May 2024

ವಿಧಾನ ಪರಿಷತ್ ಚುನಾವಣೆ| 6 ಸ್ಥಾನಗಳಿಗೆ ಅಧಿಸೂಚನೆ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕದ 6 ವಿಧಾನ ಪರಿಷತ್ತಿನ ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. 3 ಶಿಕ್ಷಕರು ಹಾಗೂ 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಕರ್ನಾಟಕದ 6 ವಿಧಾನ ಪರಿಷತ್ತಿನ ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. 3 ಶಿಕ್ಷಕರು ಹಾಗೂ 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ ಎಂದಿದೆ. ಈಶಾನ್ಯ ಪದವೀಧರ, ನೈರುತ್ಯ ಪದವೀಧರರ ಹಾಗೂ ಬೆಂಗಳೂರು ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. […]

ವಿಧಾನ ಪರಿಷತ್ ಚುನಾವಣೆ| 6 ಸ್ಥಾನಗಳಿಗೆ ಅಧಿಸೂಚನೆ ಪ್ರಕಟ Read More »

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಹಾಯಕ ಇಒ‌ ಆಗಿ ಅನ್ಯಧರ್ಮೀಯ ಅಧಿಕಾರಿ ನೇಮಕಗೊಂಡರೇ? ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರದ ಅಸಲಿಯತ್ತೇನು? ಯಾರು ಈ ಯೇಸುರಾಜ್?

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಯೇಸುರಾಜ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ . ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಇವರನ್ನು ಕುಕ್ಕೆ ದೇವಳದ ನೂತನ ಎಇಒ ಆಗಿ ಸರ್ಕಾರ ನೇಮಿಸಿದೆ. ನೂತನ ಎಇಒಗೆ ಪ್ರಭಾರ ಎಇಒ ಪರಮೇಶ್ ಅಧಿಕಾರ ಹಸ್ತಾಂತರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ನೂತನ ಎಇಒ ಅವರನ್ನು ಸ್ವಾಗತಿಸಿದರು. ಬಳಿಕ ನಿರ್ಗಮಿತ ಎಇಒ ಪರಮೇಶ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಗಿದೆ. ಸದ್ಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಹಾಯಕ ಇಒ‌ ಆಗಿ ಅನ್ಯಧರ್ಮೀಯ ಅಧಿಕಾರಿ ನೇಮಕಗೊಂಡರೇ? ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರದ ಅಸಲಿಯತ್ತೇನು? ಯಾರು ಈ ಯೇಸುರಾಜ್? Read More »

ಕುಕ್ಕೆಸುಬ್ರಹ್ಮಣ್ಯ: ಉಪನ್ಯಾಸಕರೊಂದಿಗೆ ಅನುಚಿತ ವರ್ತನೆ ನಡೆಸಿದ ವಿದ್ಯಾರ್ಥಿ ಸಸ್ಪೆಂಡ್

ಸಮಗ್ರ ನ್ಯೂಸ್: ವಿದ್ಯಾರ್ಥಿಯೊಬ್ಬ ಕಾಲೇಜಿನ ಉಪನ್ಯಾಸಕರ ಜೊತೆ ಅನುಚಿತ ವರ್ತನೆ ನಡೆಸಿದ ಹಿನ್ನಲೆಯಲ್ಲಿ ಆತನನ್ನು ತರಗತಿಯಿಂದ ಅಮಾನತು ಮಾಡಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಇಲ್ಲಿನ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿ ಮೊಬೈಲ್ ವಿಷಯದಲ್ಲಿ ಉಪನ್ಯಾಸಕರ ಜೊತೆಗೆ ಅನುಚಿತ ವರ್ತನೆ ಹಾಗೂ ಹಲ್ಲೆ ಯತ್ನ ಮಾಡಿದ್ದಾಗಿ ಹೇಳಲಾಗಿದ್ದು, ಈ ಕುರಿತು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ವಿಧ್ಯಾರ್ಥಿಯಿಂದ ಮುಚ್ಚಳಿಕೆ ಬರೆಸಿ ಕಳುಹಿಸಲಾಗಿತ್ತು. ಆದರೆ ಶಿಸ್ತು ಹಾಗೂ ಗುಣಮಟ್ಟದ ಉತ್ತಮ ಶಿಕ್ಷಣಕ್ಕೆ ಹೆಸರಾಗಿದ್ದ ಕಾಲೇಜಿನಲ್ಲಿ ಈ ರೀತಿಯ ಘಟನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ

ಕುಕ್ಕೆಸುಬ್ರಹ್ಮಣ್ಯ: ಉಪನ್ಯಾಸಕರೊಂದಿಗೆ ಅನುಚಿತ ವರ್ತನೆ ನಡೆಸಿದ ವಿದ್ಯಾರ್ಥಿ ಸಸ್ಪೆಂಡ್ Read More »

ಮಂಡ್ಯ: ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ

ಸಮಗ್ರ ನ್ಯೂಸ್‌ : ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ. ಪರಿಣಾಮ ಎಲೆಕ್ಟ್ರಿಲ್ ಸ್ಕೂಟರ್ ಮತ್ತು ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಕರಕಲಾಗಿದೆ. ಪಟ್ಟಣದ ಉಮಾಶಂಕರ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ತಮ್ಮ ಶಾಮಿಯಾನದ ಅಂಗಡಿಯಲ್ಲಿ ಸ್ಕೂಟರ್ ಚಾರ್ಜ್ ಗೆ ಹಾಕಿದ್ದ ವೇಳೆ ಸ್ಫೋಟಗೊಂಡಿದೆ. ಸ್ಕೂಟರ್ ಭಸ್ಮಗೊಂಡು ಶಾಮಿಯಾನಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಂಡ್ಯ: ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ Read More »

ಪೆನ್ ಡ್ರೈವ್ ಕಾಮಕಾಂಡ| ಬಂಧನ ಭೀತಿಯಲ್ಲಿ ಪ್ರಜ್ವಲ್| ಎಸ್ಐಟಿ ನಿಂದ ಲುಕ್ ಔಟ್ ನೋಟೀಸ್

ಸಮಗ್ರ ನ್ಯೂಸ್: ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಸಂಸದ ಪ್ರಜ್ವಲ್‌ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಸಂಬಂಧ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಈಗಾಗಲೇ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುವ‌ ಮುನ್ನವೇ ಪ್ರಜ್ವಲ್‌ ರೇವಣ್ಣ ದೇಶದಿಂದ‌ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ. ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ

ಪೆನ್ ಡ್ರೈವ್ ಕಾಮಕಾಂಡ| ಬಂಧನ ಭೀತಿಯಲ್ಲಿ ಪ್ರಜ್ವಲ್| ಎಸ್ಐಟಿ ನಿಂದ ಲುಕ್ ಔಟ್ ನೋಟೀಸ್ Read More »

ಚಾಮರಾಜನಗರ: ಸಾರಿಗೆ ಬಸ್‌ ತಡೆದುವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಮಗ್ರ ನ್ಯೂಸ್‌ : ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜುಗಳಿಗೆ ತೆರಳಲು ಸಕಾಲದಲ್ಲಿ ಬಸ್ ಸೌಲಭ್ಯವಿಲ್ಲ ಎಂದು ಹಲವಾರು ಭಾರಿ ಅಧಿಕಾರಿಗಳಿಗೆ ದೂರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು

ಚಾಮರಾಜನಗರ: ಸಾರಿಗೆ ಬಸ್‌ ತಡೆದುವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಸಮಗ್ರ ನ್ಯೂಸ್‌ : ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಸಿದ್ದಾಪುರ ಸಮೀಪದ ಉಳ್ಳೂರು-74 ಗ್ರಾಮದ ನೂಜಿನಬೈಲು ನಿವಾಸಿ, ಉದ್ಯಮಿ, ಸಮಾಜ ಸೇವಕ ಪ್ರಶಾಂತ್ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಮೇ 1ರಂದು ಹೊನ್ನಾವರದಲ್ಲಿ ಈ ಘಟನೆ ನಡೆದಿದೆ. ಹೊನ್ನಾವರ ತಲುಪಿದಾಗ ಪ್ರಶಾಂತ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಬಸ್ ಕಂಡಕ್ಟರ್‌ಗೆ ವಿಷಯ ತಿಳಿಸಿದರು. ಕೂಡಲೇ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು Read More »

