ಸಮಗ್ರ ನ್ಯೂಸ್: ನಟಿ ಪ್ರಣಿತಾ ಸುಭಾಷ್ ಇದೀಗ ಅಭಿಮಾನಿಗಳಿಗೆ ಮತ್ತೊಮ್ಮೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೂ ಎರಡನೇ ಬಾರಿ. ಅಂದರೆ ತಾವು ಎರಡನೇ ಬಾರಿ ಪ್ರೆಗ್ನೆಂಟ್ ಆಗಿರೋ ವಿಚಾರವನ್ನು ಪ್ರಣಿತಾ ಸುಭಾಷ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರಣಿತಾ 2021ರ ಮೇ 30ರಂದು ಮದುವೆ ಆದರು. ಉದ್ಯಮಿ ನಿತಿನ್ ರಾಜು ಜೊತೆ ವಿವಾಹ ಆಗಿದ್ದಾರೆ. ಕೊವಿಡ್ ಇದ್ದ ಕಾರಣ ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು. ಇವರು ಜೂನ್ 2022ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗುವಿಗೆ ಈ ದಂಪತಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ ಇದ್ದಾರೆ