July 2024

ಭಾರತ ವಿರುದ್ಧದ ಟಿ20 ಸರಣಿ/ ಹೊಸ ನಾಯಕತ್ವದೊಂದಿಗೆ ಶ್ರೀಲಂಕಾ ತಂಡ ಪ್ರಕಟ

ಸಮಗ್ರ ನ್ಯೂಸ್‌: ಭಾರತ ವಿರುದ್ಧದ ಟಿ20 ಸರಣಿ ಜುಲೈ 27 ರಿಂದ ಶುರುವಾಗಲಿದ್ದು, ಈ ಹಿನ್ನಲೆಯಲ್ಲಿ 16 ಸದಸ್ಯರ ತಂಡವನ್ನು ಆತಿಥೇಯ ಶ್ರೀಲಂಕಾ ಪ್ರಕಟಿಸಿದೆ. ಶ್ರೀಲಂಕಾ ತಣಡದ ನೂತನ ನಾಯಕನಾಗಿ ಚರಿತ್ ಅಸಲಂಕಾ ನೇಮಕಗೊಂಡಿದ್ದಾರೆ. ಭಾರತ ಕೂಡ ನೂತನ ನಾಯಕ ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಆಡಲಿದೆ. ಸರಣಿ ಆರಂಭಕ್ಕೂ ಮುನ್ನ ವನಿಂದು ಹಸರಂಗ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. 34 ವರ್ಷದ ಅನುಭವಿ ಆಟಗಾರ ದಿನೇಶ್ ಚಂಡಿಮಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹಿರಿಯ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಸ್ ಅವರನ್ನು […]

ಭಾರತ ವಿರುದ್ಧದ ಟಿ20 ಸರಣಿ/ ಹೊಸ ನಾಯಕತ್ವದೊಂದಿಗೆ ಶ್ರೀಲಂಕಾ ತಂಡ ಪ್ರಕಟ Read More »

ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ

ಸಮಗ್ರ ನ್ಯೂಸ್: ನೇಪಾಳದ ಕಠ್ಮಂಡುವಿನಲ್ಲಿ ಟೇಕ್ ಆಪ್ ಆಗುವ ವೇಳೆ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನಗೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ಉಲ್ಲೇಖಿಸಿದ್ದಾರೆ. ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರು ಇರಲಿಲ್ಲ, ಆದರೆ ತಾಂತ್ರಿಕ ತಂಡದ 19 ಸದಸ್ಯರು ವಿಮಾನದಲ್ಲಿದ್ದರು. ಅಪಘಾತಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. 19 ಸದಸ್ಯರ ಸಾವಿನ ಶಂಕೆ ವ್ಯಕ್ತವಾಗಿದೆ. ಆದರೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅನ್ನೋದರ ಕುರಿತು ಖಚಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಅಪಘಾತ ನಡೆದ ಸ್ಥಳದಿಂದ ಇದುವರೆಗೆ

ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ Read More »

ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಗಲಭೆಗಳಲ್ಲಿ ಭಾಗಿಯಾಗಿಲ್ಲವೆಂದು 13 ಮಂದಿ‌ಯಿಂದ ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ

ಸಮಗ್ರ ನ್ಯೂಸ್: ಎರಡು ವರ್ಷದ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಜು. 22ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಂದಕುಮಾರ್‌, ಕಮಲಾಕ್ಷ, ಅರುಣ್‌ ರೈ, ಪದ್ಮನಾಭ ತಡಗಜೆ, ಪ್ರಶಾಂತ್‌, ಆನಂದ ಯು., ಧರ್ಮಪಾಲ, ಚಿದಾನಂದ ಬಾಳಿಲ, ಹರೀಶ್‌ ಬಾಳಿಲ, ಡಿಪಿನ್‌ ಎಡಮಂಗಲ, ಶಿವಾನಂದ, ಹರ್ಷಿತ್‌, ನಿತೀಶ್‌ ಕೆ. ಅವರ ಮೇಲೆ ಕೇಸು ದಾಖಲಿಸಲಾಗಿತ್ತು.

ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಗಲಭೆಗಳಲ್ಲಿ ಭಾಗಿಯಾಗಿಲ್ಲವೆಂದು 13 ಮಂದಿ‌ಯಿಂದ ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಪ್ಯಾರಿಸ್ ಒಲಿಂಪಿಕ್ಸ್‌ ೨೦೨೪/ ಇಂದಿನಿಂದ ಪಂದ್ಯಾವಳಿಗಳು ಶುರು

ಸಮಗ್ರ ನ್ಯೂಸ್‌: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇಂದು ಚಾಲನೆ ದೊರೆಯಲಿದ್ದು, ಪಂದ್ಯಾವಳಿಗಳು ಇಂದಿನಿಂದ ಶುರುವಾಗಲಿದೆ. ಒಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಜುಲೈ 26 ಕ್ಕೆ ನಿಗದಿಪಡಿಸಲಾಗಿದ್ದರೂ, ಇಂದು ಫುಟ್‌ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಲಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪಂದ್ಯಾವಳಿ ಆರಂಭಿಸುವ ಸಂಪ್ರದಾಯ ಶುರುವಾಗಿದ್ದು, 1992 ರಲ್ಲಿ. ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ನಡೆಸಲಾಗಿತ್ತು. ಇದಾದ ಬಳಿಕ ಪ್ರತಿ

ಪ್ಯಾರಿಸ್ ಒಲಿಂಪಿಕ್ಸ್‌ ೨೦೨೪/ ಇಂದಿನಿಂದ ಪಂದ್ಯಾವಳಿಗಳು ಶುರು Read More »

