Ad Widget .

ಹರ್ಯಾಣದಲ್ಲಿ ಬಿಜೆಪಿಗೆ ಮುಖಭಂಗ| ಸೈನಿ ಸರ್ಕಾರಕ್ಕೆ ನೀಡಿದ್ದ ಬೆಂಬಲ‌ ವಾಪಸ್ ಪಡೆದ ಪಕ್ಷೇತರ ಶಾಸಕರು| ತೂಗುಯ್ಯಾಲೆಯಲ್ಲಿ ಹರ್ಯಾಣ ಸರ್ಕಾರ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಕಾವಿನ ನಡುವೆ ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ರಾಜ್ಯದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿರುವುದಾಗಿ ಮೂವರು ಪಕ್ಷೇತರ ಶಾಸಕರು ಮಂಗಳವಾರ ಘೋಷಿಸಿದ್ದಾರೆ.

Ad Widget . Ad Widget .

ಮೂವರು ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಅವರು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

Ad Widget . Ad Widget .

ಇದರಿಂದ ಸೈನಿ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಸರ್ಕಾರ ಪತನದ ಸನಿಹದಲ್ಲಿದ್ದು, ಕಾಂಗ್ರೆಸ್ ಅವಕಾಶ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Leave a Comment

Your email address will not be published. Required fields are marked *