ಪಾಕ್‍ನಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು/ ಒಂದು ಕೇಜಿ ಗೋಧಿ ಹಿಟ್ಟಿನ ಬೆಲೆ ರೂ. 800

ಸಮಗ್ರ ನ್ಯೂಸ್: ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಇದೀಗ 1 ಕೇಜಿ ಗೋಧಿ ಹಿಟ್ಟಿನ ಬೆಲೆ 800 ರು. ದಾಟಿದ್ದು, ಒಂದು ರೊಟ್ಟಿ 25 ರು.ಗಿಂತ ಕಮ್ಮಿಗೆ ಸಿಗುತ್ತಿಲ್ಲ. ಅಲ್ಲದೆ ಬಾಳೆಹಣ್ಣು ಬೆಲೆ ಕೂಡ 200 ರು. ಗಡಿ ದಾಟಿದೆ. ಹೀಗಾಗಿ ಬೆಲೆ ನಿಯಂತ್ರಣ ಹಾಗೂ ಆಹಾರ ಪೆÇೀಲು ನಿಯಂತ್ರಣ ಉದ್ದೇಶದಿಂದ ಮದುವೆ ತಿನಿಸು ಹಾಗೂ ಭಕ್ಷ್ಯಗಳಿಗೆ ಲಗಾಮು ಹಾಕಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ವಿಶೇಷವಾಗಿ ಮದುವೆಗಳು ಮತ್ತು ಸಮಾರಂಭಗಳಲ್ಲಿ. ಪಂಜಾಬ್ ಪ್ರಾಂತ್ಯದ

ಪಾಕ್‍ನಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು/ ಒಂದು ಕೇಜಿ ಗೋಧಿ ಹಿಟ್ಟಿನ ಬೆಲೆ ರೂ. 800 Read More »

ಹುಬ್ಬಳ್ಳಿ: ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರು

ಸಮಗ್ರ ನ್ಯೂಸ್‌ : ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರುಗಳು ಹಿರೇಮಠದ ದಂಪತಿಗೆ ಸಾಂತ್ವನ ಹೇಳಿದರು. ನಂತರ ಅವರಿಂದ ಪಾದಪೂಜೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಶ್ರೀಗಳು, ನೇಹಾ ಹಿರೇಮಠ ಹತ್ಯೆ ಖಂಡನೀಯ. ಇಂತಹ ನೀಚ ಕೃತ್ಯ ಮಾಡಿದವನಿಗೆ ತಕ್ಕ ಶಿಕ್ಷೆ ನೀಡಬೇಕು. ಪ್ರಕರಣವನ್ನು ಸರ್ಕಾರ ಈಗಾಗಲೇ ಸಿಐಡಿಗೆ ವಹಿಸಿದೆ. ಆದರೆ, ಸಿಐಡಿ ಸಂಸ್ಥೆಯು ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯ ಮಾಡಿದರು.

ಹುಬ್ಬಳ್ಳಿ: ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರು Read More »

ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಗ್‍ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಚೈತನ್ಯ ಯುವಜನ ಪಕ್ಷದಿಂದ ಬಿಗ್‍ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ ಕಣಕ್ಕಿಳಿದಿದ್ದಾರೆ. ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಇವರಿಗೆ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದಾರೆ, ಎಸ್‍ಆರ್ ಕಾಂಗ್ರೆಸ್ ಪಕ್ಷದಿಂದ ವಂಗಾ ಗೀತಾ ಅವರು ಸ್ಪರ್ಧೆ ಮಾಡಲಿದ್ದಾರೆ. ಬ್ರಾಹ್ಮಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ವೇದ ಶಾಲೆಯನ್ನು ಸ್ಥಾಪಿಸುವ ಜೊತೆಗೆ ಪೀಠಾಪುರಂ ಪಟ್ಟಣವನ್ನು ರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯಿಂದ

ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಗ್‍ಬಾಸ್ ಸ್ಪರ್ಧಿ ಮಂಗಳಮುಖಿ ತಮನ್ನಾ ಸಿಂಹಾದ್ರಿ Read More »