Ad Widget .

ವಿಶ್ವ ನಗು ದಿನ- ಮೇ ೫

ಸಮಗ್ರ ನ್ಯೂಸ್: ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗು ದಿನ ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ.

Ad Widget . Ad Widget .

ಈ ದಿನದಂದು ಎಲ್ಲಾ ಜಾತಿ, ಧರ್ಮದ ಜನರು ಯಾವುದೇ ಮತ, ಭೇದವಿಲ್ಲದೆ, ಲಿಂಗ ಭೇದವಿಲ್ಲದೆ ವಯಸ್ಸಿನ ನಿರ್ಭಂದ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ಮನ ಬಿಚ್ಚಿ ನಗುತ್ತಾರೆ. ನಿಷ್ಕಲ್ಮಶವಾಗಿ ಮತ್ತು ವ್ಯಾಪಾರೀಕರಣವಿಲ್ಲದೆ ಮನ ಬಿಚ್ಚಿ ನಕ್ಕು ವಿಶ್ವಬಾತ್ರತ್ವ, ಸಹೋದರತ್ವ ಮತ್ತು ಶಾಂತಿಯ ಸಂಕೇತ ಎಂಬಂತೆ ಎಲ್ಲರೂ ಒಟ್ಟು ಸೇರಿ ನಕ್ಕು ಮನಸ್ಸನ್ನು ಹಗುರಾಗಿಸಲು ಪ್ರಯತ್ನಿಸಲಾಗುತ್ತದೆ. ಈ ಆಚರಣೆ ದಿನಾಂಕ ಜನವರಿ 11, 1998 ರಂದು ಭಾರತ ದೇಶದ ಬಾಂಬೆ ನಗರದಲ್ಲಿ ಆರಂಭವಾಯಿತು. ಸುಮಾರು 12000 ಮಂದಿ ಒಟ್ಟು ಸೇರಿ ನಕ್ಕಿದ್ದರು. ಭಾರತ ದೇಶದ ಡಾ|| ಮದನ್ ಕಟಾರಿಯಾ ಅವರು ಈ ನಗು ಯೋಗ ಆಂದೋಲನದ ರೂವಾರಿಯಾಗಿರುತ್ತದೆ. ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀಯುತರು ಈ ನಗು ಆಂದೋಲನವನ್ನು 1995 ರಿಂದಲೇ ನಡೆಸುತ್ತಿದ್ದು, ಸಾವಿರಾರು ನಗು ಕ್ಲಬ್‍ಗಳನ್ನು ಆರಂಭಿಸಿ ಜನರಲ್ಲಿ ನಗೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ನಗೆ ಆಂದೋಲನದ ಕೊಡುಗೆಯನ್ನು ಲಂಡನ್ ಟೈಮ್ಸ್ ಪತ್ರಿಕೆ ಗುರುತಿಸಿ ಅವರನ್ನು ಗುರು ಆಫ್ ಗಿಗ್ಲಿಂಗ್ ಎಂಬ ಬಿರುದು ನೀಡಿ ಗುರುತಿಸಿದೆ. ಒಟ್ಟಿನಲ್ಲಿ ನಗುವಿಂದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಹಾಗೂ ಜಾಗೃತಿ ಮೂಡಿಸಿ, ಜನರು ಹೆಚ್ಚು ಹೆಚ್ಚು ನಗುವಂತೆ ಮಾಡುವ ಸದುದ್ಧೇಶ ಈ ಆಚರಣೆ ಹಿಂದೆ ಇದೆ.

Ad Widget . Ad Widget .

ನಕ್ಕರೇಅದುವೇ ಸ್ವರ್ಗ

ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದುಕೂಡಾಒಂದು ಹಣ ಸಂಪಾದನೆಯ ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.ಎಂದು ಸುಂದರವಾದದಂತ ಪಂಕ್ತಿಗಳಿಂದ ಮನಬಿಚ್ಚಿ ನಿಷ್ಕಲ್ಮಶವಾಗಿ ಹೃದಯತುಂಬಿ ನಕ್ಕಲ್ಲಿ ಮನುಷ್ಯನಿಗೆಯಾವುದೇರೋಗ ಬರಲಿಕ್ಕಿಲ್ಲಎಂದು ತಿಳಿದವರು ಹೇಳುತ್ತಾರೆ.ಜಗತ್ತಿನಲ್ಲಿಉಚಿತವಾಗಿ ನಿರಯಾತವಾಗಿ ಸಿಗುವ ಒಂದೇ ವಸ್ತು ಎಂದರೆ ನಗು. ನಗು ಎನ್ನುವುದು ಸಾಂಕ್ರಾಮಿಕ ನಗುವಿನಿಂದಒಬ್ಬ ವ್ಯಕ್ತಿತನ್ನಜೊತೆಗಿರುವವರನ್ನುತನ್ನ ಮೋಡಿಗೆ ಬೀಳಿಸುವ ಪರಸ್ಪರಅನ್ಯೋನ್ಯತೆ ಬೆಳೆಸುವ ವಿಶ್ವಾಸ ವರ್ಧಿಸುವ ನವಚೈತನ್ಯ ಮೂಡಿಸುವಅದ್ಬುತ ಶಕ್ತಿ ನಗುವಿಗೆ ಇದೆ.
ನಾವು ಯಾಕಾಗಿ ನಗಬೇಕು ?

  1. ನಗು ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.
  2. ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮ ಗೊಳಿಸಬಹುದು.
  3. ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋ ವ್ಯಾಕುಲತೆಯನ್ನು ಶಮನ ಮಾಡಬಹುದು.
  4. ನಗು ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋ ಸ್ಥಿತಿಯನ್ನು ಉಚ್ಚಾಯ ಸ್ಥಿತಿಯಲ್ಲಿ ಇಡುತ್ತದೆ.
  5. ಧನಾತ್ಮಕ ಮತ್ತುಆಶಾದಾಯಕದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ.
  6. ನಗು ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತುಆಯಾಮವನ್ನು, ದಿಶೆಯನ್ನು ನೀಡುತ್ತದೆ.
  7. ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ದೃಪತಿಯನ್ನುಧೈರ್ಯವನ್ನು ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತದೆ.
  8. ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕವಾದ ದ್ರವ್ಯಗಳೂ ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.
  9. ನಮ್ಮ ಬದುಕಿಗೆ ನಗು ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ.
  10. ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜೊತೆಗಿದ್ದವರನ್ನು ಮತ್ತಷ್ಟು ಉಲ್ಲ್ಲಾಸಿತರನ್ನಾಗಿ ಮಾಡಿಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳನ್ನು ಅಂತ್ಯ ಮಾಡುತ್ತದೆ.ಒಟ್ಟಿನಲ್ಲಿ ನಗು ಎನ್ನುವುದುಉಚಿತವಾಗಿದೊರಕುವಔಷಧಿ.
    ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ.ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.ಮನಸ್ಸುಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡುರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಪರೋಕ್ಷವಾಗಿಕಾರಣವಾಗುತ್ತದೆ.ನಗುವುದರಿಂದ ಮಾನಸಿಕ ಒತ್ತಡಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.ಅದಕ್ಕಾಗಿಯೇ ನಗುವಿನಲ್ಲಿದೆ ಸ್ವರ್ಗ, ನಗಬಾರದೇಕೆ?ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ.

ನಗು ಎನ್ನುವುದುಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇತಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ.ಅಂತಹಾ ವ್ಯಕ್ತಿಗಳ ಜೊತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ ಬಂದು ಮಾನಸಿಕ ಒತ್ತಡಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗುನಗುತ್ತಾ ನೂರು ಕಾಲ ಬದುಕಬಹುದು.

ನಾವು ಬದುಕುತ್ತಿರುವ ಈಗೀನ ಲೆಕ್ಕಾಚಾರದಜಗತ್ತಿನಲ್ಲಿ ನಗಲೂ ಕೂಡಾ ವ್ಯಾಪಾರಿ ಮನೋಭಾವ ತಾಳುವಂತಹ ಪರಿಸ್ಥಿತಿ ಬಂದೊದಗಿದೆ.ಜೀವನಎನ್ನುವುದು ಬಹುದೊಡ್ಡ ಪ್ರಯಾಣ ಈ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಬರುವುದು ಸಹಜ, ನಮ್ಮಜೀವನವೇ ನಮಗೆ ಸವಾಲಾದಾಗ, ಜಟಿಲವಾದಾಗ, ಸಮಸ್ಯೆಯಾಗಿ, ಕಂಕಟುವಾಗಿ ನಾವು ತುಂಬಾಗಂಭೀರವಾಗಿ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತೇವೆ. ಎದುರಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮುಕ್ತ ಮನಸ್ಸಿನಿಂದ ನಿರ್ಮಲವಾಗಿ, ಸಮಾಧಾನದಿಂದ ಎದುರಿಸುವುದನ್ನು ಕಲಿತಾಗ ಸಮಸ್ಯೆಗಳೇ ಹೊಸತನ್ನು ಮಾಡಲು, ಕಲಿಯಲು ಪ್ರೇರೇಪಿಸುತ್ತದೆ. ನಗುನಗುತ್ತಾ ಇದ್ದರೆ ಜೀವನದಲ್ಲಿ ಬರುವಂತಹಾ ಎಂತಹುದೇ ಕಷ್ಟಗಳನ್ನು ನೀರಾಜಾಲವಾಗಿ ಎದುರಿಸಬಹುದು. ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವನ್ನು ಬದುಕಿನ ಹೊಸ ಚೈತನ್ಯವನ್ನು, ದಾರಿಯನ್ನು ತೋರುವ ಶಕ್ತಿ ನಗುವಿಗೆ ಖಂಡಿತಾಇದೆ. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ. ನಕ್ಕರೆಅದೇ ಸ್ವರ್ಗ, ನಗಬಾರದೇಕೆ ?

ಡಾ|| ಮುರಲೀ ಮೋಹನ್‍ಚೂಂತಾರು MDS,DNB,MOSRCSEd(U.K), FPFA, M.B.A
ಮೊ : 9845135787 [email protected]

Leave a Comment

Your email address will not be published. Required fields are marked *