ಪುತ್ತೂರು: ಟ್ಯಾಂಕರ್ ಮತ್ತು‌ ಸ್ಕೂಟರ್‌ ನಡುವೆ ಭೀಕರ ಅಪಘಾತ| ವಿಕಲಚೇತನ ಸ್ಕೂಟಿ ಸವಾರ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರಿನ ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಟ್ಯಾಂಕ‌ರ್ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಪುತ್ತೂರು: ಟ್ಯಾಂಕರ್ ಮತ್ತು‌ ಸ್ಕೂಟರ್‌ ನಡುವೆ ಭೀಕರ ಅಪಘಾತ| ವಿಕಲಚೇತನ ಸ್ಕೂಟಿ ಸವಾರ ದುರ್ಮರಣ Read More »

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್ ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ ಮಾಡಲಾಗಿದೆ. ಬಿಹಾರ ಮೂಲದ ಕೃತಿ ಕುಮಾರಿ‌(24) ಕೊಲೆಯಾದ ಯುವತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ‌ಯನ್ನು ರಾತ್ರಿ ಸುಮಾರು 11.10 ರಿಂದ 11.30ರ ನಡುವೆ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಯುವಕನೋರ್ವ ಚಾಕು ಹಿಡಿದುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೃತಿ ಕುಮಾರಿ‌ ಕತ್ತು ಕೊಯ್ದು

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ Read More »

ಅಮ್ಮನ ಮಾತು ನಡೆಸಿದ ವಿನೋದ್ ರಾಜ್| ದರ್ಶನ್ ಭೇಟಿಗೆ ಅಸಲಿ ಕಾರಣವೇನು?

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿನೋದ್ ರಾಜ್ ಅವರು ಭೇಟಿ ಮಾಡಿದ್ದಾರೆ. ಜುಲೈ 22ರಂದು ಭೇಟಿ ಮಾಡಿದ್ದು ಜೈಲಿಗೆ ತೆರಳಿದ ವಿನೋದ್ ರಾಜ್ ಅವರು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್ ರಾಜ್ ದರ್ಶನ್ ಭೇಟಿಗೆ ತಾಯಿ ನೀಡಿದ ಹೇಳಿಕೆ ಕಾರಣ ಎಂದಿದ್ದಾರೆ. ‘ನನ್ನ ತಾಯಿ ಮಂಚದಲ್ಲಿ ಮಲಗಿದ್ದಾಗ ಒಂದು ಮಾತನ್ನು ಹೇಳಿದ್ದರು. ತೂಗುದೀಪ ಶ್ರೀನಿವಾಸ್ ಮಗ ಬೆಂಬಲ ಇಲ್ಲದೆ ಬೆಳೆದವನು.

ಅಮ್ಮನ ಮಾತು ನಡೆಸಿದ ವಿನೋದ್ ರಾಜ್| ದರ್ಶನ್ ಭೇಟಿಗೆ ಅಸಲಿ ಕಾರಣವೇನು? Read More »

ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ

ಸಮಗ್ರ ನ್ಯೂಸ್: ಸಿಎಂ‌‌ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲ್ಕಲ್ ಗ್ರಾಮದ ನಿವಾಸಿ. ಕುರುಬ ಸಮುದಾಯದ ಪ್ರಭಾವಿ ಮುಂಖಡರಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಇವರು ಕಲಬುರಗಿ ತೊಗರಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದರೆ ತೊಗರಿ‌ ನಿಗಮ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೂ ಆಪ್ತರಾಗಿದ್ದರು. ಮರಿಗೌಡ ಪಾಟೀಲ್ ಹುಲ್ಕಲ್ ಹಿಂದೆ‌

ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ Read More »

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಇಲ್ಲ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ…!

ಸಮಗ್ರ ನ್ಯೂಸ್: ನಿನ್ನೆ 2024-25ನೇ ಸಾಲಿನ ಕೇಂದ್ರ ಬಜೆಟ್ ನಡೆದಿದ್ದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ ಯಾವುದೇ ಘೋಷಣೆ ಮಾಡಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳ ನಿರೀಕ್ಷೆಯಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಮೋದಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಇಲ್ಲ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ…! Read More »

ನೀಟ್- ಯುಜಿ 2024 ಮರು ಪರೀಕ್ಷೆ ನಡೆಸುವುದಿಲ್ಲ| ಸುಪ್ರೀಂ ಮಹತ್ವದ ತೀರ್ಪು

ಸಮಗ್ರ ನ್ಯೂಸ್: 2024ರ ನೀಟ್-ಯುಜಿ ಪರೀಕ್ಷೆಗೆ ಮರು ಪರೀಕ್ಷೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಲಭ್ಯವಿರುವ ದತ್ತಾಂಶವು “ವ್ಯವಸ್ಥಿತ ಉಲ್ಲಂಘನೆ” ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ “ಪಾವಿತ್ರ್ಯತೆಯ” ಮೇಲೆ ಪರಿಣಾಮ ಬೀರಿದೆ ಎಂದು ಸೂಚಿಸುವುದಿಲ್ಲ ಎಂದಿದೆ. ನೀಟ್ ಯುಜಿ ಪ್ರಕರಣದ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಇಂದು ನಡೆಸಿದೆ. 1 ಲಕ್ಷದ 8 ಸಾವಿರ ಸೀಟುಗಳಿಗೆ ನಡೆದ ಪರೀಕ್ಷೆಯಲ್ಲಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವಿಚಾರಣೆ ವೇಳೆ ಸಿಜೆಐ ತಿಳಿಸಿದ್ದಾರೆ. ಈ ಪೈಕಿ 52 ಸಾವಿರ

ನೀಟ್- ಯುಜಿ 2024 ಮರು ಪರೀಕ್ಷೆ ನಡೆಸುವುದಿಲ್ಲ| ಸುಪ್ರೀಂ ಮಹತ್ವದ ತೀರ್ಪು Read More »