July 2024

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ದ.ಕ ಜಿಲ್ಲೆಯಲ್ಲಿ ನಾಳೆ(ಜು.16) ಕೂಡಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಮುಂದುವರಿಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ‌ ಮುಂದುವರೆದಿದೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ 16-7-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ , ಸರಕಾರಿ ಅನುದಾನಿತ ಮತ್ತು ಖಾಸಗಿ ,ಪ್ರಾಥಮಿಕ ಪ್ರೌಢಶಾಲೆ , ಪದವಿ ಪೂರ್ವ ಕಾಲೇಜುಗಳಿಗೆ ಜು.16ರಂದು ರಜೆಯನ್ನು […]

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ದ.ಕ ಜಿಲ್ಲೆಯಲ್ಲಿ ನಾಳೆ(ಜು.16) ಕೂಡಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಮುಂದುವರಿಕೆ Read More »

ಭಾರೀ ಮಳೆ‌ ಹಿನ್ನೆಲೆ| ಜು.16ರಂದು ಹಾಸನ ಜಿಲ್ಲೆಯ ಈ ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ಹಾಸನ‌ ಜಿಲ್ಲೆಯ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಕೆರೆ ಕೊಳ್ಳಗಳು ತುಂಬಿವೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಕ್ಕಳು ಹಳ್ಳ ತೊರೆಗಳನ್ನು ದಾಟಿ ಶಾಲೆಗೆ ಬರಬೇಕಾದ ಪರಿಸ್ಥಿತಿ ಇರುವ ಕಾರಣ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ಜು.16ರಂದು ರಜೆ ಘೋಷಿಸಿ ಆದೇಶ‌ ಹೊರಡಿಸಲಾಗಿದೆ. ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಉಲ್ಲೇಖ (1) ರಂತೆ ಮಾನ್ಯ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ದಿನಾಂಕ 16/07/2024ರಂದು ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲ್ಲೂಕಿನ ಸರ್ಕಾರಿ, ಅನುದಾನಿತ,

ಭಾರೀ ಮಳೆ‌ ಹಿನ್ನೆಲೆ| ಜು.16ರಂದು ಹಾಸನ ಜಿಲ್ಲೆಯ ಈ ತಾಲೂಕಿನ ಶಾಲೆಗಳಿಗೆ ರಜೆ Read More »

ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ| ಡಿಸಿಎಂ ಡಿಕೆ ಶಿವಕುಮಾರ್ ಗೆ ಸುಪ್ರೀಂ ಬಿಗ್ ಶಾಕ್

ಸಮಗ್ರ ನ್ಯೂಸ್: ಡಿಸಿಎಂ ಡಿ.ಕೆ.ಶಿವಕುಮಾರ್‌ ಗೆ ಸುಪ್ರೀಂಕೋರ್ಟ್‌ ಬಿಗ್‌ ಶಾಕ್‌ ನೀಡಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಡಿಸಿಎಂ ಡಿ.ಕೆ.ಶಿವಕುಮಾಮಾರ್‌ ಅವರು, ಹೈಕೋರ್ಟ್‌ ಆದೇಶ ಪ್ರಶ್ನಿಸಿ ರದ್ದು ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್‌ ಇದೀಗ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ 2020ರ ಅಕ್ಟೋಬರ್‌ 3 ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ

ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ| ಡಿಸಿಎಂ ಡಿಕೆ ಶಿವಕುಮಾರ್ ಗೆ ಸುಪ್ರೀಂ ಬಿಗ್ ಶಾಕ್ Read More »

ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಯುವಕ‌ ಬಲಿ

ಸಮಗ್ರ ನ್ಯೂಸ್: ವಿದ್ಯುತ್ ಶಾಕ್ ಹೊಡೆದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಜು.15ರ ಸೋಮವಾರ ನಡೆದಿದೆ. ಇಳಂತಿಲ ಗ್ರಾಮದ ಗೋಳಿದಡಿ ತಿಮ್ಮಪ್ಪಗೌಡ ಎಂಬವರ ಪುತ್ರ ಹರೀಶ್ ಗೌಡ(35) ಎಂಬಾತ ಸಾವನ್ನಪ್ಪಿದ ಯುವಕ. ತಮ್ಮ ಮನೆಯ ಸಮೀಪವೇ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ದುರ್ಘಟನೆಯಿಂದ ತಾಲೂಕಿನಲ್ಲಿ ಈ ಮಳೆ‌ಗಾಲ

ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಯುವಕ‌ ಬಲಿ Read More »

ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಕತ್ರಿನಾ ಕೈಫ್| ಬರ್ತ್ ಡೇ‌ಗೂ ಮುನ್ನ ನಟಿ ಬೇಡಿಕೊಂಡಿದ್ದೇನು?

ಸಮಗ್ರ ನ್ಯೂಸ್: ಜುಲೈ 16ರಂದು ಕತ್ರಿನಾ ಕೈಫ್ ಅವರ ಜನ್ಮದಿನ. ಇದಕ್ಕೂ ಮುನ್ನ ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮೊದಲಾದವರು ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಬಾಲಿವುಡ್​ನ ಉಳಿದವರಿಗೂ ಈ ಬಗ್ಗೆ ನಂಬಿಕೆ ಮೂಡಿದೆ.ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ. ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ

ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಕತ್ರಿನಾ ಕೈಫ್| ಬರ್ತ್ ಡೇ‌ಗೂ ಮುನ್ನ ನಟಿ ಬೇಡಿಕೊಂಡಿದ್ದೇನು? Read More »

ಉಡುಪಿಯಲ್ಲಿ ಭಾರೀ ಅಗ್ನಿ ಅವಘಡ| ಬಾರ್ ಉದ್ಯಮಿ ಸಹಿತ ಮನೆ ಭಸ್ಮ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಅಂಬಲಪಾಡಿಯ ಗಾಂಧಿನಗರ ಎಂಬಲ್ಲಿ ಇಂದು ಸೋಮವಾರ ಬೆಳಗಿನ ಜಾವ ನಡೆದ ಭಾಗಿ ಅಗ್ನಿ ಅವಘಡದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿದ್ದು ಮನೆ ಮಾಲಿಕ ಬಾರ್ ಉದ್ಯಮಿ ಮೃತಪಟ್ಟಿದ್ದಾರೆ. ಆತನ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಲಪಾಡಿಯ ಬಾರ್ ಉದ್ಯಮಿ ರಮಾನಂದ ಶೆಟ್ಟಿ ಮೃತರು. ಅವರ ಪತ್ನಿ ಅಶ್ವಿನಿ ಶೆಟ್ಟಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮನೆಮಂದಿ

ಉಡುಪಿಯಲ್ಲಿ ಭಾರೀ ಅಗ್ನಿ ಅವಘಡ| ಬಾರ್ ಉದ್ಯಮಿ ಸಹಿತ ಮನೆ ಭಸ್ಮ Read More »

ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ದ ಎಫ್ಐಆರ್

ಸಮಗ್ರ ನ್ಯೂಸ್: ಕಾಪಿರೈಟ್‌ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನ ಅನುಮತಿ ಪಡೆಯದೆ ಬಳಕೆ ಮಾಡಿರುವ ಆರೋಪದಡಿ ರಕ್ಷಿತ್‌ ಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ. ನವೀನ್‌ ಕುಮಾರ್‌ ಎಂಬುವವರಿಂದ ರಕ್ಷಿತ್‌ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಈಗಾಗಲೇ ದೂರವಾಣಿ ಕರೆ ಮಾಡಿ ಪೊಲೀಸರು ರಕ್ಷಿತ್‌ ಶೆಟ್ಟಿ ಬಳಿ ಮಾತನಾಡಿದ್ದಾರೆ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ನವೀನ್‌ ಕುಮಾರ್‌ ಎಂಆರ್‌ ಟಿ ಮ್ಯೂಸಿಕ್‌

ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ದ ಎಫ್ಐಆರ್ Read More »

