Ad Widget .

ಇಬ್ರಾಹಿಂ ರೈಸಿ ನಿಧನ/ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖರ್ ನೇಮಕ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿರುವ ಹಿನ್ನಲೆಯಲ್ಲಿ ಇರಾನ್ ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖರ್ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೋಮವಾರ ಈ ಘೋಷಣೆ ಮಾಡಿದ್ದಾರೆ.

Ad Widget . Ad Widget .

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮಿರ್ ಬೊಲ್ಲಾಹಿಯಾನ್, ಪೂರ್ವ ಅರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರನ್ನು ಹೊತ್ತ ಹೆಲಿಕಾಪ್ಟರ್ ಭಾನುವಾರ ದೇಶದ ವಾಯುವ್ಯದ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು.

Ad Widget . Ad Widget .

ರೈಸಿ ಅವರ ನಿಧನಕ್ಕೆ ಸಂತಾಪ ಸಂದೇಶದಲ್ಲಿ ಖಮೇನಿ ಅವರು ಉಪರಾಷ್ಟ್ರಪತಿಗಳು ಮಧ್ಯಂತರ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದರು.

Leave a Comment

Your email address will not be published. Required fields are marked *