿರುವ ಅಕ್ರಮದ ಕುರಿತಾಗಿ ಹಾಲಿ ವ್ಯವಸ್ಥಾಪಕ ನಿರ್ದೇಶಕರು ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. 2023ರ ಸೆಪ್ಟಂಬರ್ 23ರಂದು ಎಫ್‌ಐಆರ್ ದಾಖಲಾಗಿದ್ದು, ಇದೇ ಪ್ರಕರಣವನ್ನು ರಾಜ್ಯ

ಮಾಜಿ ಶಾಸಕ ಡಿ.ಎಸ್ ವೀರಯ್ಯರನ್ನು ಬಂಧಿಸಿದ ಸಿಐಡಿ Read More »

ಉಪ್ಪಿನಂಗಡಿ: ಕೇರಳ‌ ಲಾಟರಿಯಲ್ಲಿ ಕೋಟಿ ಬಹುಮಾನ ವದಂತಿ| ಫೋನ್ ಕರೆಗಳಿಂದ ಟೈಲರ್ ಸುಸ್ತೋಸುಸ್ತು

ಸಮಗ್ರ ನ್ಯೂಸ್: ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂಪಾಯಿ ಬಹುಮಾನವು ಇಲ್ಲಿನ ಟೈಲರ್‌ ಒಬ್ಬರಿಗೆ ಒಲಿದಿದೆ ಎಂಬ ಸುದ್ದಿ ಹರಡಿ ಅಭಿನಂದನೆಯ ಕರೆ, ಸಹಾಯ ಯಾಚನೆಯ ಕರೆಗೆ ಟೈಲರ್‌ ಹೈರಾಣಾಗುವಂತಾಗಿದೆ. ಪುತ್ತೂರು ತಾಲೂಕು ಉಪ್ಪಿನಂಗಡಿಯ ರಥಬೀದಿಯಲ್ಲಿರುವ ಗಣಪತಿ ಮಠದ ಬಳಿಯಲ್ಲಿ ಟೈಲರ್‌ ವೃತ್ತಿ ಮಾಡಿಕೊಂಡಿರುವ ಕೂಸಪ್ಪ ಅವರಿಗೆ ಒಂದು ಕೋಟಿ ರೂಪಾಯಿ ಒಲಿದಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಮಾತ್ರವಲ್ಲದೆ ಅದರಲ್ಲಿ 30 ಲಕ್ಷ ರೂಪಾಯಿ ತೆರಿಗೆ ನೆಲೆಯಲ್ಲಿ ಕಡಿತಗೊಂಡು 70 ಲಕ್ಷ ರೂಪಾಯಿ

ಉಪ್ಪಿನಂಗಡಿ: ಕೇರಳ‌ ಲಾಟರಿಯಲ್ಲಿ ಕೋಟಿ ಬಹುಮಾನ ವದಂತಿ| ಫೋನ್ ಕರೆಗಳಿಂದ ಟೈಲರ್ ಸುಸ್ತೋಸುಸ್ತು Read More »

ಅನಂತ್‌ ಅಂಬಾನಿ ಮದುವೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯ ತಿನಿಸುಗಳು..!

ಸಮಗ್ರ ನ್ಯೂಸ್: ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿಸಿದೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರು ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇಶ-ವಿದೇಶಗಳ ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಸಮ್ಮುಖದಲ್ಲಿ ನವ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇನ್ನು ಮದುವೆ ಆಗಮಿಸಿದ ಸಾವಿರಾರು ಗಣ್ಯರಿಗೆ ಅಂಬಾನಿ ಕುಟುಂಬಸ್ಥರು ಭರ್ಜರಿ ಭೋಜನ ಹಾಕಿಸಿದ್ದಾರೆ. ಅದರಲ್ಲೂ, ಬೆಂಗಳೂರಿನಲ್ಲಿರುವ, ಖ್ಯಾತ ರಾಮೇಶ್ವರಂ

ಅನಂತ್‌ ಅಂಬಾನಿ ಮದುವೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯ ತಿನಿಸುಗಳು..! Read More »

ಹವಾಮಾನ ವರದಿ| ರಾಜ್ಯಾದ್ಯಂತ ಮತ್ತೆ ಭಾರೀ ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ರೆಡ್‌, ಯೆಲ್ಲೋ, ಆರೆಂಜ್‌ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು, ನಾಳೆ ರೆಡ್ ಅಲರ್ಟ್ ನೀಡಲಾಗಿದೆ. ಸಮುದ್ರದಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ದಡದ ಬಳಿ ಪ್ರವಾಸಿಗರು ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಇನ್ನು ಚಿಕ್ಕಮಗಳೂರು, ಕೊಡಗು,

ಹವಾಮಾನ ವರದಿ| ರಾಜ್ಯಾದ್ಯಂತ ಮತ್ತೆ ಭಾರೀ ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಅಲರ್ಟ್ ಘೋಷಣೆ Read More »

‘ಪ್ಲೀಸ್ ನನ್ನನ್ನು ಬಂಧಿಸಿ’| ಎಸ್ಐಟಿ ಗೆ ಮನವಿ‌ ಮಾಡಿದ ಶಾಸಕ ದದ್ದಲ್!

ಸಮಗ್ರ ನ್ಯೂಸ್: ಎಸ್‌ಐಟಿ ವಶದಲ್ಲಿರುವ ಶಾಸಕ ಬಸವನಗೌಡ ದದ್ದಲ್ ‘ನನ್ನನ್ನು ಬಂಧಿಸಿ’ ಎಂದು ಎಸ್ ಐ ಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ ಐ ಟಿ ಅಧಿಕಾರಿಗಳ ಎದುರು ಶಾಸಕ ದದ್ದಲ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಶಾಸಕ ದದ್ದಲ್ ಅವರು ನನ್ನನ್ನು ಬಂಧಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಇಡಿ ಇಕ್ಕಳದಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಬಂಧಿಸುವಂತೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೊರಗಡೆ ಬಂದರೆ ಅಕ್ರಮ ಹಣ ವರ್ಗಾವಣೆ

‘ಪ್ಲೀಸ್ ನನ್ನನ್ನು ಬಂಧಿಸಿ’| ಎಸ್ಐಟಿ ಗೆ ಮನವಿ‌ ಮಾಡಿದ ಶಾಸಕ ದದ್ದಲ್! Read More »