‘ಮಹಾನಟಿ’ಯಾಗಿ‌ ಮೈಸೂರಿನ ಪ್ರಿಯಾಂಕ| ರನ್ನರ್ ಅಪ್ ಆದ‌ ಧನ್ಯಶ್ರೀ

ಸಮಗ್ರ ನ್ಯೂಸ್: ಡ್ರಾಮಾ ಜೂನಿಯರ್ಸ್‌, ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ ಮತ್ತು ಸರಿಗಮಪ ಮೂಲಕ ಈಗಾಗಲೇ ಸಾಕಷ್ಟು ನಟ ನಟಿಯರು, ಗಾಯಕ ಗಾಯಕಿಯರು ಹಾಗೂ ಕೊರಿಯೋಗ್ರಾಫರ್‌ಗಳನ್ನು ಕರುನಾಡಿಗೆ ನೀಡಿರುವ ಜೀ ಕನ್ನಡ, ಇದೀಗ ಮಹಾನಟಿ ಶೋ ಮೂಲಕ ಹೊಸ ಪ್ರತಿಭೆಗಳನ್ನು ನೀಡಿದೆ. ಇದೀಗ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿದೆ. ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್‌ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್‌ ಅಪ್‌ ಆಗಿದ್ದಾರೆ. ವಿಜೇತರಿಗೆ

‘ಮಹಾನಟಿ’ಯಾಗಿ‌ ಮೈಸೂರಿನ ಪ್ರಿಯಾಂಕ| ರನ್ನರ್ ಅಪ್ ಆದ‌ ಧನ್ಯಶ್ರೀ Read More »

46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇಗುಲದ ‘ರತ್ನ ಭಂಡಾರ’ ಬಾಗಿಲು ಓಪನ್…

ಸಮಗ್ರ ನ್ಯೂಸ್: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು 46 ವರ್ಷಗಳ ಬಳಿಕ ಇಂದು ತೆರೆಯಲಾಗಿದೆ. ಬರೋಬ್ಬರಿ ನಾಲ್ಕು ದಶಕಗಳ ನಂತರ ಇದೀಗ ಓಪನ್ ಆಗಿದೆ. ಆದರೆ ಹಲವು ವರ್ಷಗಳಿಂದ ಅದರ ಕೀ ಕಾಣೆಯಾಗಿತ್ತು. ನಕಲಿ ಕೀ ಬಳಸಿ ರತ್ನ ಭಂಡಾರ ತೆರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ಕೊಠಡಿಯನ್ನು 16 ಜನರಿರುವ ತಂಡ ಪ್ರವೇಶಿಸಿತ್ತು. ದೇಗುಲದ ಬಾಗಿಲು ಓಪನ್ ಮಾಡಿದಂತೆ ಬಾವಲಿಗಳ ಹಾರಾಟವಾಗಿದೆ. ಸರ್ಪಗಳಿವೆ ಎನ್ನುವ ಕಾರಣಕ್ಕೆ ಉರಗ ತಜ್ಞರನ್ನು ಕರೆತರಲಾಗಿದೆ. ಇನ್ನೂ ರತ್ನ ಭಂಡಾರ

46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇಗುಲದ ‘ರತ್ನ ಭಂಡಾರ’ ಬಾಗಿಲು ಓಪನ್… Read More »

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್.. ಟಿಕೆಟ್ ದರ ಏರಿಕೆ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಂಡಿತು ಇದಾದ ಬೆನ್ನಲ್ಲೇ ಈಗ ಸಾರಿಗೆ ಬಸ್‌ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶಾಕ್ ನೀಡಲು ಮುಂದಾಗಿದೆ. ಹೌದು ಬಸ್ ಟಿಕೆಟ್‌ ದರ ಏರಿಕೆ ವಿಚಾರವಾಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಸುಳಿವು ನೀಡಿದ್ದು, ಇದಕ್ಕೆ ಪ್ರಯಾಣಿಕರಿಂದ ಇದೀಗ ಆಕ್ರೋಶ ವ್ಯಕ್ತವಾಗಿದೆ. ಗುಬ್ಬಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಅವರು, ಇಂಧನ ದರ, ವಾಹನ ಬಿಡಿ ಭಾಗಗಳ

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶಾಕ್.. ಟಿಕೆಟ್ ದರ ಏರಿಕೆ? Read More »