ಸಮಗ್ರ ನ್ಯೂಸ್: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಧ್ವನಿ ಸಂದೇಶಗಳ ಕಾಲಾವಧಿಯನ್ನು ಹೆಚ್ಚಿಸಿ ಹೊಸ ಅಪ್‍ಡೇಟ್ ನೀಡಿದೆ.
ವಾಟ್ಸ್ ಆಪ್ ಆವೃತ್ತಿಯು ಬಳಕೆದಾರರಿಗೆ ಪ್ರಸ್ತುತ ಕೇವಲ 30 ಸೆಕೆಂಡ್ ಗಳಷ್ಟು ಅವಧಿಯ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು.
ಒಂದು ನಿಮಿಷದವರೆಗೆ ಧ್ವನಿ ಸಂದೇಶಗಳನ್ನು ಕಳುಹಿಸುವ ವಿಧಾನವನ್ನು ಬೆಂಬಲಿಸಲು ವಾಟ್ಸ್ ಆಪ್ ನ ಕಾರ್ಯವಿಧಾನಗಳನ್ನು ಅಪ್‍ಗ್ರೇಡ್ ಮಾಡಲಾಗಿದೆ. ಇದು ಇದು ಹಿಂದಿನ ಧ್ವನಿ ಸಂದೇಶ ಕಳುಹಿಸುವ ಮಿತಿಗಿಂತ ದ್ವಿಗುಣವಾಗಿದೆ ಎಂದು ತಿಳಿಸಲಾಗಿದೆ
ಇನ್ನು ಮುಂದೆ ಧ್ವನಿ ರೂಪದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಬಯಸುವ ಬಳಕೆದಾರರಿಗೆ ವಿಸ್ತ್ರತ ಅವಧಿಯ ಸಂದೇಶ ಕಳುಹಿಸಲು ಇದು ಪ್ರಯೋಜನಕಾರಿಯಾಗಲಿದೆ. ಇದರಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಆಡಿಯೋ ರೆಕಾಡಿರ್ಂಗ್ಗಳನ್ನು ಹಲವು ಭಾಗಗಗಳಾಗಿ ವಿಭಜಿಸಬೇಕಾಗಿಲ್ಲ. ದೀರ್ಘಾವಧಿಯಲ್ಲಿ ಇದು ಲಭ್ಯವಾಗುವುದರಿಂದ ಸಮಯವನ್ನು ಉಳಿಸಲು ಮತ್ತು ಸಂವಹನ ಪ್ರೊಸೆಸರ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ.