ಸುಳ್ಯ: ಮುಖ ತೊಳೆಯಲು ಹೋದಾತ ಹೊಳೆಗೆ ಬಿದ್ದು ಸಾವು

ಸಮಗ್ರ ನ್ಯೂಸ್: ಮುಖ ತೊಳೆಯಲು ಮನೆ ಸಮೀಪದ ಹೊಳೆ ಬದಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿಂದ ವರದಿಯಾಗಿದೆ. ಗ್ರಾಮದ ಬಾಜಿನಡ್ಕದ ಚನಿಯ(50) ಮೃತಪಟ್ಟ ದುರ್ದೈವಿ.

Ad Widget ... ..

ಶುಕ್ರವಾರ ಮುಂಜಾನೆ ಮನೆ ಸಮೀಪದ ಹೊಳೆ ಸಮೀಪ ಹೋಗಿದ್ದು ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿ ಹತ್ತಿರದ ಮನೆಯವರು ಬೊಬ್ಬೆ ಹಾಕಿದ ವೇಳೆ ಸ್ಥಳೀಯರೊಬ್ಬರು ಓಡಿಬಂದು ನೀರಿಗಿಳಿದು ಮೇಲೆತ್ತಿದ್ದರಾದರೂ ಆಗಲೇ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.

Ad Widget

ಅರಂತೋಡು ಸಹಕಾರಿ ಸಂಘದ ಸಮೃದ್ಧಿ ಮಾರ್ಟ್ ನ ಆಂಬುಲೆನ್ಸ್ ನಲ್ಲಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ . ಮೃತರು ಪತ್ನಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *