May 2024

ಬೆಳ್ತಂಗಡಿ: ‘ಕಾರ್ಯಕರ್ತರ ತಂಟೆಗೆ ಬಂದ್ರೆ ಪೊಲೀಸರ ಕಾಲರ್ ಹಿಡಿಯಲೂ ರೆಡಿ’| ಖಾಕಿಗೆ ಆವಾಜ್ ಹಾಕಿದ ಶಾಸಕ ಹರೀಶ್ ಪೂಂಜಾ!!

ಸಮಗ್ರ ನ್ಯೂಸ್: ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೆ ಪೊಲೀಸರ ಕಾಲರ್ ಹಿಡಿಯಲೂ ರೆಡಿ ಎಂದು ಬೆಳ್ತಂಗಡಿ ಶಾಸಕ (BJP MLA) ಹರೀಶ್ ಪೂಂಜಾ(harish poonja) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಅವರು, ‘ದಕ್ಷಿಣ ಕನ್ನಡ ಎಸ್‍ಪಿಗೆ ತಲೆಯಲ್ಲಿ ಕೂದಲು ಇಲ್ಲಾಂತ ಮಾತ್ರ ಅಂದ್ಕೊಂಡಿದ್ದೆ, ಈಗ ನೋಡಿದ್ರೆ ಬುದ್ಧಿನೂ ಇಲ್ಲ. ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಇದೇ ವೇಳೇ ಅವರ, […]

ಬೆಳ್ತಂಗಡಿ: ‘ಕಾರ್ಯಕರ್ತರ ತಂಟೆಗೆ ಬಂದ್ರೆ ಪೊಲೀಸರ ಕಾಲರ್ ಹಿಡಿಯಲೂ ರೆಡಿ’| ಖಾಕಿಗೆ ಆವಾಜ್ ಹಾಕಿದ ಶಾಸಕ ಹರೀಶ್ ಪೂಂಜಾ!! Read More »

ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ| ಬಂಟ್ವಾಳ ಮೂಲದ ಇಬ್ಬರು ದಾರುಣ ಸಾವು

ಸಮಗ್ರ ನ್ಯೂಸ್: ಶಿರಾಡಿ ಘಾಟ್ ವ್ಯಾಪ್ತಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇನ್ನೋವಾ ಹಾಗೂ ಕಂಟೈನರ್ ಒಂದರ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಟ್ವಾಳ ಮೂಲದ ಇಬ್ಬರು ಸಾವನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರನಹಳ್ಳಿಯಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಶಿರಾಡಿ ಘಾಟಿ್ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ 6.30ರ ಸಮಯದಲ್ಲಿ ಘಟನೆ ಸಂಭವಿಸಿದೆ. ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ

ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ| ಬಂಟ್ವಾಳ ಮೂಲದ ಇಬ್ಬರು ದಾರುಣ ಸಾವು Read More »

ಇಂದು (ಮೇ.21) ದ್ವಿತೀಯ ಪಿಯುಸಿ‌ ಪರೀಕ್ಷೆ -೨ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯುಸಿ-2 ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಇಲಾಖೆಯು ವೆಬ್‌ ಸೈಟ್‌ ನಲ್ಲಿ https://karresults.nic.in ಫಲಿತಾಂಶ ಲಭ್ಯವಾಗಲಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ಹಂಚಿಕೊಂಡಿದ್ದು, 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ದಿನಾಂಕ: 29-04-2024 ರಿಂದ 16-05-2024 ರವರೆಗೆ ನಡೆಸಲಾಯಿತು, ಇದರ ಫಲಿತಾಂಶವನ್ನು ದಿನಾಂಕ:21-05-2024ರ ಮಧ್ಯಾಹ್ನ: 3.00 ಗಂಟೆಗೆ NIC ವೆಬ್‌ಸೈಟ್ https://karresults.nic.in ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಇಂದು (ಮೇ.21) ದ್ವಿತೀಯ ಪಿಯುಸಿ‌ ಪರೀಕ್ಷೆ -೨ ಫಲಿತಾಂಶ ಪ್ರಕಟ Read More »

ಕೋವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ‌ನೀಡಿದವರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ICMR

ಸಮಗ್ರ ನ್ಯೂಸ್: ವಯಸ್ಕರು ಮತ್ತು ಹದಿಹರೆಯದವರಲ್ಲಿ ಕೋವಾಕ್ಸಿನ್ ನ ದೀರ್ಘಕಾಲೀನ ಸುರಕ್ಷತಾ ವಿಶ್ಲೇಷಣೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ಬಿಎಚ್ ಯು ಅಧ್ಯಯನವನ್ನು ಅದರ ಕಳಪೆ ವಿಧಾನ ಮತ್ತು ವಿನ್ಯಾಸಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ತಳ್ಳಿಹಾಕಿದೆ ಮತ್ತು ಲೇಖನವು ಪತ್ರಿಕೆಯಲ್ಲಿ ಐಸಿಎಂಆರ್ ಅನ್ನು ತಪ್ಪಾಗಿ ಮತ್ತು ದಾರಿತಪ್ಪಿಸುತ್ತದೆ ಎಂದು ಹೇಳಿದೆ. ಐಸಿಎಂಆರ್ ಮಹಾನಿರ್ದೇಶಕ ಡಾ.ರಾಜೀವ್ ಬಹ್ಲ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು) ಅಧ್ಯಯನವನ್ನು ಕಳಪೆಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಣಾಯಕ ನ್ಯೂನತೆಗಳನ್ನು ಹೊಂದಿದೆ ಎಂದು

ಕೋವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ‌ನೀಡಿದವರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ICMR Read More »

ಅಪ್ರಾಪ್ತ ಸಹೋದರಿಯನ್ನು ಗರ್ಭಿಣಿಯನ್ನಾಗಿಸಿದ ಸಹೋದರರು| ಪೈಶಾಚಿಕ ಕೃತ್ಯ ಎಸಗಿದವರ ಬಂಧನ

ಸಮಗ್ರ ನ್ಯೂಸ್: ತಮ್ಮ 14 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಉತ್ತರಪ್ರದೇಶದ ಗಾಜೀಯಾಬಾದ್ ಪೊಲೀಸರು ಬಂಧಿಸಿದ್ದಾರೆ. ತಿಲಾ ಮೋರ್ಹ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಭಾನುವಾರ ಸಹೋದರರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ ಇಬ್ಬರು ಸಹೋದರರು ತಮ್ಮ ಸಹೋದರಿ 8 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಕಳೆದ ಒಂದು ವರ್ಷದಿಂದ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದು, ಈ ಕಾರಣದಿಂದ ಆಕೆ ಗರ್ಭಿಣಿಯಾಗಿದ್ದಳು. ಶನಿವಾರ ಅಪ್ರಾಪ್ತ ಬಾಲಕಿಗೆ ಹೊಟ್ಟೆನೋವು

ಅಪ್ರಾಪ್ತ ಸಹೋದರಿಯನ್ನು ಗರ್ಭಿಣಿಯನ್ನಾಗಿಸಿದ ಸಹೋದರರು| ಪೈಶಾಚಿಕ ಕೃತ್ಯ ಎಸಗಿದವರ ಬಂಧನ Read More »

ಹವಾಮಾನ ವರದಿ| ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ, ಶಿವಮೊಗ್ಗ, ಚಿತ್ರದುರ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡದಲ್ಲೂ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೊಷಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗಲಿದ್ದು, ಮೇ 24ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಯಲ್ಲಾಪುರ, ಎಚ್​ಡಿಕೋಟೆ, ಕೊಳ್ಳೇಗಾಲ, ಸಿರಾ, ಯುಗಟಿಯಲ್ಲಿ ಹೆಚ್ಚು ಮಳೆಯಾಗಿದೆ. ಹೊನ್ನಾವರ, ದೇವನಹಳ್ಳಿ, ಶ್ರವಣಬೆಳಗೊಳ, ಭಾಗಮಂಡಲ, ಕಿರವತ್ತಿ, ಮಂಗಳೂರು, ಹಗರಿಬೊಮ್ಮನಹಳ್ಳಿ, ಹೊಸದುರ್ಗಾ, ಚನ್ನರಾಯಪಟ್ಟಣ, ಶಿವಮೊಗ್ಗ, ದಾವಣಗೆರೆ,

ಹವಾಮಾನ ವರದಿ| ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ Read More »

ಉಡುಪಿ: ಟಿಸಿ ಕೊಟ್ಟಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಟಿಸಿ ಕೊಟ್ಟಿಲ್ಲವೆಂದು ಬೇಸರದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೊನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದ್ದು ಈತ ಉತ್ತೀರ್ಣನಾಗಿದ್ದ. ಇವನು ಬೈಂದೂರು ಸರ್ಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ಆದರೆ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ನಿತಿನ್‌ ಆಚಾರಿ, ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ಶಾಲೆಗೆ ಹೋಗಿದ್ದ. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬೈದಿದ್ದರಿಂದ ಬೇಸರಗೊಂಡು ಡೆತ್ ನೋಟ್

ಉಡುಪಿ: ಟಿಸಿ ಕೊಟ್ಟಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ Read More »

ಇಬ್ರಾಹಿಂ ರೈಸಿ ನಿಧನ/ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖರ್ ನೇಮಕ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿರುವ ಹಿನ್ನಲೆಯಲ್ಲಿ ಇರಾನ್ ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖರ್ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೋಮವಾರ ಈ ಘೋಷಣೆ ಮಾಡಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮಿರ್ ಬೊಲ್ಲಾಹಿಯಾನ್, ಪೂರ್ವ ಅರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರನ್ನು ಹೊತ್ತ ಹೆಲಿಕಾಪ್ಟರ್ ಭಾನುವಾರ

ಇಬ್ರಾಹಿಂ ರೈಸಿ ನಿಧನ/ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖರ್ ನೇಮಕ Read More »

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ನ ಪಡೆದುಕೊಂಡ ನಂತರ ಮೊದಲ ಬಾರಿಗೆ ಭಾರತದಲ್ಲಿ ಮತದಾನ ಮಾಡಿದ್ದಾರೆ. ನಂತರ ಮಾತನಾಡಿದ ಅಕ್ಷಯ್, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದಿದ್ದಾರೆ. ಕೆನಡಾ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಭಾರತದ ಪೌರತ್ನ ಪಡೆದುಕೊಂಡಿದ್ದರು.

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್ Read More »

ಸಂಸತ್ ಭವನಕ್ಕೆ ಮೇ 20ರಿಂದ ಬರೋಬ್ಬರಿ 3300 ಸಿಬ್ಬಂದಿ ಭದ್ರತೆ/ ಭದ್ರತಾ ಹೊಣೆ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ(ಸಿಐಎಸ್‍ಎಫ್)ದ ಹೆಗಲಿಗೆ

ಸಮಗ್ರ ನ್ಯೂಸ್: ಸಂಸತ್ ಭವನಕ್ಕೆ ಈವರೆಗೆ ಭದ್ರತೆ ಒದಗಿಸುತ್ತಿದ್ದ 1400 ಸಿಆರ್‍ಪಿಎಫ್ ಸಿಬ್ಬಂದಿಯನ್ನು ಸಂಪೂರ್ಣ ಹಿಂಪಡೆದು, ಮೇ 20ರಿಂದ ಬರೋಬ್ಬರಿ 3300 ಸಿಐಎಸ್‍ಎಫ್ (ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ) ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. , ಹೊಸ ಹಾಗೂ ಹಳೆಯ ಸಂಸತ್ ಭವನದಲ್ಲಿ ಭಯೋತ್ಪಾದನೆ ನಿಗ್ರಹ ಚಟುವಟಿಕೆ, ಸುರಕ್ಷತಾ ತಪಾಸಣೆ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಜವಾಬ್ದಾರಿಯನ್ನು ಸಿಐಎಸ್‍ಎಫ್‍ಗೆ ವಹಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ಸಂಸತ್ ಭವನದೊಳಗೆ ಕಿಡಿಗೇಡಿಗಳು ನುಸುಳಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣದ ಬಳಿಕ ಭದ್ರತಾ

ಸಂಸತ್ ಭವನಕ್ಕೆ ಮೇ 20ರಿಂದ ಬರೋಬ್ಬರಿ 3300 ಸಿಬ್ಬಂದಿ ಭದ್ರತೆ/ ಭದ್ರತಾ ಹೊಣೆ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ(ಸಿಐಎಸ್‍ಎಫ್)ದ ಹೆಗಲಿಗೆ Read More »