ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ಕೊಹ್ಲಿ

ಸಮಗ್ರ ನ್ಯೂಸ್ : ವಿರಾಟ್ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್ ಆಗಿದೆ.

Ad Widget ... ..

ಪಾಕ್ ಪರ್ವತಾರೋಹಿ ಶೆಹ್ರೋಜ್ ಕಾಶಿಫ್ ಅವರು ಟೀಂ ಇಂಡಿಯಾದ ಸ್ಫೋಟಕ ಆಟಗಾರ ಕೊಹ್ಲಿ ಅವರನ್ನು ವಿಡಿಯೋ ಕಾಲ್ನಲ್ಲಿ ಭೇಟಿಯಾದರು.

Ad Widget

ಇಬ್ಬರು ಸಂಭಾಷಣೆ ನಡೆಸಿದ್ದು, ಈ ವೇಳೆ ಕೊಹ್ಲಿ ‘ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ. ಈಗಾಗಲೇ ಎಲ್ಲೂ ಭೇಟಿ ನೀಡಲು ಪ್ರಾರಂಭಿಸಿದ್ದಾರೆ’ ಎಂದು ಹೇಳಿದ್ದಾರೆ. ಅದಕ್ಕೆ ಶೆಹ್ರೋಜ್ ಕಾಶಿಫ್ ನಿಮಗೆ ಸದಾ ತೆರೆದಿರುತ್ತದೆ ಎಂದು ಹೇಳಿದ್ದಾರೆ.

ಶೆಹ್ರೋಜ್ ಕಾಶಿಫ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೊಹ್ಲಿ ಜೊತೆಗಿನ ವಿಡಿಯೋ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. 2022ರಲ್ಲಿ ನೇಪಾಳದಲ್ಲಿರುವ ಭಾರತೀಯ ಪ್ರಜೆಯ ಮೂಲಕ ಕೊಹ್ಲಿ ಸಂಪರ್ಕ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಆದರೆ ರಾಜಕೀಯ ವಿಚಾರವಾಗಿ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅವರ ಹೆಸರು ಹೇಳಲು ಕಾಶಿಫ್ ಹಿಂದೇಟು ಹಾಕಿದ್ದಾರೆ.

ಶೆಹ್ರೋಜ್ ಕಾಶಿಫ್, ತಮಾಷೆಯಾಗಿ ಭಾರತೀಯ ಮೂಲದ ವ್ಯಕ್ತಿ ಜೊತೆ ಕೊಹ್ಲಿಯೊಂದಿಗೆ ಮಾತನಾಡಬೇಕು ಎಂದು ಹೇಳಿದ್ದರಂತೆ. ಆದರೆ ಅವರು ಸಂಪರ್ಕ ಸಾಧಿಸಲು ಸಹಾಯ ಮಾಡಿದರು. ಪಾಕಿಸ್ತಾನದವನಾಗಿರುವ ನಾನು ಕೊಹ್ಲಿಯನ್ನು ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *