Ad Widget .

ನಷ್ಟದಲ್ಲಿರುವ ಪೇಟಿಎಂ/ ಖರೀದಿಗೆ ಮುಂದಾದರೇ ಅದಾನಿ?

ಸಮಗ್ರ ನ್ಯೂಸ್: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್ ನ ಮಾತೃ ಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‍ನಲ್ಲಿ ಷೇರು ಖರೀದಿಸಲು ಮುಂದಾಗಿದ್ದು, ಈ ಕುರಿತು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ. ಮಂಗಳವಾರ ಅಹಮದಾಬಾದ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಅದಾನಿ ಅವರು ಶರ್ಮಾರನ್ನು ಭೇಟಿ ಮಾಡಿದರು. ಈ ವೇಳೆ ಒಪ್ಪಂದದ ಸ್ವೂಪದ ಬಗ್ಗೆ ಮಾತುಕತೆ ನಡೆಯತು ಎಂದು ಮೂಲಗಳು ತಿಳಿದು ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳು ಶೇ.5ರಷ್ಟು ಜಿಗಿತ ಕಂಡಿವೆ. ಅದಾನಿಯಂಥ ದೊಡ್ಡ ಉದ್ಯಮಿ ಪೇಟಿಎಂ ಖರೀದಿಗೆ ಯತ್ನ ನಡೆಸಿದ್ದಾರೆ ಎಂಬ ವರದಿಗಳು, ಷೇರುಪೇಟೆಯಲ್ಲಿ ನಷ್ಟದಲ್ಲಿರುವ ಕಂಪನಿಗೆ ಟಾನಿಕ್ ನೀಡಿದೆ.

Ad Widget . Ad Widget . Ad Widget .

ಆದರೆ ಈ ವರದಿಗಳ ಬೆನ್ನಲ್ಲೇ ಅದಾನಿ ಹಾಗೂ ಪೇಟಿಎಂ ಕಂಪನಿಗಳು ಪ್ರತ್ಯೇಕ ಹೇಳಿಕೆ ನೀಡಿ, ಇವು ಕೇವಲ ಊಹಾಪೋಹದ ವರದಿಗಳು. ಉಭಯ ಕಂಪನಿಗಳ ಮುಖ್ಯಸ್ಥರ ನಡುವೆ ಪಾಲು ಖರೀದಿ ಅಥವಾ ಮಾರಾಟದ ಬಗ್ಗೆ ಯಾವುದೇ ಮಾತುಕತೆ ನಡದಿಲ್ಲ ಎಂದು ಹೇಳಿವೆ.

Leave a Comment

Your email address will not be published. Required fields are marked *