Ad Widget

ಬೆಂಗಳೂರಿನ ಕಾವೇರಿ ಚಿತ್ರಮಂದಿರ ಇನ್ನೂ ನೆನಪು ಮಾತ್ರ| 50 ವರ್ಷ ಪೂರೈಸಿ ಇದೀಗ ನೆಲಸಮ

ಸಮಗ್ರ ನ್ಯೂಸ್: ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಒಂದಾದ ಜನಪ್ರಿಯ ‘ಕಾವೇರಿ’ ಚಿತ್ರಮಂದಿರ ನೆಲಸಮ ಆಗಿದೆ. ಸತತ 50 ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್​ನಲ್ಲಿ ಹಲವಾರು ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಆದರೆ ಅದೆಲ್ಲವೂ ಇನ್ನೂ ನೆನಪು ಮಾತ್ರ.

Ad Widget . Ad Widget . Ad Widget . Ad Widget . Ad Widget . Ad Widget

ಸರಿಯಾದ ಬಿಸ್ನೆಸ್​ ಇಲ್ಲದ ಕಾರಣ ಈ ಚಿತ್ರಮಂದಿರವನ್ನು ಮುಚ್ಚಲಾಗಿದೆ. ಕೊರೊನಾ ಲಾಕ್​ಡೌನ್​ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕಾರಣದಿಂದ ‘ಕಾವೇರಿ’ ಚಿತ್ರಮಂದಿರವನ್ನು ನಡೆಸುವುದು ಮಾಲಿಕರಿಗೆ ಕಷ್ಟ ಆಯಿತು. ಹಾಗಾಗಿ ಚಿತ್ರಮಂದಿರವನ್ನು ಕೆಡವಿ ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್​ ಕಟ್ಟುವ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿಯು ಇದೆ.

Ad Widget . Ad Widget .

ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಇರುವ ಈ ಚಿತ್ರಮಂದಿರಕ್ಕೆ ಅಮಿತಾಭ್​ ಬಚ್ಚನ್​, ಯಶ್​ ಚೋಪ್ರಾ, ರಜನಿಕಾಂತ್​, ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದ ಸ್ಟಾರ್​ಗಳು ಇಲ್ಲಿಗೆ ಭೇಟಿ ನೀಡಿದ್ದರು. ಇಂಥ ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾ 100 ಡೇಸ್​ ಪ್ರದರ್ಶನ ಕಂಡಾಗ ವಿಶೇಷ ಸಂಭ್ರಮ ಮನೆ ಮಾಡಿರುತ್ತಿತ್ತು. ಆ ಎಲ್ಲ ಸಿನಿಮಾಗಳ ಸ್ಮರಣಿಕೆ​ಗಳನ್ನು ಚಿತ್ರಮಂದಿರದ ಶೋಕೇಸ್​ನಲ್ಲಿ ಇರಿಸಲಾಗುತ್ತಿತ್ತು. 1974ರ ಜನವರಿ 11 ರಂದು ರಾಜ್‌ಕುಮಾರ್ ಅವರ ಬಂಗಾರದ ಪಂಜರ ಸಿನಿಮಾದ ಪ್ರದರ್ಶನದೊಂದಿಗೆ ಉದ್ಘಾಟನೆಗೊಂಡ ಕಾವೇರಿ ಥಿಯೇಟರ್, ಇದೇ ವರ್ಷದ ಜನವರಿಯಲ್ಲಿ ತನ್ನ 50 ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತ್ತು. ಆದರೆ ಕಾವೇರಿ ಚಿತ್ರಮಂದಿರ ಇನ್ನು ನೆನಪು ಮಾತ್ರ.

Leave a Comment

Your email address will not be published. Required fields are marked *