Ad Widget .

ಸೈಯ್ಯದ್ ಫಝಲ್ ಕೋಯಮ್ಮ ತಂಙಲ್ ಕೂರ ನಿಧನ|SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂತಾಪ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಸುನ್ನಿ ಮುಸ್ಲಿಮರ ಆಧ್ಯಾತ್ಮಿಕ ನೇತಾರರು, ಉಳ್ಳಾಲದ ಗೌರವಾನ್ವಿತ ಖಾಝಿಯೂ ಆದ ಕೂರತ್ ತಂಘಳ್ ಎಂದೇ ಪ್ರಸಿದ್ಧರಾದ ಬಹುಮಾನ್ಯ ಸೆಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ರವರು ನಮ್ಮನಗಲಿದ್ದಾರೆ, ಇವರ ವಿಯೋಗವು ಮುಸ್ಲಿಂ ಸಮುದಾಯ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿಗೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಪ್ರಕಟಣೆಯಲ್ಲಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

Ad Widget . Ad Widget .

ಕೇರಳ, ಕರ್ನಾಟಕದ ಸೇರಿದಂತೆ ದಕ್ಷಿಣ ಭಾರತದಲ್ಲಿ ಸುನ್ನಿ ಸಮೂಹಕ್ಕೆ ಆಧ್ಯಾತ್ಮಿಕ ನಾಯಕತ್ವವನ್ನು ನೀಡಿದ ಗೌರವಾನ್ವಿತರು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು. ಇವರ ನಿಧನದಿಂದ ಸಮುದಾಯವು ಇಂದು ದುಃಖದಲ್ಲಿದೆ. ಸೃಷ್ಟಿಕರ್ತನು ತಂಙಳ್ ರವರ ಕುಟುಂಬಕ್ಕೆ ಮತ್ತು ಸಮುದಾಯಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಮತ್ತು ಅವರ ಪಾರತ್ರಿಕ ಜೀವನವೂ ಸುಖ ಶಾಂತಿ ಮತ್ತು ಸಮೃದ್ದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಮ್ಮ ಸಂತಾಪ ಸೂಚಕ ಪ್ರಕಟಣೆಯಲ್ಲಿಅನ್ವರ್ ಸಾದತ್ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *