Ad Widget .

ಕಾಂಗ್ರೆಸ್‍ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ

ಸಮಗ್ರ ನ್ಯೂಸ್: ಕಾಂಗ್ರೆಸ್‍ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ವಿವಾದಿತ ಹೇಳಿಕೆಗಳ ಸರಮಾಲೆ ಬೆನ್ನಲ್ಲೇ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಈ ಬಗ್ಗೆ ಟ್ವೀಟರ್‍ನಲ್ಲಿ ಘೋಷಣೆ ಮಾಡಿದ್ದಾರೆ.

Ad Widget . Ad Widget .

ತಮ್ಮ ಸ್ವಂತ ಇಚ್ಛೆಯಿಂದ ಸ್ಯಾಮ್ ಪಿತ್ರೋಡಾ ಅವರು ಇಂಡಿಯನ್ ಓವರ್‍ಸೀಸ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಜೈರಾಂ ಹೇಳಿದ್ದಾರೆ.

Ad Widget . Ad Widget .

ತಂದೆ ಮೃತನಾದ ಬಳಿಕ ಆತನ ಶೇ.55ರಷ್ಟು ಆಸ್ತಿಯನ್ನು ಸರ್ಕಾರಕ್ಕೆ ನೀಡುವ ಕಾಯ್ದೆ ಅಮೆರಿಕದಲ್ಲಿದೆ. ಅದೇ ಮಾದರಿಯಲ್ಲಿ ಭಾರತದಲ್ಲೂ ಪಿತ್ರಾರ್ಜಿತ ಆಸ್ತಿ ತೆರಿಗೆ ಕಾಯ್ದೆಯನ್ನು ಭಾರತದಲ್ಲಿ ಜಾರಿ ಮಾಡಲು ಚಿಂತನೆ ನಡೆಸಬೇಕು ಎಂದು ಇತ್ತೀಚಗೆ ಪಿತ್ರೋಡಾ ಹೇಳಿದ್ದರು. ಅದು ರಾಜಕೀಯ ಬಿರುಗಾಳಿ ಎಬ್ಬಿಸಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು.

ಇದರ ಬೆನ್ನಲ್ಲೇ, ಈಗ ದಕ್ಷಿಣ ಭಾರತೀಯರು ಆಫ್ರಿಕನ್ನರ ರೀತಿ, ಈಶಾನ್ಯ ಭಾರತದ ಜನರು ಚೀನೀಯರ ರೀತಿ ಕಾಣುತ್ತಾರೆ ಎಂಬ ವರ್ಣಕ್ಕೆ ಸಂಬಂಧಿಸಿದ ಹೇಳಿಕೆ ನೀಡಿದ್ದಾರೆ. ಇದು ವರ್ಣದ್ವೇಷಕ್ಕೆ ಸಂಬಂಧಿಸಿದ ಹೇಳಿಕೆ ಎಂದು ಬಿಜೆಪಿ ಮುಗಿಬಿದ್ದಿದೆ. ಇದರ ಬೆನ್ನಲ್ಲೇ ಪಿತ್ರೋಡಾ ರಾಜೀನಾಮೆ ಘೋಷಣೆ ಆಗಿದೆ.

Leave a Comment

Your email address will not be published. Required fields are marked *