May 2024

ಕವನ; ನಾ ಕಂಡಂತೆ ಕಾಮತರು

ಉಪೇಂದ್ರ ಕಾಮತರು ನಮ್ಮೂರಿನ ಉದ್ದಾರಕರುಸರ್ವಜೀವಿಗಳ ಬದುಕಿನ ಚಿಂತಕರುಧೈರ್ಯ, ದಾನವಂತ ಮನಸ್ಸುಳ್ಳವರುಶ್ರಮಿಕರು ಸಮಾಧಾನದಿ ಸಂತೈಸುವ ಗುಣವುಳ್ಳವರು ಉಪೇಂದ್ರ ಕಾಮತರು ಭಾನು ಭೂಮಿಗೆ ವಾಣಿಅವರೇ ಬದುಕಿನ ಅಮೃತವರ್ಷಿಣಿಸರ್ವ ಗುಣ ಸಂಪಾದಕರುಜನ ಜೀವನ ತುಂಬಿರುವ ದ್ಯೋತಕರು ಉಪೇಂದ್ರ ಕಾಮತರು ನಮ್ಮೂರಿನ ಪರಿಸರದ ನಂದಾದೀಪನಮ್ಮೆಲ್ಲರ ಜನರಿಗೆ ದಾರಿದೀಪಬೆಳೆಯುತ್ತಿರುವ ಸಿರಿಗಳಿಗೆ ಶಾಶ್ವತ ದೀಪಸಮಾಜವನ್ನು ಬೆಳಗಿಸಿದ ಜ್ಞಾನ ದೀಪ ಉಪೇಂದ್ರ ಕಾಮತರು ಜೀವನಕ್ಕೆ ಹಣತೆಯಂತೆ ದಾರಿಯಲ್ಲಿವರ್ಣಿಸಲಾಗದ ನಿಸ್ವಾರ್ಥ ಜೀವನದಲ್ಲಿಬದುಕು ನೀಡಿದ ಶಾಲಾ ಸ್ಥಾಪಕ ಅಧ್ಯಕ್ಷರ ನೆನಪಿನಲ್ಲಿನಿಮಗಿದು ನನ್ನ ಶತಕೋಟಿ ನಮನಗಳು ✍️ ಪೂರ್ಣಿಮ ಕಾರಿಂಜ, ಸಹ […]

ಕವನ; ನಾ ಕಂಡಂತೆ ಕಾಮತರು Read More »

ಉಡುಪಿ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಸಮಗ್ರ ನ್ಯೂಸ್ : ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ನಾಪತ್ತೆ ಯಾದ ಯುವತಿ, 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2542248, ಮೊ.ನಂ.9480805452, ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಮೊ.ನಂ: 9480805400 ಅನ್ನು ಸಂಪರ್ಕಿಸಬಹುದಾಗಿದೆ ಎಂದು

ಉಡುಪಿ: ಕಾಲೇಜಿಗೆ ಹೋದ ಯುವತಿ ನಾಪತ್ತೆ Read More »

ಕಾರವಾರ: ಹೊಳೆಯಲ್ಲಿ ಮುಳುಗಿ ಇಬ್ಬರು ಮೃತ್ಯು

ಸಮಗ್ರ ನ್ಯೂಸ್ : ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ. ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ಸೂರಜ್ ನಾಯ್ಕ (17), ಪಾರ್ವತಿ ಶಂಕರ ನಾಯ್ಕ (35) ಮೃತರು. ಮೃತರು ಭಟ್ಕಳದ ಕಂಡೆಕೋಡ್ಲು ನಿವಾಸಿಗಳಾಗಿದ್ದಾರೆ. ಮೃತ ಸೂರಜ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ. 15ಕ್ಕೂ ಹೆಚ್ಚು ಜನ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕಾರವಾರ: ಹೊಳೆಯಲ್ಲಿ ಮುಳುಗಿ ಇಬ್ಬರು ಮೃತ್ಯು Read More »

ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆ/ ಚಾಲೆಜಿಂಗ್ ಸ್ಟಾರ್ ಗೆ ಜೊತೆಯಾದ ತುಳುನಾಡ ಚೆಲುವೆ

ಸಮಗ್ರ ನ್ಯೂಸ್: ಚಾಲೆಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಚಲನಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಬೆನ್ನಲ್ಲೇ, ಇದೀಗ ನಾಯಕಿಯನ್ನು ಆಯ್ಕೆ ಮಾಡಲಾಗಿದೆ. ವಾಮನ ಸೇರಿದಂತೆ ಕೆಲವು ಚಲನಚಿತ್ರಗಳಲ್ಲಿ ನಟಿಸಿರುವ ತುಳುನಾಡಿನ ಚೆಲುವೆ ರಚನಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶಂಕರ್ ರಾವ್ ನಿರ್ದೇಶನದ ವಾಮನ ಚಲನಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದರು. ಅದಕ್ಕಿಂತಲೂ ಮೊದಲು ತುಳು ಚಲನಚಿತ್ರಗಳಲ್ಲಿ ನಟಿಸಿದ್ದರು. ಮಾಡೆಲ್, ಡ್ಯಾನ್ಸರ್ ಮತ್ತು ಬರಹಗಾರ್ತಿ ಆಗಿರುವ ರಚನಾ ರೈ, ಓ ಮೈ ಡಾಗ್ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆ/ ಚಾಲೆಜಿಂಗ್ ಸ್ಟಾರ್ ಗೆ ಜೊತೆಯಾದ ತುಳುನಾಡ ಚೆಲುವೆ Read More »

ಹಾಸನ ಬಳಿಕ ರಾಮನಗರದಲ್ಲಿ ಮಹಾ ದುರಂತ|ಈಜಲು ತೆರಳಿದ ಮೂವರು ಮಕ್ಕಳು ನೀರುಪಾಲು

ಸಮಗ್ರ ನ್ಯೂಸ್: ಹಾಸನಸಲ್ಲಿ ಈಜಲು ತೆರಳಿದ ನಾಲ್ವರು ಮಕ್ಕಳು ಮೃತಪಟ್ಟ ಘಟನೆ ನಡೆದಿತ್ತು. ಇದು ಮಾಸುವ ಮುನ್ನವೇ ಮೇ 17ರಂದು ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ. ಬಂಡೆಯ ಮೇಲಿನ ನೀರಿನ ಹೊಂಡದಲ್ಲಿ ಈಜಲು ಹೋದ ಶಾಬಾಜ್ (14), ಸುಲ್ತಾನ್ (13), ರಿಹಾನ್ ಖಾನ್ (16) ಮೃತಪಟ್ಟಿದ್ದಾರೆ. ಇವರೆಲ್ಲರೂ ರಾಮನಗರ ಟೌನ್‌‌ ನ ಸುಲ್ತಾನ ನಗರದವರು. ಒಟ್ಟು 8 ಯುವಕರ ತಂಡ ನಮಾಜ್ ಮುಗಿಸಿ ಈಜಲು ಹೊಂಡಕ್ಕೆ ಇಳಿದಿದ್ದರು.

ಹಾಸನ ಬಳಿಕ ರಾಮನಗರದಲ್ಲಿ ಮಹಾ ದುರಂತ|ಈಜಲು ತೆರಳಿದ ಮೂವರು ಮಕ್ಕಳು ನೀರುಪಾಲು Read More »

ಅಂಜಲಿ ಕೊಲೆ ಹಂತಕ ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನ..!

ಸಮಗ್ರ ನ್ಯೂಸ್: ಹುಬ್ಬಳ್ಳಿಯಲ್ಲಿ ಅಂಜಲಿಯನ್ನು ಕೊಂದು ತಲೆ ತಪ್ಪಿಸಿಕೊಂಡಿದ್ದ ಆರೋಪಿ ಗಿರೀಶ್‌, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಕೊಲೆ ಯತ್ನಕ್ಕೆ ಒಳಗಾದ ಮಹಿಳೆ ಈ ಕುರಿತು ದಾವಣಗೆರೆಯಲ್ಲಿ ದೂರು ನೀಡಿದ್ದಾರೆ. ಗದಗ ಮೂಲದ ಲಕ್ಷ್ಮೀ ಹಾಗೂ ಗಂಡ ಮಹಾಂತೇಶ್ ಸವಟೂರು ಪ್ರಕರಣ ದಾಖಲಿಸಿದ್ದಾರೆ. ತುಮಕೂರಿನಿಂದ ವಿಶ್ವಮಾನವ ಎಕ್ಸಪ್ರೆಸ್ ಟ್ರೈನ್‌ನಲ್ಲಿ ಪತಿ ಜೊತೆ ಇವರು ಪ್ರಯಾಣಿಸುತ್ತಿದ್ದರು. ಆಗ ಅಂಜಲಿ ಕೊಲೆ ಆರೋಪಿ ಗಿರೀಶ್ ಹಲ್ಲೆ ಮಾಡಿದ್ದ. ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ

ಅಂಜಲಿ ಕೊಲೆ ಹಂತಕ ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನ..! Read More »

ಕೆಎಸ್‌ಆರ್‌ಟಿಸಿ ಬಸ್‌ ಕಿಟಕಿಯಲ್ಲಿ ಮಹಿಳೆ ತಲೆ ಲಾಕ್..!ಕೆಲ ಕಾಲ ಮಹಿಳೆ ಪರದಾಟ

ಸಮಗ್ರ ನ್ಯೂಸ್: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆ ಲಾಕ್‌ ಆದ ಘಟನೆ ನಡೆದಿದೆ. ಕಿಟಿಕಿಯಿಂದ ತಲೆಹೊರ ಹಾಕಿದ್ದಾರೆ. ಆಗ ತಲೆ ಸಿಕ್ಕಿಸಿಕೊಂಡಿದೆ. ಇದರ ಪರಿಣಾಮ ಮಹಿಳೆ ಕೆಲಕಾಲ ಪರದಾಡುವಂತಾಯಿತು. ಈ ಮಹಿಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಆಗ ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್‌ ಹಿಂದಕ್ಕೆ ಬಾರದೇ ಅಲ್ಲೆ ಲಾಕ್‌ ಆಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲೆ ತಲೆ ಲಾಕ್ ಆಗಿತ್ತು. ಮಹಿಳೆಯ ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ಕಿಟಕಿಯಲ್ಲಿ ಮಹಿಳೆ ತಲೆ ಲಾಕ್..!ಕೆಲ ಕಾಲ ಮಹಿಳೆ ಪರದಾಟ Read More »

ಪುತ್ತೂರು: ಕರ್ನಾಟಕದ ಆರ್ಥಿಕ ಸ್ಥಿತಿ, ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ| ಸಂಜೀವ ಮಠಂದೂರು

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ ಆಗಿಲ್ಲ. ಅಂಗನವಾಡಿ ಕಟ್ಟಡ ಬಿಡಿ ದುರಸ್ಥಿಗೂ ಹಣವಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನವಿಲ್ಲ ಹೀಗೆ ಕರ್ನಾಟಕದ ಆರ್ಥಿಕ ಸ್ಥಿತಿ ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಒಂದು ವರ್ಷದಲ್ಲಿ ಎನೂ ಮಾಡಿಲ್ಲ ಎಂಬುದಕ್ಕೆ ಹಲವು ಉದಾಹರಣೆ ಇದೆ. ಇವತ್ತು ಪುತ್ತೂರಿನಲ್ಲಿ

ಪುತ್ತೂರು: ಕರ್ನಾಟಕದ ಆರ್ಥಿಕ ಸ್ಥಿತಿ, ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಹಂತಕ್ಕೆ ತಲುಪಿದೆ| ಸಂಜೀವ ಮಠಂದೂರು Read More »

ಮುಂದಿನ ವರ್ಷದಿಂದ ಎಸ್ಎಸ್ಎಲ್ ಸಿ ಗ್ರೇಸ್ ಮಾರ್ಕ್ಸ್ ರದ್ದತಿಗೆ ಸಿಎಂ ಸೂಚನೆ

ಸಮಗ್ರ ನ್ಯೂಸ್: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗ್ರೇಸ್ ಮಾರ್ಕ್ ಅನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದು ಮಾಡುವಂತೆ ಸಿಎಂ ಸಿದ್ಧರಾಮಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಚರ್ಚೆ ನಡೆಯಿತು.

ಮುಂದಿನ ವರ್ಷದಿಂದ ಎಸ್ಎಸ್ಎಲ್ ಸಿ ಗ್ರೇಸ್ ಮಾರ್ಕ್ಸ್ ರದ್ದತಿಗೆ ಸಿಎಂ ಸೂಚನೆ Read More »

ಬೀದರ್: ಬಿರುಗಾಳಿ ಸಹಿತ ಮಳೆ: ಮಹಾದ್ವಾರ ಕುಸಿತ

ಸಮಗ್ರ ನ್ಯೂಸ್ : ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಎರಡು ದಶಕಗಳಷ್ಟು ಹಳೆಯದಾದ ಕಬ್ಬಿಣದ ಬಸವ ಮಹಾದ್ವಾರ ಶಿಥಿಲಗೊಂಡಿತ್ತು. ಇದನ್ನು ಅರಿತಿದ್ದ ಪ್ರಯಾಣಿಕರು, ಸಾರ್ವಜನಿಕರು ಬಿರುಗಾಳಿ ಸಹಿತ ಮಳೆ ಆರಂಭವಾಗುತ್ತಲೇ ಹೋಟೆಲ್ ಸೇರಿದಂತೆ ಇತರ ಸ್ಥಳಗಳಲ್ಲಿ ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದರು. ಹಾಗಾಗಿ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವಕೀಲ ಮಹೇಶ ರಾಚೋಟೆ ತಿಳಿಸಿದರು.

ಬೀದರ್: ಬಿರುಗಾಳಿ ಸಹಿತ ಮಳೆ: ಮಹಾದ್ವಾರ ಕುಸಿತ Read More »