Ad Widget .

ಚಾಮರಾಜನಗರ: ದಾಹ ನೀಗಿಸಲು ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು

ಸಮಗ್ರ ನ್ಯೂಸ್ : ಜಿಲ್ಲೆಯ ಮಲೇ ಮಹದೇಶ್ವರ ಬೆಟ್ಟದ ಹಾಡಿಯೊಂದರ ಸಮೀಪ ಆನೆಗಳ ಹಿಂಡೊಂದು ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯಲ್ಲಿ ದಾಹ ತೀರಿಸಿಕೊಂಡು ಕಾಡಿಗೆ ಹಿಂದಿರುಗಿದ ಘಟನೆ ನಡೆದಿದೆ.

Ad Widget . Ad Widget .

ಸುಡು ಬಿಸಿಲ ಬೇಗೆಗೆ ಕಾಡಿನಲ್ಲಿ ನೀರಿಲ್ಲದೆ ವನ್ಯಪ್ರಾಣಿಗಳ ಐರಾಣಾಗಿ ಹೋಗಿದ್ದು ಇತಿಹಾಸ ಪ್ರಸಿದ್ಧ ಮಲೇ ಮಹದೇಶ್ವರ ಬೆಟ್ಟದ ಕಾಡಂಚಿನ ಸಮೀಪದ ಹಾಡಿಯೊಂದರ ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಯ ಸಮೀಪ ಬಂದ ಕಾಡಾನೆ ಹಿಂಡು ನೀರನ್ನ ಕುಡಿದು ದಾಹ ತೀರಿಸಿಕೊಂಡಿವೆ.

Ad Widget . Ad Widget .

ಕಾಡಾನೆಗಳ ಹಿಂಡು ನೀರು ಕುಡಿಯುತ್ತಿರುವ ದ್ರಶ್ಯವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜನನಿಬಿಡ ಪ್ರದೇಶಕ್ಕೆ ಆಗಮಿಸಿದ್ದರೂ ಸಹ ಆನೆಗಳ ಹಿಂಡು ಯಾರಿಗೂ ತೊಂದರೆ ನೀಡದೆ ಕಾಡಿಗೆ ವಾಪಾಸ್ಸಾಗಿವೆ.

Leave a Comment

Your email address will not be published. Required fields are marked *