Ad Widget

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಹಾಯಕ ಇಒ‌ ಆಗಿ ಅನ್ಯಧರ್ಮೀಯ ಅಧಿಕಾರಿ ನೇಮಕಗೊಂಡರೇ? ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರದ ಅಸಲಿಯತ್ತೇನು? ಯಾರು ಈ ಯೇಸುರಾಜ್?

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಯೇಸುರಾಜ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ . ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಇವರನ್ನು ಕುಕ್ಕೆ ದೇವಳದ ನೂತನ ಎಇಒ ಆಗಿ ಸರ್ಕಾರ ನೇಮಿಸಿದೆ. ನೂತನ ಎಇಒಗೆ ಪ್ರಭಾರ ಎಇಒ ಪರಮೇಶ್ ಅಧಿಕಾರ ಹಸ್ತಾಂತರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ನೂತನ ಎಇಒ ಅವರನ್ನು ಸ್ವಾಗತಿಸಿದರು. ಬಳಿಕ ನಿರ್ಗಮಿತ ಎಇಒ ಪರಮೇಶ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಸದ್ಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸು ರಾಜ್ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಯೇಸು ರಾಜ್ ಎಂಬವರ ಹೆಸರಿನಲ್ಲಿರುವ ‘ಯೇಸು’ ಎಂಬ ಪದವನ್ನು ಅಪಾರ್ಥ ಮಾಡಿಕೊಂಡು, ಅವರ ಧರ್ಮದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ ಹಂಚಿ ವಿಕೃತಿ ಮೆರೆಯುತ್ತಿದ್ದಾರೆ.

Ad Widget . Ad Widget .

ಯೇಸುರಾಜ್ ಅವರು ಹಿಂದೂ ಧರ್ಮದ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿ. ಕರ್ನಾಟಕವು ಪ್ರಾದೇಶಿಕ ವೈವಿದ್ಯತೆಗಳನ್ನು ಹೊಂದಿದ ರಾಜ್ಯವಾಗಿದ್ದು ಹಿಂದೂ ಧರ್ಮದಲ್ಲಿ ನೂರಾರು ಉಪಜಾತಿಗಳಿವೆ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಪದಗಳಿಗೆ ಬೇರೆ ಬೇರೆ ಅರ್ಥಗಳಿರುತ್ತವೆ. ಆದರೆ ಕಿಡಿಗೇಡಿಗಳು ಯೇಸುರಾಜ್ ಎಂಬ ಹೆಸರಿನಲ್ಲಿರುವ ‘ಯೇಸು‘ ಎಂಬ ಪದವನ್ನು ಕ್ರೈಸ್ತ ಜಾತಿ ಎಂಬಂತೆ ತಪ್ಪಾಗಿ ಬಿಂಬಿಸುತ್ತಿದ್ದಾರೆ.

ಕೆಲ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡ ಕಿಡಿಗೇಡಿಗಳು ಕರ್ನಾಟಕ ಸರಕಾರವು ಹಿಂದೂ ದೇವಾಲಯಕ್ಕೆ ಕ್ರೈಸ್ತ ಧರ್ಮದಿಂದ ಬಂದಿರುವ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ದೇವಾಲಯಗಳಿಗೆ ಅನ್ಯಮತಿಯ ಅಧಿಕಾರಿಗಳನ್ನು ನೇಮಿಸಬಾರದೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುವಾಗ ಕ್ರೈಸ್ತ ಧರ್ಮದವರನ್ನು ಅಧಿಕಾರಿಯಾಗಿ ನೇಮಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವನ್ನು ತಿಳಿಯದವರು ಸರಕಾರದ ವಿರುದ್ಧ ಜನರಲ್ಲಿ ತಪ್ಪು ಭಾವನೆ ಮೂಡಿಸಿ ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿದ್ದಾರೆ.

ಇಂಥ ಕೀಳು ಮಟ್ಟದ ರಾಜಕೀಯ ಸರಿಯಲ್ಲ. ಸರಕಾರಿ ಸೇವೆಗಾಗಿ ವರ್ಗಾವಣೆಗೊಂಡು ಬಂದಿರುವ ದಲಿತ ಪಂಗಡಕ್ಕೆ ಸೇರಿದ ಅಧಿಕಾರಿಯೋರ್ವರ ತೇಜೋವಧೆಯಾಗುತ್ತಿದೆ ಹಾಗೂ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಸಂಚು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಪಪ್ರಚಾರಗಳನ್ನು ಮುಂದುವರೆಸಿದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಕಮಿಟಿ ಅಧ್ಯಕ್ಷ ಸುಧೀರ್ ಕುಮಾರ್ ರೈ ತಿಳಿಸಿದ್ದಾರೆ.

Leave a Comment

Your email address will not be published. Required fields are marked *