Ad Widget .

ಹುಬ್ಬಳ್ಳಿ: ಕೆಲ ಬಿಜೆಪಿ ಕಾರ್ಯಕರ್ತರಿಂದ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ

ಸಮಗ್ರ ನ್ಯೂಸ್ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಚುನಾವಣಾ ಆಯೋಗದ ನಿಯಮಗಳನ್ನ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ತಸ್ವೀರ್ ಎಂಬುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತಷ್ಟು ವಿಡಿಯೋಗಳು ವೈರಲ್ ಆಗಿವೆ.

Ad Widget . Ad Widget .

ಗೌಪ್ಯ ಮತದಾನ ಮಾಡಬೇಕೆಂದು ನಿಯಮವಿದ್ದರೂ ನಿಯಮಗಳನ್ನು ಉಲ್ಲಂಘನೆ ಮಾಡಿದ ಕೆಲ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿರುವ ವಿಡಿಯೋ ವೈರಲ್ ಮಾಡಿದ್ದಾರೆ.

Ad Widget . Ad Widget .

ಮತಗಟ್ಟೆಯಲ್ಲಿ ಮೊಬೈಲ್ ಉಪಯೋಗಕ್ಕೆ ಅವಕಾಶ ಇಲ್ಲ. ಆದರೂ ಮೊಬೈಲ್ನ್ನ ಮತಗಟ್ಟೆಗೆ ತೆಗೆದುಕೊಂಡ ಹೋಗಿ ಮತದಾನವನ್ನ ಬಹಿರಂಗ ಮಾಡಿದ ಕೆಲ ಬಿಜೆಪಿಯ ಕಾರ್ಯಕರ್ತರು ಹಾಗೂ ಮತದಾರರಾದ ಪ್ರತಿಕ್ ಹಬೀಬ್, ಗಣೇಶ್ ಡೊಂಗಡೆ, ಸುನಿಲ್ ಬಾಕಳೆ, ಅಕ್ಷಯ ಮಗಜಿಕೊಂಡಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ ವಿಡಿಯೋ ಮಾಡಿಕೊಂಡು ತಮ್ಮ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟ್ಸ್ ಹಾಕಿಕೊಂಡಿದ್ದು, ಇವರ ವಿರುದ್ಧ ಇದೀಗ ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *