Ad Widget .

ಹೆಂಡತಿ ಜೊತೆ ಸರಸವಾಡಿದ ಗಂಡನಿಗೆ 7 ವರ್ಷ ಜೈಲು!!

ಸಮಗ್ರ ನ್ಯೂಸ್: ಹೆಂಡತಿ ಜೊತೆ ಸೆಕ್ಸ್ ಮಾಡಿದ ಗಂಡನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬರೇಲಿ ವಿಚಾರಣಾ ನ್ಯಾಯಾಲಯದ ಆದೇಶ ಬುಧವಾರ ಪ್ರಕಟ ಮಾಡಿದೆ.

Ad Widget . Ad Widget .

2015ರಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ (ಈಗ 22 ವರ್ಷ) ಅತ್ಯಾಚಾರ ಎಸಗಿದ 30 ವರ್ಷದ ವ್ಯಕ್ತಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಯುವತಿ 9 ವರ್ಷಗಳ ಹಿಂದೆ ಆತನನ್ನು ಪ್ರೀತಿಸಿ, ಆತನೊಂದಿಗೆ ಓಡಿಹೋಗಿ ವಿವಾಹವಾಗಿದ್ದಳು. ಆಗ ಆಕೆಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಮದುವೆಯಾದ ಎರಡು ತಿಂಗಳ ನಂತರ ಆ ಬಾಲಕಿ ತನ್ನ ಪೋಷಕರ ಬಳಿಗೆ ವಾಪಾಸ್ ಹೋಗಿದ್ದಳು. ಆದರೆ ನಂತರ ಮತ್ತೆ ತನ್ನ ಗಂಡನ ಮನೆಗೆ ಮರಳಿದಳು. ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದು, ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Ad Widget . Ad Widget .

ವಿಚಿತ್ರವೆಂದರೆ ಈ ದಂಪತಿ ಇದೀಗ ಸುಖ ದಾಂಪತ್ಯ ನಡೆಸುತ್ತಿದ್ದಾರೆ. 9 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇದೀಗ ತೀರ್ಪು ಪ್ರಕಟವಾಗಿದೆ. ಆಗ ದೂರು ನೀಡಿದ್ದ ಯುವತಿ ಇದೀಗ 3ನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಸಮಯದಲ್ಲಿ ಗಂಡ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ಬಂದಿರುವುದರಿಂದ ಆಕೆ ಈ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಯೋಜಿಸಿದ್ದಾರೆ.

Leave a Comment

Your email address will not be published. Required fields are marked *